ಕಾಳಗಿಯಲ್ಲಿ ಕಳ್ಳರ ಹಾವಳಿ, ಕೈಕಟ್ಟಿ ಕುಳಿತ ಪೋಲಿಸರು!
ಕಾಳಗಿ:ಏ.27: ತಾಲೂಕು ಕೇಂದ್ರ ಕಾಳಗಿಯಲ್ಲಿ ವ್ಯಾಪಾರ ವಹಿವಾಟುಗಳು ಹೆಚ್ಚಾಗುತ್ತಿದ್ದಂತೆ, ಇತ್ತೀಚೆಗೆ ಕಳ್ಳರ ಹಾವಳಿ ವಿಪರೀತವಾಗಿದೆ.
ಪಟ್ಟಣದಲ್ಲಿ ಹಗಲು ದರೋಡೆಗಳು ಅತಿಹೆಚ್ಚು ನಡೆದರೂ ಕೂಡ ಕಾಳಗಿ ಪೆÇೀಲಿಸರು, ಮೂಕವಿಸ್ಮಿತರಂತೆ ವರ್ತಿಸುತ್ತಿದ್ದಾರೆ ಎಂದು ಇಲ್ಲಿಯ ನಾಗರಿಕರು ಶುಕ್ರವಾರ ಆರೋಪಿಸಿದ್ದಾರೆ.
ಪಟ್ಟಣದಲ್ಲಿ ಗುರುವಾರ ಬೆಳಿಗ್ಗೆ 09-48ಕ್ಕೆ ಸ್ಥಳೀಯ ಉದ್ಯಮಿ ವಿದ್ಯಾಸಾಗರ ವನಮಾಲಿ ಅವರು, ಟಿವಿಎಸ್ ಬೈಕ್ ಲ್ಲಿ ಅಂಬೇಡ್ಕರ್ ವೃತ್ತದಿಂದ ತಮ್ಮ ತೋಟಕ್ಕೆ ತೆರಳುತ್ತಿರುವ ಮಾರ್ಗ ಮಧ್ಯೆ ಇಬ್ಬರು, ಅಪರಿಚಿತ ವ್ಯಕ್ತಿಗಳು ರಾಯಲ್ ಎನ್ ಫೀಲ್ಡ್ ಬೈಕ್ ನಲ್ಲಿ ಬೆನ್ನಟ್ಟಿ ಬಂದು ರೌದ್ರಾವತಿ ನದಿ ದಂಡೆಯ ಮೇಲೆ ಉದ್ಯಮಿ ವಿದ್ಯಾಸಾಗರ ಅವರನ್ನು ತಡೆದು ನಾವು ಕ್ರೈಂ ಪೆÇೀಲಿಸ್ ಇಲಾಖೆಯವರು, ತಮ್ಮ ಗಾಡಿಯ ಲೈಸೆನ್ಸ್ ತೋರಿಸಿ, ಪಟ್ಟಣದಲ್ಲಿ ಕ್ರೈಂ ಹೆಚ್ಚಾಗಿದೆ. ತಾವು ಈ ತರ ಆಭರಣಗಳನ್ನು ಧರಿಸಿಕೊಂಡು ತಿರುಗಾಡಬಾರದೆಂದು ಪುಸಲಾಯಿಸಿ, ಮಾರಕಾಸ್ತ್ರಗಳನ್ನು ತೊರಿಸಿ ಕೊರಳಲ್ಲಿರುವ 20ಗ್ರಾಂ. ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಭಯಭೀತರಾದ ಉದ್ಯಮಿ ವಿದ್ಯಾಸಾಗರ ವನಮಾಲಿ ಅವರು, ದಿಕ್ಕು ತೋಚದೇ ಕಾಳಗಿ ಪೆÇೀಲಿಸ್ ಠಾಣೆಗೆ ಹೋಗಿ ವಿಷಯ ತಿಳಿಸಿದರೆ,
ಪಿಎಸಐ ಅವರು, ಶ್ರೀಮಂತರಾದ ತಾವೇ ಈ ತರಹ ಮಾಡಿದರೆ, ಬಡವರೇಷ್ಟ ಕಷ್ಟಪಡಬೇಕು. ತಾವು ಜೋರಾಗಿ ಚೀರುಚಕೊಳ್ಳಬೇಕಿತ್ತು. ಬೊಬ್ಬೆ ಹೊಡೆದುಕೊಂಡು ಪಟ್ಟಣದ ಜನತೆಗೆ ಕರೆಯಬೇಕಾಗಿತ್ತು.
ಎಂದು ಹಾರಿಕೆಯ ಉತ್ತರ ಕೊಟ್ಟಿರುತ್ತಾರೆಂದು ವಿದ್ಯಾಸಾಗರ ತಮ್ಮ ಅಳಲನ್ನು ತೋಡಿಕೊಂಡರು.
ಚೀರಿದರೆ ಜೀವ ಹೊಗುತ್ತದೆ ಎಂಬ ಭಯದಿಂದ ಬಂದಿರುವ ನನಗೆ ಬೊಬ್ಬೆ ಹೊಡೆದುಕೊಳ್ಳಲು ಸಾಧ್ಯವೇ ಎಂದಿದ್ದಾರೆ.
ಮಾಯವಾದ ಮಾಂಗಲ್ಯ:ಒಂದು ತಿಂಗಳ ಹಿಂದೆ ಕಾಳಗಿ-ಮಲಘಾಣ ಮಾರ್ಗ ಮಧ್ಯೆ ಸ್ಥಳಿಯ ಗೌರಮ್ಮ ದೇವಿಂದ್ರಪ್ಪ ರಾಜಾಪುರ ಮಹಿಳೆಯ ಕೊರಳ ಮಾಂಗಲ್ಯವನ್ನೇ ದೋಚಿಕೊಂಡು ಪರಾರಿಯಾಗಿದ್ದಾರೆ.
ಪೆÇೀಲಿಸ್ ರಿಗೆ ತಿಳಿಸಿದರೂ ಕ್ಯಾರೆ ಬಂದಿಲ್ಲವೆಂದು ಆರೋಪಿಸಿದ್ದಾರೆ.
ಕಳೆದ ವರ್ಷ ಪಟ್ಟಣದ ಹಿರೇಮಠಕ್ಕೆ ಹೊಂದಿಕೊಂಡಿರುವ ಮನೆಯ ಯಜಮಾನಿ ಬೆಳ್ಳಂ ಬೆಳಿಗ್ಗೆ ತಮ್ಮ ಮನೆ ಮಾಳಿಗೆಯ ಮೇಲೆ ಬಟ್ಟೆ ಒಣಿ ಹಾಕುವ ಸಮಯದಲ್ಲಿ ಮಾಲಿಗೆಯ ಮೇಲೆಯೇ ನುಗ್ಗಿದ ಕಳ್ಳರು ಮಾಂಗಲ್ಯವನ್ನೇ ದೋಚಿಕೊಂಡು ಪರಾರಿಯಾಗಿದ್ದಾರೆ.
ಅದು ಕೂಡ ಇದುವರೆಗೆ ಪತ್ತೆಯಾಗಿರುವುದಿಲ್ಲ.
ಹೌಸ್ ಫುಲ್ ಮಟ್ಕಾ ಮಜಾ:
ಪಟ್ಟಣದ ಬಿಡಂಗಡಿಗಳಲ್ಲಿಯೂ ಕೂಡ ಮಟ್ಕಾ ಹಾವಳಿ ವಿಪರೀತವಾಗಿದ್ದು, ಇದರ ಮಜಾನೇ ಬೇರೆ ಎಂಬಂತೆ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಬಲಿಯಾಗಿದ್ದಾರೆ.
ಇಷ್ಟೆಲ್ಲಾ ಆದರೂ ಮೂಕವಿಸ್ಮಿತರಂತೆ ಕುಳಿತ ಪೆÇೀಲಿಸ ಇಲಾಖೆಗೆ ಪ್ರತಿ ತಿಂಗಳು ಮಟ್ಕಾ ಬುಕ್ಕಿಗಳಿಂದ ಹಫ್ತಾ ಹೊಗುತ್ತದೆ ಎಂದು ಇಲ್ಲಿಯ ನಾಗರಿಕರ ಆರೋಪವಾಗಿದೆ.
ಜೋರಾದ ಜೂಜಾಟ:
ಪಟ್ಟಣದಲ್ಲಿ ಕೆಲವು ಗುಂಪುಗಳು ಸೇರಿ ಒಂದು ಮನೆಯನ್ನೇ ಜೂಜಾಟದ ಅಡ್ಡ ವಾಗಿ ಮಾಡಿಕೊಂಡು ಆಟವಾಡಿಸಿ ಹಣ ಸಂಗ್ರಹಣೆ ಮಾಡುವ ಕೆಲಸಕ್ಕೇನು ಕಮ್ಮಿ ಇಲ್ಲವೆಂಬಂತೆ, ಹೊಲ-ಗದ್ದೆಗಳಲ್ಲಿ, ಬನಗಳ ಕಂಟಿಕಮರಿಗಳಲ್ಲಿ ಜೋರಾದ ಜೂಜಾಟ ನಡೆದಿರುವುದರಿಂದ ಹೆಣ್ಣು ಮಕ್ಕಳು ಹೊಲ-ಗದ್ದೆಗಳಿಗೆ ಹೋಗುವುದು ತುಂಬಾ ಆತಂಕ ಮೂಡಿಸಿದೆ.
ಪಟ್ಟಣದಲ್ಲಿ ಪುಡಿ ರೌಡಿಗಳು ಹಾವಳಿ, ಅಕ್ರಮ ಮದ್ಯ ಮಾರಾಟ, ಮಟ್ಕಾ ಹಾವಳಿ, ಜೂಜಾಟ, ಸರಗಳ್ಳರ ಸಂಕೋಲೆಯಿಂದ ಕಾಳಗಿ ಮುಕ್ತವಾಗಿಸುವಂತೆ ಸಂಬಂಧ ಪಟ್ಟ ಅಧಿಕಾರಿಗಳು ಶೀಘ್ರದಲ್ಲೇ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಇಲ್ಲಿಯ ನಾಗರಿಕರು ಸೇರಿಕೊಂಡು ಉಗ್ರ ಹೋರಾಟಕ್ಕೆ ಇಳಿಯುವುದು ಅನಿವಾರ್ಯವಾಗುತ್ತದೆ ಎಂದು ಸಾರ್ವಜನಿಕರು ಎಚ್ಚರಿಸಿದ್ದಾರೆ.
ಪಟ್ಟಣದಲ್ಲಿ ಇತ್ತಿಚೆಗೆ ನಿರ್ಮಾಣವಾದ ಕಾಳಗಿ ತಾಲೂಕು ಬಸ್ ನಿಲ್ದಾಣದಲ್ಲಿ ಮೂಲ ಸೌಕರ್ಯ ವ್ಯವಸ್ಥೆ ಇರದ ಕಾರಣ ರಾತ್ರಿ 08-00ಗಂಟೆಯಾದರೇ ಸಾಕು. ನಿರ್ಜಲ ಪ್ರದೇಶವಾಗಿ ಮಾರ್ಪಡುತ್ತದೆ.
ಪಟ್ಟಣದ ವಿವಿಧ ಕಾಲೇಜುಗಳಿಂದ ಬಸ್ ನಿಲ್ದಾಣಕ್ಕೆ ಬರಲು ಒಂದು ಕೀ.ಮಿ.ಆಗುವುದರಿಂದ ಶಾಲಾ ಕಾಲೇಜು ವಿದ್ಯಾರ್ಥಿನಿಯರು ಜೀವ ಕೈಯಲ್ಲಿ ಹಿಡಿದುಕೊಂಡು ಹೊಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು ಪೆÇೀಲಿ ಹುಡುಗರು, ಕರ್ಕಶ ಶಬ್ದ ಮಾಡುವ ಬೈಕ್ ಗಳನ್ನು ತುಂಬಾ ರೇಸ್ ಮಾಡುತ್ತಾ ಬರುತ್ತಿರುವುದರಿಂದ ತೊಂದರೆಯನ್ನುಂಟಾಗಿದೆ.
ಸದ್ದಿಲ್ಲದೆ ನಡೆಯುತ್ತಿರುವ ವೇಶ್ಯಾವಾಟಿಕೆ :
ಪಟ್ಟಣದಲ್ಲಿ ಸದ್ದಿಲ್ಲದೆ ವೇಶ್ಯಾವಾಟಿಕೆ ಕೆಲಸ ನಡೆಯುತ್ತಿದ್ದರೂ ಕೂಡಾ ಕಣ್ಣಿದ್ದು, ಕುರುಡ. ಕಿವಿಗಳಿದ್ದು, ಮುಗರಂತೆ ನಟಿಸುವಂತೆ ಆಗಿದೆ.
ಇನ್ನು ಮುಂದಾದರೂ ನೂತನ ಬಸ್ ನಿಲ್ದಾಣ ಹಾಗೂ ವಿವಿಧ ಲಾಡ್ಜ್ ಗಳಿಗೆ ಪೆÇೀಲಿಸರು ಗಸ್ತು ತಿರುಗುವುದು ಅವಶ್ಯಕವಾಗಿದೆ.
ವಿಶ್ವನಾಥ ಬಾಕಳೆ ಪಿಎಸಐ ಕಾಳಗಿ