ಅಲ್ಪಾವಧಿ ಬೆಳೆ ಉದ್ದಿಗೆ ಗುಣಮಟ್ಟ ಹಾನಿ: ರೈತರಿಗೆ ಆರ್ಥಿಕ ನಷ್ಟ
ಆಳಂದ:ಸೆ.21: ಬಂಗಾರದಂತೆ ಬೆಳೆದಿದ್ದ ಉದ್ದಿನ ಬೆಳೆಗಳು, ಕಡಿಮೆ ಅವಧಿಯಲ್ಲಿ ಉತ್ತಮ ಫಲ ನೀಡಿದ್ದರೂ, ಕತ್ತರಿಸಿ ರಾಶಿಗೆ ಬಂದ ಸಂದರ್ಭದಲ್ಲಿ ಧಾರಾಕಾರ ಮಳೆಯ ಸುರಿದ ಕಾರಣ ಸಾವಿರಾರು ರೈತರ ಧಾನ್ಯದ ಗುಣಮಟ್ಟ ಕಳೆದುಕೊಂಡಿದ್ದು, ಇದರಿಂದ ಮಾರುಕಟ್ಟೆಯಲ್ಲಿ ಈ ಧಾನ್ಯಕ್ಕೆ ನಿರೀಕ್ಷಿತ ಬೆಲೆ ಕೈಗೆಟುಕದೆ ಜೇಬಿಗೆ ಕತ್ತರಿ ಬೀದುಕೊಂಡಿದ್ದು, ನಷ್ಟ ಅನುಭಿಸಿದ್ದಾರೆ.
ಮಳೆಯ ಅಕಾಲಿಕ ಹಾನಿಯಿಂದಾಗಿ ಧಾನ್ಯಗಳು ನೆನೆದು ಹೋಗಿದ್ದು, ಮಾರುಕಟ್ಟೆಯಲ್ಲಿ ಬೆಳೆ ಮಾರಾಟಕ್ಕೆ ಹೋಗಿದಾಗ ಉತ್ತಮ ಬೆಲೆ ದೊರೆಯದೇ ಇರುವುದು ರೈತ ಸಮುದಾಯಕ್ಕೆ ನಿರಾಸೆ ಮೂಡಿಸಿದೆ.
ಉದ್ದು ಬೆಳೆದ ರೈತ ಪ್ರಕಾರ, ಈ ಬಾರಿ ಬೆಳೆ ತುಂಬಾ ಚೆನ್ನಾಗಿ ಬೆಳೆಯಿತು. ಆದರೆ ಮಾರುಕಟ್ಟೆಗೆ ಸಾಗಿಸಲು ರಾಶಿಗೆ ಬಾಗಿದ್ದಾಗಲೇ ಹಾನಿಗೊಂಡು ನಮ್ಮ ಪ್ರಯತ್ನಕ್ಕೆ ನೀರೂರಿಸಿದಂತಾಗಿದೆ ಎಂದು ಸಾಲು ಸಾಲು ರೈತರು ಅಳಲು ತೋಡಿಕೊಂಡಿದ್ದಾರೆ.
ಖಾಸಗಿ ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಧಾನ್ಯಗಳು ಮಾತ್ರ ಹೆಚ್ಚಿನ ದರದಲ್ಲಿ ಮಾರಾಟವಾಗುತ್ತವೆ ಎಂಬುದು ಗಮನಿಸಿದ್ದ ರೈತರಿಗೆ ನಮ್ಮೆಯಲ್ಲರ ಬೆಳೆಯು ಉತ್ತಮವಾಗಿ ಕೈಸೇರಲಿದೆ ಎಂದುಕೊಂಡಾಗ ಮಳೆಯ ಅವಾಂತರದಿಂದಾಗಿ ಗುಣಮಟ್ಟದಲ್ಲಿ ಬದಲಾವಣೆ ತಂದಿದ್ದು ನಿರಾಸೆ ಮೂಡಿಸಿದೆ ಎಂದು ಹೇಳಿದ್ದಾರೆ.
ಅಲ್ಪಾವಧಿ ಬೆಳೆ ಉದ್ದು ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿ ಹೋಗಿದೆ. ಉದ್ದಿನ ಬೆಳೆಯ ಗುಣಮಟ್ಟದಲ್ಲಿ ಕುಗ್ಗಿದ್ದರಿಂದ ಬೆಲೆಗಳು ನಿರೀಕ್ಷೆಗಿಂತ ಕಡಿಮೆಯಾಗಿದ್ದು, ಇದರಿಂದಾಗಿ ಬಿತ್ತನೆಯಿಂದ ಹಿಡಿದು ಬೆಳೆ ನಿರ್ವಾಹಣೆ ರಾಶಿವರೆಗಿನ ದುಬಾರಿ ಲಾಗೋಡಿಗೆ ಸರಿದ್ಯೋಗದಂತಾಗಿದೆ.
ಹವಾಮಾನ ಕುರಿತ ಅನಿಶ್ಚಿತತೆ ಮತ್ತು ಸರಿಯಾದ ಕೊಯ್ಲು ಕಾಲ ನಿರ್ವಹಣೆ ಮಾಡದಿರುವುದರಿಂದ ಈ ಸಮಸ್ಯೆ ಉಂಟಾಗಿದೆ. ಈ ನಷ್ಟದಿಂದಾಗಿ ರೈತರು ಇಳುವರಿಯಲ್ಲಿ ಮತ್ತು ಆರ್ಥಿಕ ಸ್ಥಿತಿ ಎದುರಾಗಿದೆ. ಈ ಗುಣಮಟ್ಟದ ಹಾನಿಗೆ ಸರ್ಕಾರದ ಬೆಂಬಲ ಮತ್ತು ಪರಿಹಾರವನ್ನು ತಕ್ಷಣವೇ ವಹಿಸಿಕೊಳ್ಳಲು ರೈತರು ಆಗ್ರಹಿಸುತ್ತಿದ್ದಾರೆ.
ಇದರ ಜೊತೆಗೆ ಮಳೆಗಾಲದಲ್ಲಿ ತಾಂತ್ರಿಕ ಬೆಂಬಲದ ಕೊರತೆ, ಸರಿಯಾದ ಧಾನ್ಯ ಸಂಗ್ರಹಣಾ ವ್ಯವಸ್ಥೆಗಳ ಅಭಾವ ಮುಂತಾದ ಸವಾಲುಗಳಿಗೂ ರೈತರು ತೊಂದರೆ ಅನುಭವಿಸುತ್ತಿದ್ದಾರೆ.
ಉತ್ಪಾದನೆ ಗುರಿ: ತಾಲೂಕಿನಲ್ಲಿ ಉದ್ದು 6550 ಹೆಕ್ಟೇರ್‍ನಲ್ಲಿ 5240 ಟನ್ ಉತ್ಪಾದನೆ ಅಂದಾಜು ಗುರಿ ಹೊಂದಿದೆ. ಹೆಸರು 2550 ಹೆಕ್ಟೇರ್‍ನಲ್ಲಿ 1913 ಟನ್ ಉತ್ಪಾದನೆ, ಮತ್ತು ನೀರಾವರಿ ಹೆಸರು 50 ಹೆಕ್ಟೇರ್‍ನಲ್ಲಿ 50ಟನ್, ಉತ್ಪಾದನೆ ಗುರಿ ಬಹುತೇಕ ಸಾಧನೆಯಾದರು ಸಹ ಬೆಳೆಯ ಗುಣಮಟ್ಟತೆ ಹೊಡೆತದಿಂದಾಗಿ ರೈತರಿಗೆ ನಷ್ಟ ಅನುಭವಿಸುವಂತಾಗಿದೆ.
ತಕ್ಷಣವೇ ತಾಲೂಕಿನಲ್ಲಿ ಖರೀದಿ ಕೇಂದ್ರಗಳನ್ನು ಆರಂಭಿಸಿ ಉದ್ದು ಹೆಸರು ಸೋಯಾಬೀನ್ ಖರೀದಿಗೆ ಜನಪ್ರತಿನಿಧಿಗಳು ಕ್ರಮವಹಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.