ಸಂಸ್ಕಾರದಿಂದ ಸಂಸ್ಕøತಿ ಉತ್ತೇಜನಗೊಳ್ಳುತ್ತದೆ:ಗುಡಗುಂಟಿ
ತಾಳಿಕೋಟೆ:ಸೆ.21: ಸಂಸ್ಕಾರ ಕೊಡುವ ವೃತ್ತಿ ಎಂಬುದು ಶಿಕ್ಷಕ ವೃತ್ತಿಯಲ್ಲಿ ದೊರೆಯಲಿದೆ ಅಂತಹ ಶಿಕ್ಷಕ ವೃತ್ತಿ ನಮ್ಮೇಲ್ಲರಿಗೂ ದೊರೆತಿರುವದು ನಮ್ಮೇಲ್ಲರ ಸೌಭಾಗ್ಯ ಹಾಗೂ ಪುಣ್ಯವಾಗಿದೆ ಎಂದು ಸಂಗಮೇಶ್ವರ ಪ್ರೌಢ ಶಾಲೆಯ ಶಿಕ್ಷಕರಾದ ಎಸ್.ಸಿ.ಗುಡುಗುಂಟಿ ಅವರು ನುಡಿದರು.
ಶುಕ್ರವಾರರಂದು ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಬೆಂಗಳೂರ, ತಾಲೂಕಾ ಘಟಕ ತಾಳಿಕೋಟೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಮತ್ತು ಶಿಕ್ಷಕರ ದಿನಾಚರಣೆ ಅಂಗವಾಗಿ ಶ್ರೀ ವಿಠ್ಠಲ ಮಂದಿರದಲ್ಲಿ ಏರ್ಪಡಿಸಲಾದ ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರಧಾನ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭದಲ್ಲಿ ವಿಶೇಷ ಉಪನ್ಯಾಸಕರಾಗಿ ಆಗಮಿಸಿ ಮಾತನಾಡುತ್ತಿದ್ದ ಅವರು ಪ್ರಾಥಮಿಕ ಶಿಕ್ಷಣದಿಂದಲೇ ದೇಶದಲ್ಲಿ ಉನ್ನತ ಗೌರವ ದೊರೆಯಲಿದೆ ಅದುವೇ ಮುಂದೆ ಅದ್ಯಯನವಾಗುತ್ತದೆ ಮುಂದೆ ಸಾಹಿತ್ಯವಾಗಿ ಮಾರ್ಪಟ್ಟು ಸಂಸ್ಕøತಿ ಎಂಬುದು ಎದ್ದು ಕಾಣುತ್ತಲಿದೆ ಎಂದರು. ಶಿಕ್ಷಕನಾದವರು ಗುಡಿಯಾದರೆ ಶಿಷ್ಯನಾದವನು ಗೋಪೂರವಾಗಬೇಕೆಂಬ ಆಸೆ ಶಿಕ್ಷಕರದ್ದಾಗಿರುತ್ತದೆ, ಶಿಕ್ಷಕ ಪಂಡಿತನಾದರೆ ವಿದ್ಯಾರ್ಥಿ ವಿದ್ವಾಂಸನಾಗಬೇಕೆಂಬುದನ್ನು ಶಿಕ್ಷಕನಾದವನು ಅಪೇಕ್ಷೀಸುತ್ತಾನೆ ಅಂತಹ ಸೇವಾ ಕಾರ್ಯದಲ್ಲಿ ಮುಂದುವರೆಯಲು ಅನುವು ಮಾಡಿಕೊಟ್ಟಂತಹ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಹಾಗೂ ಸಾವಿತ್ರಿಬಾಯಿ ಪುಲೆ ಅವರ ನೆನಪು ಸೂರ್ಯ ಚಂದ್ರ ಇರುವವರೆಗೂ ಉಳಿಯಲಿದೆ ಎಂದು ಹೇಳಿದ ಅವರು ಶಿಕ್ಷಕ ನಿವೃತ್ತಿಯಾದರೆ ಮಾಜಿ ಆಗುವದಿಲ್ಲಾ ಆತ ನನ್ನ ಶಿಕ್ಷಕನಾಗುತ್ತಾನೆಂಬ ಆತ್ಮೀಯ ಭಾವನೆ ಎಂಬುದು ಕಲಿತ ವಿದ್ಯಾರ್ಥಿಗಳಲ್ಲಿ ಇರುತ್ತದೆ ಎಂದು ಗುಡಗುಂಟಿ ಅವರು ಪಂಚಾಕ್ಷರಿ ಗವಾಯಿಗಳವರ ಹಾಗೂ ಪುಟ್ಟರಾಜ ಗವಾಯಿಗಳವರ ಗುರು ಶಿಷ್ಯರ ಸಂಬಂದ ಹೇಗಿತ್ತೆಂಬುದರ ಕುರಿತು ವಿವರಿಸಿದರು.
ಇನ್ನೋರ್ವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಗೂ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಗೌರವಾಧ್ಯಕ್ಷರಾದ ಆರ್.ಎಲ್.ಕೊಪ್ಪದ ಅವರು ಮಾತನಾಡಿ ಯಾವುದೇ ಸಂಘವಾಗಲಿ ತನ್ನ ಸದಸ್ಯರನ್ನು ಮಕ್ಕಳಂತೆ ನೋಡಿಕೊಂಡು ಆ ಸಂಘ ಮಾತಾಪಿತರ ಸ್ಥಾನವನ್ನು ಹೊಂದಬೇಕೆಂದರು, ಸದಸ್ಯರ ಸೇವಾ ಕಾರ್ಯದಲ್ಲಿ ಎಡರು ತೊಡರುಗಳು ಬಂದರೆ ಅವುಗಳ ಕುರಿತು ಲಕ್ಷವಹಿಸಿ ಕೂಡಲೇ ಅವುಗಳಿಗೆ ಪರಿಹಾರ ದೊರಕಿಸಿಕೊಡುವ ಕಾರ್ಯ ಮಾಡಬೇಕು ಇಂತಹ ಕಾರ್ಯದಲ್ಲಿ ಮುನ್ನುಗ್ಗುತ್ತಾ ಸಾಗಿದ ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಶಿಕ್ಷಕರ ಸಂಘ ತನ್ನದೇ ಆದ ಘನತೆ ಗೌರವ ಬೆಳೆಸಿಕೊಂಡಿದೆ ಎಂದ ಅವರು ಕಾಯಕದಲ್ಲಿ ನಿಷ್ಠೇ ತೋರಿ ಸಮಸ್ಯಗಳನ್ನು ಇಡೇರಿಸಿಕೊಳ್ಳಲು ಹೋರಾಟ ಕೈಕೊಳ್ಳುವ ಕಾರ್ಯ ಮಾಡಲಾಗುತ್ತದೆ ಅಂತಹ ಕಾರ್ಯಕ್ಕೆ ಸಂಘ ಪ್ರಮುಖ ಸ್ಥಾನ ವಹಿಸಿಕೊಂಡು ಹೋರಾಟವನ್ನು ಯಶಸ್ವಿಗೊಳಿಸಿಕೊಳ್ಳಲು ಮುಂದಾಗುತ್ತಿರುವದು ಸಂತಸದ ಸಂಗತಿಯಾಗಿದೆ ಎಂದರು.
ಇನ್ನೋರ್ವ ಸಂಘದ ಜಿಲ್ಲಾ ಅಧ್ಯಕ್ಷರಾದ ಶಿವಾನಂದ ಹಿರೇಕುರುಬರ ಅವರು ಮಾತನಾಡಿ ಶಿಕ್ಷಕರಾದವರಲ್ಲಿ ಒಗ್ಗಟ್ಟು ಎಂಬುದು ಇರಲಿ ಸಂಘದ ಬೆಳವಣಿಗೆಗೆ ಶ್ರಮಿಸುತ್ತಾ ಸಾಗಿದರೆ ಒಗ್ಗಟ್ಟೆಂಬುದರಿಂದ ಸಮಸ್ಯೆಗಳಿಗೆ ನ್ಯಾಯ ದೊರಕಿಸಿಕೊಳ್ಳಲು ಸಹಾಯಕಾರಿಯಾಗುತ್ತದೆ ಎಂದರು. ಸರ್ಕಾರದ ಹಾಗೂ ಅನುದಾನ ರಹಿತ ಶಾಲೆಗಳ ಕುರಿತು ಮಲತಾಯಿ ದೊರಣೆ ಎಂಬುದನ್ನು ಅನುಸರಿಸುತ್ತಾ ಸಾಗುತ್ತವೆ ಇಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಶಿಕ್ಷಕರು ಮುಂದಾಗಬೇಕೆಂದು ಹೇಳಿದ ಶಿವಾನಂದ ಅವರು ಈ ಹಿಂದೆ ಬೃಹತ್ ಆಕಾರದ ಹೋರಾಟವನ್ನು ನಡೆಸಿ ಸಂಘ ಯಶಸ್ವಿಗೊಂಡಿದ್ದರ ಕುರಿತು ವಿವರಿಸಿದ ಅವರು ಹೋರಾಟ ಎಂಬುದರಿಂದ ಸಮಸ್ಯೆಗಳನ್ನು ಬಗೆ ಹರಿಸಿಕೊಳ್ಳಲು ಸಾದ್ಯವೆಂದರು.
ಸಮಾರಂಭವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್.ಸಾವಳಗಿ ಅವರು ಮಾತನಾಡಿ ಶಿಕ್ಷಕರ ಸಂಘದ ವತಿಯಿಂದ ಇಂದು ಏರ್ಪಡಿಸಲಾದ ಡಾ.ಸರ್ವಪಲ್ಲಿ ರಾಧಾ ಕೃಷ್ಣನ್ ಅವರ ಜನ್ಮದಿನೋತ್ಸವ ಮತ್ತು ಶಿಕ್ಷಕರ ದಿನಾಚರಣೆ, ಪ್ರಶಸ್ತಿ ಪ್ರಧಾನ ಸಮಾರಂಭ ಏರ್ಪಡಿಸಿರುವದು ಅತೀ ಮಹತ್ವ ಪೂರ್ಣ ಕಾರ್ಯಕ್ರಮ ಇದಾಗಿದೆ ಶಿಕ್ಷಕರು ತಮ್ಮ ಕಷ್ಟ ನಷ್ಟಗಳನ್ನು ತಿಳಿಸಿದಲ್ಲಿ ಅದಕ್ಕೆ ಪರಿಹಾರ ದೊರಕಿಸಿಕೊಡಲು ಸಾದ್ಯವಾಗುತ್ತದೆ ಶಿಕ್ಷಕರು ಹಕ್ಕುಬದ್ದ ಕಾರ್ಯಗಳನ್ನು ಮಾಡಬೇಕು ನಿಸ್ಕಾಳಜಿ ಮಾಡದೇ ಕೆಲಸ ಕಾರ್ಯಗಳನ್ನು ಮಾಡುತ್ತಾ ಸಾಗಿ ಬಂದಿದ್ದೇವೆ ಸಂಘಟನೆ ಎಂಬುದು ನ್ಯಾಯಯುತವಾಗಿ ಬೇಡಿಕೆಗಳನ್ನು ಪಡೆದುಕೊಳ್ಳಲು ಮುಂದಾಗಬೇಕು ವಿದ್ಯಾರ್ಥಿಗಳ ಏಳಿಗೆ ಮಾಡುವದರೊಂದಿಗೆ ಸಂಸ್ಥೆಯನ್ನು ಬೆಳೆಸುವದರೊಂದಿಗೆ ಶಿಕ್ಷಕರಾದವರು ತಮ್ಮ ಕರ್ತವ್ಯವನ್ನು ನಿಭಾಯಿಸಿದರೆ ಎಲ್ಲರಿಗೂ ಅನುಕೂಲವಾಗಲಿದೆ ಎಂದರು. ಶಿಕ್ಷಕರಾದವರು ತಮ್ಮ ಹಕ್ಕನ್ನು ಸ್ವಾಭಿಮಾನ ಹಾಗೂ ಗೌರವದಿಂದ ಪಡೆಯಬೇಕೆಂದು ಶಿಕ್ಷಕರಿಗೆ ಅಧಿಕಾರಿ ಸಾವಳಗಿ ಅವರು ಸಲಹೆ ನೀಡಿದರು.
ನಿವೃತ್ತ ಶಿಕ್ಷಕ ಆರ್.ಬಿ.ದಾನಿ ಅವರು ಪ್ರಾಸ್ಥಾವಿಕ ಮಾತನಾಡಿದರು.
ಇದೇ ಸಮಯದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸಂಘದಿಂದ ಮನವಿ ಅರ್ಪಿಸಲಾಯಿತು.
ವೇದಿಕೆಯ ಮೇಲೆ ಅಕ್ಷರ ದಾಸೋಹ ಅಧಿಕಾರಿ ಎಂ.ಎಂ.ಬೆಳಗಲ್ಲ, ಕ್ಷೇತ್ರ ಸಮನ್ವಯ ಅಧಿಕಾರಿ ಯು.ಬಿ.ಧರಿಕಾರ, ಇಸಿಓ ಸುರೇಶ ಹಿರೇಮಠ, ಸಂಘದ ತಾಲೂಕಾ ಅಧ್ಯಕ್ಷ ವೆಂಕೋಬಾ ನಾಯ್ಕೋಡಿ, ಜಿಲ್ಲಾ ಕಾರ್ಯದರ್ಶಿ ಗೀರಿಶ ಬಿರಾದಾರ, ಮಹೇಶ ಓಬಿ, ಇಸಿಓ ಎಂ.ಕೆ.ಭಾಗವಾನ, ಬಿಆರ್‍ಸಿ ಕಾಶೀನಾಥ ಸಜ್ಜನ, ಸಿಆರ್‍ಪಿ ರಾಜು ವಿಜಾಪೂರ, ಸಿಆರ್‍ಪಿ ಉರ್ದು ಆಯ್.ಎಲ್.ಆಲಮೇಲ, ಹಿರಿಯ ಪ್ರತ್ರಕರ್ತರಾದ ಜಿ.ಟಿ.ಘೋರ್ಪಡೆ, ತಾಳಿಕೋಟೆ ಸಂಘದ ಅಧ್ಯಕ್ಷ ಆರ್.ಜಿ.ರಾಠೋಡ, ಬಿ.ಟಿ.ವಜ್ಜಲ, ಸಿ.ಎಂ.ಹಿರೇಮಠ, ಸಾವಿತ್ರಿಬಾಯಿ ಪುಲೆ ಶಿಕ್ಷಕರ ಸಂಘದ ಅಧ್ಯಕ್ಷೆ ಶ್ರೀಮತಿ ಎಸ್.ಬಿ.ಹೂಗಾರ, ನಿಂಗನಗೌಡ ಬಿರಾದಾರ, ಎಂ.ವಾಯ್.ಗೌಂಡಿ, ಸುರೇಶ ಬೀರಗೊಂಡ, ಬಾಲಾಜಿ ವಿಜಾಪೂರ, ಸುರೇಶ ವಾಲಿಕಾರ, ತಾಳಿಕೋಟೆ ತಾಲೂಕಾ ಸಂಘದ ಸಿದ್ದಾರೂಡ ಹೋರ್ತಿ, ಮುತ್ತು ಬಿರಾದಾರ, ಸಿ.ಜಿ.ಗೌಡರ, ಎ.ಎಲ್.ಅವಟಿ, ಎಚ್.ಎಲ್.ಬೊಮ್ಮನಹಳ್ಳಿ, ವ್ಹಿ.ಎ.ವಿಜಾಪೂರ, ಶ್ರೀಮತಿ ಪಿ.ಎಚ್.ನಡಹಳ್ಳಿ, ಜೀಲಾನಿ ಸಂಗಾಪೂರ, ದಾನಿಗಳಾದ ಸಂಭಾಜಿ ವಾಡಕರ, ಸಚೀನ ಹಂಚಾಟೆ, ಶ್ರೀಶೈಲಗೌಡ, ಬಸಲಿಂಗಪ್ಪ ಮುದನೂರ, ಬಿ.ವ್ಹಿ.ಸಜ್ಜನ ಅವರನ್ನೋಳಗೊಂಡು ತಾಲೂಕಿನ ಅನುದಾನಿತ ಶಾಲಾ ಶಿಕ್ಷಕರು, ಮುಖ್ಯಗುರುಗಳು, ಎಲ್ಲ ಖಾಸಗಿ ಪ್ರಾಥಮಿಕ ಶಾಲಾ ಮುಖ್ಯಗುರುಗಳು ಪಾಲ್ಗೊಂಡಿದ್ದರು.
ಮುತ್ತು ಬಿರಾದಾರ ಸ್ವಾಗತಿಸಿದರು. ಮಹೇಶ ಅವದಿ ನಿರೂಪಿಸಿ ವಂದಿಸಿದರು.