ಡಾ. ಸಿದ್ದೇಶ ಶೀರ್ವಾರಗೆ ಐ ಎಂ ಎ ಕೆ ಎಸ ಬಿ ಪ್ರಶಸ್ತಿ
ಕಲಬುರಗಿ:ಸೆ.21:ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ (ಐ ಎಂ ಎ ) ಕರ್ನಾಟಕ ರಾಜ್ಯ ಶಾಖೆ ವತಿಯಿಂದ ಪ್ರತಿ ವರ್ಷ ಐಎಂಎ ಸದಸ್ಯರಿಗೆ ಐಎಂ ಎ ಕೆಎಸ್‍ಬಿ ಶಿಕ್ಷಕರ ದಿನಾಚರಣೆ ಪ್ರಶಸ್ತಿ ನೀಡಲಾಗುತ್ತದೆ.
ಈ ಪ್ರಶಸ್ತಿ ಬೋಧನಾ ಅನುಭವ, ವೈಜ್ಞಾನಿಕ ಸಂಶೋಧನಾ ಪ್ರಸ್ತುತಿಗಳು ಮತ್ತು ಪ್ರಕಟಣೆಗಳು, ಕಾರ್ಯಾಗಾರಗಳು/ಸಿಎಂಇ ಗಳು, ಸಮಾಜಕ್ಕೆ ಸೇವೆ ಮತ್ತು ಐ ಎಂ ಎ ಗೆ ನೀಡಿದ ಕೊಡುಗೆಗಳನ್ನು ಆಧರಿಸಿ ನೀಡಲಾಗುತ್ತದೆ.
ಈ ವರ್ಷ 2024 ಸೆಪ್ಟೆಂಬರ್ 15 ರಂದು ರಾಯಚೂರಿನ ಐಎಂಎ ಸಭಾಂಗಣದಲ್ಲಿ ಆಯೋಜಿಸಲಾದ ಸಮಾರಂಭದಲ್ಲಿ 14 ಸದಸ್ಯರ ಪೈಕಿ ಖಾಜಾ ಬಂದಾನವಾಜ ವಿವಿಯ ಮೆಡಿಕಲ ಡೀನ ಡಾ.ಸಿದ್ದೇಶ್ ಸಿರ್ವಾರ್ ರವರು ಐಎಂಎಗೆ ನೀಡಿದ ಕೊಡುಗೆಗಳಿಗಾಗಿ ರಾಜ್ಯ ಅಧ್ಯಕ್ಷ ಬೆಂಗಳೂರು ಅವರಿಂದ ಐ ಎಂ ಎ ಕೆ ಎಸ್ ಬಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕಲ್ಯಾಣ ಕರ್ನಾಟಕ ಪ್ರದೇಶದ ಏಕೈಕ ಪುರಸ್ಕøತರಾದ ಡಾ ಸಿದ್ದೇಶ್ ಅವರಿಗೆ ಕೆಬಿನ ವಿವಿಯ ಕುಲಾಧಿಪತಿ ಡಾ ಸಯ್ಯದ ಶಾಹ ಖುಸ್ರೋ ಹುಸ್ಸೇನಿ, ಸಮ ಕುಲಾ ಧಿಪತಿ ಜನಾಬ ಮುಹಮ್ಮದ ಸಯ್ಯದ ಅಲಿ ಅಲ ಹುಸ್ಸೇನಿ, ಉಪ ಕುಲಪತಿ ಪೆÇ್ರ ಅಲಿ ರಜಾ ಮೂಸ್ವಿ ಹಾಗೂ ಸಮಸ್ತ ಆಡಳಿತ ಮಂಡಳಿ ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.