ಬಾಲ್ಯ,ಯೌವನ,ಮುಪ್ಪಾವಸ್ತೆ ಇವು 3 ಅಕ್ಷರಗಳ ಗಂಟು
ತಾಳಿಕೋಟೆ:ಸೆ.21: ತಾಳಿಕೋಟೆಯಲ್ಲಿ ಆಧ್ಯಾತ್ಮ ಚಿಂತನೆಗಾಗಿ 5ದಿನಗಳನ್ನು ಆಯ್ಕೆಮಾಡಲಾಗಿದ್ದರೂ ಈ ಚಿಂತನೆಯಲ್ಲಿ ಬರುವ 100ವರ್ಷಬಾಳುವ ಬದುಕು ಹೇಗಿರಬೇಕೆಂಬುದು 3 ಆವಸ್ತೆಯಲ್ಲಿ 3 ಅಕ್ಷರಗಳಿಂದಲೇ ಚೆನ್ನಾಗಿ ಬದುಕುವ ಕಾರ್ಯವಾಗಬೇಕೆಂದು ಪುರಾಣ ಪ್ರವಚನಕಾರರಾದ ಪ್ರವಚನ ರತ್ನ ಕಲ್ಬುರ್ಗಿ ಜಿಲ್ಲೆಯ ಸುಂಟನೂರ ಸಂಸ್ಥಾನ ಹಿರೇಮಠದ ಶ್ರೀ ಬಂಡಯ್ಯ ಶಾಸ್ತ್ರಿಗಳು ನುಡಿದರು.
ಶುಕ್ರವಾರರಂದು ಶ್ರೀ ಖಾಸ್ಗತರ ಹಾಗೂ ವೀರಕ್ತ ಶ್ರೀಗಳವರ ಪುಣ್ಯಸ್ಮರಣೋತ್ಸವ ಕುರಿತು ಏರ್ಪಡಿಸಲಾದ ಆಧ್ಯಾತ್ಮಿಕ ಪ್ರವಚನದ 4ನೇ ದಿನದಂದು ತಿಳಿಹೇಳಿದ ಶಾಸ್ತ್ರೀಗಳು 3 ತಂತ್ರಗಳೆಂದರೇ ಬಾಲ್ಯ,ಯೌವನ,ಮುಪ್ಪಾವಸ್ತೆಗಳಾಗಿದ್ದು ಈವುಗಳಲ್ಲಿಯ 3 ಅಕ್ಷರಗಳಿಂದ ಜೀವನ ಮುಗಿದು ಹೋಗುತ್ತದೆ ಎಂದರು. ದೇವರು ಜಗತ್ತು ಅನ್ನುವಂತ 3 ಅಕ್ಷರಗಳಿಂದ ಪ್ರಾರಂಭಿಸಿ ಜನನಿ, ಜನಕಾ ಅನ್ನುವ ಮಾತಾಪಿತರನ್ನು ನಿರ್ಮಾಣಮಾಡಿ ತೊಟ್ಟಿಲು ಅನ್ನುವ 3 ಅಕ್ಷರಗಳಿಂದ ಜನನ ಎಂಬ 3 ಅಕ್ಷರದಿಂದ ಪ್ರಾರಂಭವಾಗುತ್ತದೆ ಹೆಸರು ಅನ್ನುವ 3 ಅಕ್ಷರದಿಂದ ಮುಂದೆ ಬದುಕು ಅದರಲ್ಲಿ ಬಾಲಕ, ಬಾಲಕಿ ಎಂಬ ಅಕ್ಷರಗಳು ಪ್ರಾರಂಭವಾಗಿ ಸಂಸಾರ ಅನ್ನುವ 3 ಅಕ್ಷರದತ್ತಕೊಂಡೊಯ್ಯುತ್ತದೆ ಎಂದರು.
ಮುಂದೆ ಶಿಕ್ಷಣ ಅನ್ನುವ 3 ಅಕ್ಷರ ಕಲಿಯಲು ಮುಂದಾದಾಗ ಪರೀಕ್ಷೆಅನ್ನುವ 3 ಅಕ್ಷರ ಪದವಿ ಅನ್ನುವ 3ಅಕ್ಷರ ಮುಂದೇ ಉದ್ಯೋಗ ಅನ್ನುವ 3 ಅಕ್ಷರ ಕೃಷಿಕ,ಒಕ್ಕಲು ಮಾಡಿಕೊಂಡು ಹೋದಾಗ ಸಂಬಳ ಎನ್ನುವ 3 ಅಕ್ಷರದತ್ತ ಸಾಗಿ ಮದುವೆ,ಸಂಸಾರ, ಮಕ್ಕಳು ಅನ್ನುವಂತಹ 3 ಅಕ್ಷರ ಪಡೆಯುತ್ತೇವೆ ಮಕ್ಕಳಿಗಾಗಿ ಬಳಕೆ ಉಳಿಕೆಗಾಗಿ 3 ಅಕ್ಷರದಿಂದ ಕಾಯಕ ಅನ್ನುವುದು, ದಾಸೋಹ ಅನ್ನುವ 3 ಅಕ್ಷರ ಪಡೆಯುತ್ತಾ ಮುಂದೆ ಆಧ್ಯಾತ್ಮ ಎನ್ನುವ 3 ಅಕ್ಷರದತ್ತಾ ಸಾಗಿ ವಚನ ಅನ್ನುವ 3 ಅಕ್ಷರದ ಮುಂದೆ ಸಂಗೀತ,ತಬಲ, ಅನ್ನುವ 3 ಅಕ್ಷರದತ್ತಾಸಾಗಿ ಭಕ್ತಿಯಿಂದ ನೀಡುವುದಕ್ಕೆ ಕಾಣಿಕೆ ಎಂಬ 3 ಅಕ್ಷರದ ಮುಂದೆ ಪ್ರಸಾಧ ಕಾಯಕ ಅನ್ನುವ 3 ಅಕ್ಷರಗಳನ್ನು ಕಲಿಯುವುದರಲ್ಲಿ ನಿವೃತ್ತಿ ಎನ್ನುವ 3 ಅಕ್ಷರ ಇಲ್ಲಿಗೆ ಮುಗಿಯುವುದಿಲ್ಲ ಮರಣ ಅನ್ನುವ 3 ಅಕ್ಷರ ಬರುತ್ತದೆ ಮುಂದೆ ಮಂಟಪ,ಸದಗಿ,ಸ್ಮಶಾನ,ಬಯಲು ಅನ್ನುವ 3 ಅಕ್ಷರದೊಳಗೆ ಖಾಸ್ಗತ ಎಂಬ 3 ಅಕ್ಷರ ನೆನೆಸಬೇಕಾಗಿದೆ ಎಂದು ಹೇಳಿದ ಶಾಸ್ತ್ರೀಗಳು ಹಿರಿಯರು ಹೇಳಿದಂತೆ ಹಿಂದಿನಿಂದ ಬಂದವಾಡಿಕೆಯಂತೆ ಜೀವನ ಎಂಬ ಸಂತೆ 3 ದಿನಗಳನ್ನು ಮುಗಿಸಿಕೊಂಡು ಬಾಡಿಗೆ ಎಂಬ 3 ಅಕ್ಷರದ ಮನೆಯಿಂದ ಜೀವನವೆಂಬುದನ್ನು ಮುಗಿಸಿಕೊಂಡು ಹೋಗಬೇಕಾಗುತ್ತದೆ ಎಂಬುದನ್ನು ಅರ್ಥೈಸಿ ಹೇಳಿದ ಶಾಸ್ತ್ರೀಗಳು ಉಪಸ್ಥಿತ ಭಕ್ತರನ್ನು ಆಧ್ಯಾತ್ಮದ ಒಲವಿನತ್ತ ಕೊಂಡೋಯ್ದು ಇಡೀ ಜೀವನದ ಅರ್ಥವನ್ನು ಅರ್ಥೈಸಿದರು.
ಈ ಸಮಯದಲ್ಲಿ ಶ್ರೀ ಖಾಸ್ಗತೇಶ್ವರ ಮಠದ ಉಸ್ತುವಾರಿ ವೇ.ಮುರುಘೇಶ ವಿರಕ್ತಮಠ, ಶ್ರೀ ಚಂದ್ರಶೇಖರ ಶಾಸ್ತ್ರೀಗಳು ಹಿರೇಮಠ(ಯಕ್ತಾಪೂರ), ವೇ.ವಿಶ್ವನಾಥ ವಿರಕ್ತಮಠ, ವೇ.ಮಹಾಂತಯ್ಯ ವಿರಕ್ತಮಠ, ಗವಾಯಿಗಳಾದ ರಾಜಶೇಖರ ಗುಬ್ಬೇವಾಡ, ಬಸನಗೌಡ ಬಿರಾದಾರ, ಯಲ್ಲಪ್ಪ ಗುಂಡಳ್ಳಿ, ಮೊದಲಾದವರು ಉಪಸ್ಥಿತರಿದ್ದರು.