ಬಿಷ್ಟಪ್ಪಯ್ಯಗೋಪುರದ ನೇರಕ್ಕೆ ಸೂರ್ಯಾಸ್ತ !
ಸಂಜೆವಾಣಿ ವಾರ್ತೆ
ಹೊಸಪೇಟ ಏ27: ಛಾಯಾಗ್ರಹಣವೇ ಹಾಗೆ ಒಂದು ವಿಭಿನ್ನ ಕಲೆ! ಅತ್ಯಂತ ತಾಳ್ಮೆಯಿಂದ ನಿರ್ವಹಿಸಬೇಕಾದ ಕಲೆ, ಒಂದು ಸಾವಿರ ಪದಗಳನ್ನು ಒಂದು ಚಿತ್ರ ತಿಳಿಸುತ್ತೇ ಎನ್ನುವುದಕ್ಕೆ ಸಾಕ್ಷಿ ಈ ಒಂದು ಚಿತ್ರ. ಸೂರ್ಯ ತನ್ನ ಪಥ ಬದಲಿಸಿದಂತೆ ಸೂರ್ಯೋದಯ ಹಾಗೂ ಸೂರ್ಯಾಸ್ತವೂ ಬದಲಾಗುತ್ತೆ ಎನ್ನುವುದ ಸರಿ.
ಆದರೆ ಯುಗಾದಿಯ ಆಚು ಬಾಚು ಸೂರ್ಯ ಪಥ ನೇರವಾಗಿರುತ್ತದೆ ಅಂದು ಸೂರ್ಯ ಹಂಪಿ ವಿರೂಪಾಕ್ಷೇಶ್ವರನ ನೇರವಾಗಿ ಉದಯವಾಗಿ ಸೂರ್ಯಾಸ್ತವೂ ನೇರವಾಗಿ ಆಗುತ್ತದೆ, ಈ ಸಮಯದಲ್ಲಿ ಐತಿಹಾಸಿಕ ಹಂಪಿಯ ಬಿಷ್ಟಪ್ಪಯ್ಯಗೋಪುರಕ್ಕೂ ನೇರವಾಗಿ ಕಾಣುವುದು ಸಾಮಾನ್ಯವಾಗಿದ್ದರೂ ಯುಗಾದಿಯ 20 ದಿನಗಳ ನಂತರ ಶುಕ್ರವಾರ ಏಪ್ರೀಲ್ 26 ರಂದು ಇಂತಹ ಒಂದು ಅಪರೂಪದ ದೃಶ್ಯ ಆಕಾಶದಲ್ಲಿ ಗೋಚರವಾಯಿತು. ಹಂಪಿಯಲ್ಲಿ ಪೌರೋಹಿತ್ಯದ ಜೊತೆ ಛಾಯಾಗ್ರಹಣದ ಹವ್ಯಾಸವನ್ನು ಬೆಳಿಸಿಕೊಂಡಿರುವ ಸಂತೋಷ ಜೋಶಿ ಕಂಡು ಸಂತೋಷದಿಂದ ಚಿತ್ರ ಸೆರೆ ಹಿಡಿದು ಸಂಭ್ರಮಿಸಿದರು.
ನನ್ನ ಜೀವನದ ಅತ್ಯಂತ ಸಂತೋಷದ ಕ್ಷಣ, ಅನೇಕಬಾರಿ ಗುಡ್ಡ ಹತ್ತಿ ಚಿತ್ರವನ್ನು ಸೆರೆಹಿಡಿಯಲು ಯತ್ನಿಸಿದರೂ ಸಾಧ್ಯವಾಗದಿರುವುದು ಇಂದು ಸಾಧ್ಯವಾಗಿದ್ದು ಸಂತಸ ತಂದಿದೆ.
ಸಂತೋಷ
ಹವ್ಯಾಸಿ ಛಾಯಾಗ್ರಾಹಕ