ಮೈಕ್ರೊ ಅಬ್ಸರವರಗಳು ಮತಗಟ್ಟೆ ಒಳಗಡೆ ನಡೆಯುವ ಎಲ್ಲಾಪ್ರಕ್ರೀಯೆಗಳನ್ನು ಗಮನಿಸುತ್ತಿರಬೇಕು:ಗೋವಿಂದರೆಡ್ಡಿ
ಬೀದರ. ಏ.27: ಮೇ.7 ರಂದು ನಡೆಯುವ ಮತದಾನ ದಿನದಂದು ಮತಗಟ್ಟೆ ಒಳಗಡೆ ನಡೆಯುವ ಎಲ್ಲಾ ಪ್ರಕ್ರೀಯೆಗಳನ್ನು ಗಮನಿಸುತ್ತಿರಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಾದ ಗೋವಿಂದರೆಡ್ಡಿ ಹೇಳಿದರು.
ಅವರು ಶುಕ್ರವಾರ ಚನ್ನಬಸವ ಪಟ್ಟದೇವರು ರಂಗಮಂದಿರದಲ್ಲಿ ಬೀದರ ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಮೈಕ್ರೊ ಅಬ್ಸರವರಗಳಿಗಾಗಿ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
25 ಪೆÇೀಲಿಂಗ್ ಭೂತಗೆ ಒಬ್ಬ ಮೈಕ್ರೊ ಅಬ್ಸರವರಗಳನ್ನು ನೇಮಿಸಲಾಗುತ್ತದೆ. ಮೇ. 6 ರಂದು ತಮಗೆ ನೇಮಿಸಿದ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಹಾಜರಿರಬೇಕು ಮತ್ತು ಮತದಾನ ದಿನದಂದು ಬೆಳಿಗ್ಗೆ 5:30 ಗಂಟೆಗೆ ಮತಗಟ್ಟೆಗಳಲ್ಲಿ ಹಾಜರಿರಬೇಕು. ಬೀದರ ಲೋಕಸಭಾ ಕ್ಷೇತ್ರದ ಶೇ. 85 ಪ್ರತಿಶತ ಮತಗಟ್ಟೆಗಳಲ್ಲಿ ಸಿಸಿಟಿವಿ ವೆಬಕಾಸ್ಟ ಮಾಡಲಾಗುತ್ತಿದೆ ಎಂದರು.
ಅಂಧರು ಹಾಗೂ ವಯಸ್ಸಾದ ಹಿರಿಯರು ಮಾರ್ಕ ಮಾಡಲು ಆಗದವರು ಒಬ್ಬ ಸಹಾಯಕರ ನೆರವಿನಿಂದ ಮತ ಚಲಾಯಿಸಬಹುದು. ಮೊಬೈಲ್ ಪೆÇೀನ ಪೆÇಲಿಂಗ್ ಭೂತ್ ಒಳಗಡೆ ತೆಗೆದುಕೊಂಡು ಹೋಗುವ ಹಾಗಿಲ್ಲ. ಒಂದು ಶಾಲೆಯ ಆವರಣದಲ್ಲಿ ಎರಡು ಮೂರು ಕಡೆ ಮತಗಟ್ಟೆಗಳಿದ್ದರೆ ಮೈಕ್ರೊ ಅಬ್ಸರವರ ಎಲ್ಲಾ ಕಡೆಗೂ ಭೇಟಿ ನೀಡಬೇಕು ಮತ್ತು ಪೆÇೀಲಿಂಗ್ ಏಜೆಂಟ್ ಮತಗಟ್ಟೆ ಒಳಗಡೆ ತಮಗೆ ನಿಗದಿಪಡಿಸಿದ ಸ್ಥಳಗಳಲ್ಲಿ ಕುಳಿತುಕೊಳ್ಳಬೇಕು ಎಂದರು.
ಮತ ಚಲಾಯಿಸಲು ಬರುವವರ ಹೆಸರು ಓಟರ ಲಿಸ್ಟನಲ್ಲಿ ಹೆಸರು ಇದ್ದರೆ ಮಾತ್ರ ಅವರಿಗೆ ಮತ ಚಲಾಯಿಸಲು ಅವಕಾಶ ನೀಡಬೇಕು. ಬೀದರ ಲೋಕಸಭಾ ಕ್ಷೇತ್ರ ಒಟ್ಟು ಎಂಟು ವಿಧಾನ ಸಭಾ ಕ್ಷೇತ್ರಗಳನ್ನು ಒಳಗೊಂಡಿದ್ದು ಬೀದರ ಜಿಲ್ಲೆಯ ಆರು ಹಾಗೂ ಕಲಬುರಗಿ ಜಿಲ್ಲೆಯ ಎರಡು ಆಳಂದ ಮತ್ತು ಚಿಂಚೋಳಿ ಕ್ಷೇತ್ರಗಳು ಇರಲಿವೆ ಎಂದು ಹೇಳಿದರು.
ಮೈಕ್ರೊ ಅಬ್ಸರವರ ಕೆಲಸ ಮತ್ತು ಕಾರ್ಯಗಳ ಕುರಿತು ಜಿಲ್ಲಾ ಸ್ವೀಫ್ ಸಮಿತಿ ನೋಡಲ್ ಅಧಿಕಾರಿ ಗೌತಮ ಅರಳಿ ಅವರು ಸ್ವವಿವರವಾದ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಸಾಮಾನ್ಯ ಚುನಾವಣಾ ವೀಕ್ಷಕರಾದ ದೀಪಂಕರ ಮೋಹಪಾತ್ರ, ಚುನಾವಣಾ ತಹಶಿಲ್ದಾರ ಅಣ್ಣಾರಾವ್ ಪಾಟೀಲ ಹಾಗೂ ಮೈಕ್ರೊ ಅಬ್ಸರವರಗಳು ಉಪಸ್ಥಿತರಿದ್ದರು.