ನೇಹಾ   ಹತ್ಯೆ ಖಂಡಿಸಿ ಕುಕನೂರಲ್ಲಿ  ಪ್ರತಿಭಟನೆ
ಸಂಜೆವಾಣಿ ವಾರ್ತೆ
 ಕುಕನೂರು, ಏ.27:  ಹುಬ್ಬಳ್ಳಿಯ ನೇಹಾ  ಹತ್ಯೆಗೈದ ಆರೋಪಿ ಫಯಾಜ್‌ನಿಗೆ ಗಲ್ಲುಶಿಕ್ಷೆಯಾಗಬೇಕೆಂದು ಒತ್ತಾಯಿಸಿ ಹಿಂದು ಜಾಗರಣ ವೇದಿಕೆವತಿಯಿಂದ ಶುಕ್ರವಾರ ಪತ್ರಿಭಟನೆ ನಡೆಸಿದರು.
 ಮುಖಂಡರು ಮಾತನಾಡಿ, ರಾಜ್ಯದಲ್ಲಿ ಲವ್ ಜಿಹಾದ್‌ಗೆ ಮತ್ತೊಬ್ಬ ಹಿಂದು ಯುವತಿಯ ಬಲಿಯಾಗಿದ್ದಾಳೆ. ನೇಹಾ ಹಿರೇಮಠ ಪ್ರೀತಿಸಲು ನಿರಾಕರಿಸಿದಳು ಎನ್ನುವ ಕಾರಣವನ್ನು ಇಟ್ಟುಕೊಂಡು ಮುಸ್ಲಿಂ ಯುವಕ ಫಯಾಜ್‌ನು ಲವ್ ಜಿಹಾದ್ ಹೆಸರಿನಲ್ಲಿ ಹತ್ಯೆಯ ಕೃತ್ಯವನ್ನು ಎಸಗಿದ್ದಾನೆ. ನೇಹಾ ಹಿರೇಮಠ ಹತ್ಯೆಗೈದ ಘಟನೆಯನ್ನು ಎನ್.ಐ.ಎ ತನಿಖೆಗೆ ಒಳಪಡಿಸಿ ತ್ವರಿತ ನ್ಯಾಯಾಲಯದಿಂದ ಗಲ್ಲುಶಿಕ್ಷೆಗೆ ಒಳಪಡಿಸಬೇಕೆಂದು ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಬಿಜೆಪಿ ಮಂಡಲದ ಅಧ್ಯಕ್ಷ ಮಾರುತಿ ಗಾವರಾಳ, ಉದ್ಯಮಿ ಅನಿಲ್ ಆಚಾರ್, ಹಿಂದು ಜಾಗರಣ ವೇದಿಕೆಯ ರಾಜು ದ್ಯಾಂಪೂರ, ವಿನಾಯಕ ಸರಗಣಚಾರ, ಬಿಜೆಪಿ ನಗರ ಘಟಕದ ಅಧ್ಯಕ್ಷ ಬಸವರಾಜ ಹಾಳಕೇರಿ, ತಾ.ಪಂ ಮಾಜಿ ಉಪಾಧ್ಯಕ್ಷ ಶಿವಕುಮಾರ ನಾಗಲಾಪೂರಮಠ, ಪ.ಪಂ ಸದಸ್ಯರಾದ ಸಿದ್ದು ಉಳ್ಳಾಗಡ್ಡಿ, ಬಾಲರಾಜ ಗಾಳಿ, ಮುಖಂಡರಾದ  ಕರಬಸಯ್ಯ ಬಿನ್ನಾಳ, ವಿರೇಶ ಸಬರದ್, ಸಿದ್ದು ವಾಲ್ಮೀಕಿ, ಜಗದೀಶ ಸೂಡಿ, ಲಕ್ಷö್ಮಣ ಕಾಳಿ, ಹಿಂದು ಜಾಗರಣ ವೇದಿಕೆಯ ಮುಖಂಡರು ಇದ್ದರು.
One attachment • Scanned by Gmail