ಬಾವಿಯಲ್ಲಿ ಬಿದ್ದ ನರಿ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ
ವಿಜಯಪುರ,ಏ.27:ಜಿಲ್ಲೆಯ ಸಿಂದಗಿ ಬಳಿ ಕೆರೂಟಗಿ ಗ್ರಾಮದ ಜಮೀನಿನಲ್ಲಿರುವ ಬಾವಿಯಲ್ಲಿ ಬಿದ್ದಿರುವ ನರಿಯನ್ನು ಆಗ್ನಿಶಾಮಕ ದಳ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ಸುಮಾರು ನೂರು ಅಡಿ ಆಳದ ಬಾವಿಯಲ್ಲಿ ಬಿದ್ದಿರುವ ನರಿಯನ್ನು ಸಾರ್ವಜನಿಕರ ಸಹಾಯದೊಂದಿಗೆ ಅಗ್ನಿ ಶಾಮಕ ಸಿಬ್ಬಂದಿ ನರಿಯನ್ನು ಜೀವಂತವಾಗಿ ಬಾವಿಯಿಂದ ಹೊರ ತಗೆದು ರಕ್ಷಿಸಿದ್ದಾರೆ. ಆನಂತರ ನರಿಯನ್ನು ಅರಣ್ಯ ಸಿಬ್ಬಂದಿಗೆ ಒಪ್ಪಿಸಲಾಯಿತು
ಈ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಪ್ರಮುಖ ಮಚೇಂದ್ರ, ಅಗ್ನಿಶಾಮಕ ಚಾಲಕ ಮಾಂತೇಶ ವಡ್ಡರ, ವಿಟಿ ಪರಸಪ್ಪಗೋಳ, ಎಸ್ ಎಸ್ ಮಠ, ಸಿದ್ದಣ್ಣ ರೋಡಗಿ, ಅಶೋಕ ರಾಠೋಡ, ಸಂತೋಷ ರಾಠೋಡ, ಶ್ರೀಧರ ರತ್ನಪ್ಪಗೋಳ ಹಾಗೂ ಇತರ ಸಿಬ್ಬಂದಿ ಇದ್ದರು.