ಪ್ರತಿಯೊಬ್ಬರೂ ಕ್ರೀಡಾ ಮನೋಭಾವನೆ ಬೆಳೆಸಿಕೊಳ್ಳಬೇಕು:ಸಾವಳಗಿ
ತಾಳಿಕೋಟೆ:ಸೆ.21: ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ದಿಗೆ ಕ್ರೀಡೆ ಎಂಬುದು ಅವಶ್ಯವಾಗಿ ಎಲ್ಲ ವಿದ್ಯಾರ್ಥಿಗಳು ಓದಿನ ಜೊತೆಗೆ ಕ್ರೀಡಾಮನೋಭಾವನೆ ಬೆಳೆಸಿಕೊಳ್ಳಬೇಕೆಂದು ಮುದ್ದೇಬಿಹಾಳ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್.ಸಾವಳಗಿ ಹೇಳಿದರು.
ಶುಕ್ರವಾರ ಮೈಲೇಶ್ವರದ ಬ್ರಿಲಿಯಂಟ್ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಮೈದಾನದಲ್ಲಿ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ ವಿಜಯಪುರ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಮುದ್ದೇಬಿಹಾಳ ಬ್ರಿಲಿಯಂಟ್ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆ ಮೈಲೇಶ್ವರ ಇವರ ಸಹಯೋಗದಲ್ಲಿ 2024-25 ನೇ ಸಾಲಿನ ಮುದ್ದೇಬಿಹಾಳ ತಾಲೂಕ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಕ್ರೀಡಾ ಧ್ವಜಾರೋಹಣವನ್ನು ನೆರವೇರಿಸಿ ಅವರು ಮಾತನಾಡುತ್ತಿದ್ದ ಅವರು ವಿದ್ಯಾರ್ಥಿಗಳು ಓದಿನೊಂದಿಗೆ ಕ್ರೀಡೆಗಳಿಗೂ ಮಹತ್ವವನ್ನು ನೀಡಬೇಕು. ಆಟ ಮತ್ತು ಪಾಠ ಜೊತೆಯಾಗಿಯೇ ಇರಬೇಕು ಇಂದು ನಡೆಯುತ್ತಿರುವ ಈ ತಾಲೂಕ ಮಟ್ಟದ ಕ್ರೀಡೆಯಲ್ಲಿ ಕ್ರೀಡಾ ಸ್ಪೂರ್ತಿಯೊಂದಿಗೆದೊಂದಿಗೆ ವಿದ್ಯಾರ್ಥಿಗಳು ಭಾಗವಹಿಸಿ ಉತ್ತಮ ಪ್ರದರ್ಶನ ತೋರಿ ಜಿಲ್ಲಾ ಹಾಗೂ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ತಾಲೂಕಿಗೆ ಕೀರ್ತಿಯನ್ನು ಹೆಚ್ಚಿಸಬೇಕೆಂದು ಹೇಳಿದ ಅಧಿಕಾರಿ ಸಾವಳಗಿ ಅವರು ಕೆಲವು ಶಾಲೆಗಳು ಪ್ರಾಥಮಿಕ ಶಾಲಾ ಕ್ರೀಡಾಕೂಟದಲ್ಲಿ ಪ್ರೌಢ ಶಾಲಾ ವಿದ್ಯಾರ್ಥಿಗಳನ್ನು ಸೇರಿಸಿ ಆಟವಾಡಿಸಲು ಪ್ರಯತ್ನಿಸಿದ್ದು ಅಂತಹ ಪ್ರಕರ್ಣಗಳು ಕಂಡುಬಂದಲ್ಲಿ ಅಂತಹ ಶಾಲೆಗಳನ್ನು ಕಪ್ಪುಪಟ್ಟಿಗೆ ಸೇರಿಸಬೇಕಾಗುತ್ತದೆ ಎಂದು ಏಚ್ಚರಿಸಿದ ಅವರು ಉತ್ತಮವಾಗಿರತಕ್ಕಂತ ನೈಜವಾಗಿರುವಂತಹ ಆಟಗಳು ನಡೆಯಬೇಕು ಮೋಸ ವಂಚನಗಳು ಒಳಗೊಂಡ ಆಟಗಳು ನಡೆಯಬಾರದು ಹಾಗೇನಾದರೂ ಕಂಡುಬಂದಲ್ಲಿ ನಿರ್ಧಾಕ್ಷೀಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದ ಅವರು ತಾಲೂಕಾ ಮಟ್ಟದ ಕ್ರೀಡಾಕೂಟದ ಯಶಸ್ವಿಗೊಳಿಸಲು ಎಲ್ಲ ಶಿಕ್ಷಕ ವೃಂದದವರು, ವಿಧ್ಯಾರ್ಥಿಗಳು ಮುಂದಾಗಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶ್ರೀ ಮಾರುತಿ ಶಿಕ್ಷಣ ಸಂಸ್ಥೆಯ(ಬ್ರಿಲಿಯಂಟ್ ಶಾಲಾ) ಅಧ್ಯಕ್ಷ ನಾನಾಗೌಡ ನಡುವಿನಮನಿ ಅವರು ಮಾತನಾಡಿ ಯಾವುದೇ ಕ್ರೀಡೆಯಾಗಿರಲಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರೂ ಕೂಡಾ ಆ ಕ್ರೀಡಾಕೂಟದಲ್ಲಿ ಪ್ರತಿಜ್ಞಾವಿಧಿ ಭೋದಿಸಿದಂತೆ ನಡೆದುಕೊಳ್ಳಬೇಕು, ಕ್ರೀಡೆಯಲ್ಲಿ ಸಓಲು ಗೆಲವು ಮುಖ್ಯವಲ್ಲಾ ಗೆದ್ದೆ ಎಂಬ ಅಹಂಭಾವ ಬೇಡಾ ಸೋತೆ ಎಂಬ ಮಾನಸಿಕವಾಗಿ ಕುಗ್ಗುವದು ಬೇಡಾ ಸೋಲೇ ಮುಂದೊಂದು ದಿನ ಗೆಲುವಿನ ಸೋಪಾನವಾಗಲಿದೆ ಎಂದರು.
ಮುದ್ದೇಬಿಹಾಳ ಕ್ಷೇತ್ರ ಸಮನ್ವಯಾಧಿಕಾರಿ ಯು.ಬಿ.ಧರಿಕಾರ ಸಮಾರಂಭವನ್ನು ಉದ್ಘಾಟಿಸಿದರು.
ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಡಾ.ಎಂ.ಎಂ. ಬೆಳಗಲ್ ಕ್ರೀಡಾ ಜ್ಯೋತಿಯನ್ನು ಸ್ವೀಕರಿಸಿದರು. ದೈಹಿಕ ಶಿಕ್ಷಣ ಪರೀಕ್ಷಕ ಬಿ.ವೈ.ಕವಡಿ ಪ್ರಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಎಂ.ಜಿ. ಕಡ್ಲಿಮಟ್ಟಿ ಕ್ರೀಡಾ ಪ್ರತಿಜ್ಞಾವಿಧಿ ಬೋಧಿಸಿದರು.
ಕ್ರೀಡಾಪಟುಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು.
ವೇದಿಕೆಯ ಮೇಲೆ ಶಿಕ್ಷಣ ಸಂಯೋಜಕ ಎಸ್.ಎಸ್. ಹಿರೇಮಠ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಕಾಶಿನಾಥ ಸಜ್ಜನ, ಸಿಆರ್‍ಪಿ ರಾಜು ವಿಜಾಪುರ, ಎಂ.ಎ.ಎಕೀನ, ಎಸ್ ಎಂ ಪಾಲ್ಕಿ, ಐ.ಎಲ್.ಆಲಮೇಲ, ಸುರೇಶ ಆಲೂರ, ಶಿಕ್ಷಕ ರೋಶನ್ ಡೋಣಿ, ದೈಹಿಕ ಶಿಕ್ಷಕ ಎಂಎಸ್ ಪಾಟೀಲ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಟಿ.ವಜ್ಜಲ್, ಎಸ್ .ಆರ್. ಕಟ್ಟಿಮನಿ, ಪಿಡಿಓ ಪ್ರಭುಗೌಡ ಚನ್ನೂರ, ಗ್ರಾಪಂ ಸದಸ್ಯರಾದ ಶಿವಶಂಕರ ಕಟ್ಟಿಮನಿ, ಜಿ.ಟಿ. ಹಿರೇಮಠ, ಶ್ರೀಮತಿ ಕಸ್ತೂರಿಬಾಯಿ ಹೆಬ್ಬಾಳ, ಶಂಕ್ರಮ್ಮ ರಂಜಣಗಿ, ಕಾರ್ಯದರ್ಶಿ ಎಂ.ಬಿ. ಮಡಿವಾಳರ, ಬಿ.ಎಚ್.ಮುದ್ನೂರ್, ರಾವತ ಪೂಜಾರಿ, ಕೆ ಬಿ ಸಜ್ಜನ, ಆರ್.ಎಸ್ .ಹಿಪ್ಪರಗಿ, ಪೆÇ್ರೀತ್ಸಾಹಕರಾದ ಪರಶುರಾಮ ಹಂಚಾಟೆ, ವೆಂಕಣ್ಣ ತಾಳಪಲ್ಲೆ, ಆರ್.ಎಸ್. ಹಿರೇಮಠ, ಅಖಿಲ್ ಅಗರ್ವಾಲ್, ಮಹಮ್ಮದ್ ಆದಾಮ ಅತ್ತಾರ, ಚನ್ನಬಸಪ್ಪ ನಿಡಗುಂದಿ, ಎಲ್ಲಾ ಪ್ರಾಥಮಿಕ ಶಾಲಾ ಮುಖ್ಯ ಗುರುಗಳು ಹಾಗೂ ಸಮಸ್ತ ಸಹಶಿಕ್ಷಕರು ಮತ್ತು ದೈಹಿಕ ಶಿಕ್ಷಣ ಶಿಕ್ಷಕರ ವೃಂದ, ಐದು ಹೋಬಳಿ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟದ ಕ್ರೀಡಾಪಟುಗಳು, ನಿರ್ಣಾಯಕರು ಹಾಗೂ ಬ್ರಿಲಿಯಂಟ್ ಶಾಲೆಯ ಆಡಳಿತ ಮಂಡಳಿ ನಿರ್ದೇಶಕರು ಶಿಕ್ಷಕ ವರ್ಗ ಮತ್ತೀತರು ಇದ್ದರು.
ಸವಿತಾ ಅನಂತ್ ರೆಡ್ಡಿ ಸ್ವಾಗತಿಸಿದರು. ವಿನಾಯಕ್ ಪಟಗಾರ ನಿರೂಪಿಸಿದರು. ಸಿದ್ದು ಕರಡಿ ವಂದಿಸಿದರು.
ಕಪ್ಪುಪಟ್ಟಿ ಧರಿಸಿದ ದೈಹಿಕ ಶಿಕ್ಷಕರು:
ತಾಲೂಕಾ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ ದೈಹಿಕ ಶಿಕ್ಷಕರುಗಳು ಸರ್ಕಾರವು ವಿವಿಧ ಬೇಡಿಕೆಗಳನ್ನು ಇಡೇರಿಸಬೇಕೆಂದು ಒತ್ತಾಯಿಸಿ ಎಲ್ಲರೂ ಕಪ್ಪುಪಟ್ಟಿ ಧರಿಸಿ ಪ್ರತಿಭಟಿಸುವದರೊಂದಿಗೆ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದು ಎದ್ದು ಕಾಣುತ್ತಿತ್ತು.