ಅತಿವೃಷ್ಟಿಯಿಂದ ಬೆಳೆ ಹಾಳಾದ ರೈತರಿಗೆ ಪರಿಹಾರ ಒದಗಿಸುವಂತೆ ಸಂಭಾಜಿ ಬ್ರಿಗೇಡ್ ಆಗ್ರಹ
ಔರಾದ್ :ಸೆ.21: ಜಿಲ್ಲೆಯಾದ್ಯಂತ ಅತಿವೃಷ್ಟಿಯಿಂದ ಬೆಳೆ ಹಾಳಾದ ರೈತರಿಗೆ ಸಮರ್ಪಕವಾದ ಪರಿಹಾರ ನೀಡುವಂತೆ ಹಾಗೆ ಸೋಯಾಬಿನಗೆ 8000 ಬೆಂಬಲ ಬೆಲೆ ಘೋಷಿಸಬೇಕು ಎಂದು ಆಗ್ರಹಿಸಿ ತಾಲೂಕು ಸಂಭಾಜಿ ಬ್ರಿಗೇಡ್ ಕಾರ್ಯಕರ್ತರು ತಹಶೀಲ್ದಾರ್ ಹಾಗೂ ಸಹಾಯಕ ಕೃಷಿ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.
ಮಂಗಳವಾರ ಪಟ್ಟಣದ ಮಿನಿ ವಿಧಾನಸೌಧ ಹಾಗೂ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ತೆರಳಿ ಜಿಲ್ಲೆಯಲ್ಲಿ ರೈತರು ಬೆಳೆದಿರುವ ಹೆಸರು, ಉದ್ದು, ಸೋಯಾಬೀನ್, ಹಾಗೂ ಇತರೆ ಬೆಳೆಗಳು ಸಂಪೂರ್ಣ ಹಾಳಾಗಿವೆ. ಇದರಿಂದ ರೈತರು ಕಂಗಾಲಾಗಿದ್ದಾರೆ. ಇಂಥ ರೈತರಿಗೆ ಮಧ್ಯಂತರ ಪರಿಹಾರ ನೀಡಬೇಕು, ಹಾಗೂ ಸೋಯಾಬೀನಗೆ 8 ಸಾವಿರ ಬೆಂಬಲ ಬೆಲೆ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಸತೀಶ ವಾಸರೆ, ಗೋವಿಂದ ಪಾಟೀಲ, ಸಂಜು ಪಾಟೀಲ, ಪ್ರಶಾಂತ ಬಿರಾದಾರ, ರಾಮ ರಾವಣಗಾವೆ, ಜ್ಞಾನೇಶ್ವರ ಎಕಂಬಾ, ದತ್ತಾ ಚೋಪಡೆ, ದತ್ತಾ ಪಾಟೀಲ, ಗಣೇಶ ನಿಟ್ಟೂರೆ, ನವನಾಥ ಬಿರಾದರ,
ಹಣವನ್ನು ನೀಡಬೇಕು. ಈ ಹಣವನ್ನು ರೈತರ ಖಾತೆಗಳಿಗೆ ಜಮೆ ಮಾಡಬೇಕು’ ಎಂದು ಆಗ್ರಹಿಸಿದರು.
ರೈತರು ಅತಿವೃಷ್ಟಿಯಿಂದ ಬೆಳೆ ಹಾಳಾಗಿ ಕಂಗಾಲಾಗಿದ್ದಾರೆ,