ಕಾಂಗ್ರೆಸ್ ಅಭ್ಯರ್ಥಿ ಪರ ಮನೆ ಮನೆಗೆ ತೆರಳಿ ಮತಯಾಚನೆ
ರಾಯಚೂರು,ಏ.೨೭- ನಗರದ ವಾರ್ಡ್ ನಂಬರ್ ೧೯ ಹರಿಜನವಾಡದಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ಭಂಡಾರಿ ಈರಣ್ಣ ಅವರ ನೇತೃತ್ವದಲ್ಲಿ ಇಂದು ಕಾಂಗ್ರೆಸ್ ಅಭ್ಯರ್ಥಿ ಜಿ.ಕುಮಾರ ನಾಯಕ ಪರ ಬಿರುಸಿನ ಪ್ರಚಾರ ನಡೆಸಿದರು.
ನಂತರ ಕಾಂಗ್ರೆಸ್ ಹಿರಿಯ ಮುಖಂಡ ಭಂಡಾರಿ ಈರಣ್ಣ ಮಾತನಾಡಿ, ಜಿಲ್ಲೆಯಲ್ಲಿ ಜನರು ಬದಲಾವಣೆ ಬಯಸಿದ್ದಾರೆ. ಹಾಗಾಗಿ ಕಾಂಗ್ರೆಸ್ ಜಯ ಸಾಧಿಸುವುದು ನಿಶ್ಚಿತ. ಬಿಜೆಪಿಯ ಸುಳ್ಳು ಪ್ರಚಾರಕ್ಕೆ ಯಾರು ಕಿವಿಗೊಡಬೇಡಿ ಎಂದು ಮತದಾರರಿಗೆ ಹೇಳಿದರು.
ಸರ್ಕಾರ ೫ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ.ಈ ಎಲ್ಲವೂ ಕೂಡ ನಿಮಗೆ ಉಪಯೋಗವಾಗಿದೆ. ರಾಜ್ಯದ ಜನರು ಸುಖವಾಗಿ ಬದುಕಲು ಗ್ಯಾರಂಟಿ ಯೋಜನೆ ಉಪಯೋಗವಾಗಿದೆ. ಇನ್ನು ಮುಂದೆ ಕೇಂದ್ರದಿಂದ ಗ್ಯಾರಂಟಿ ಯೋಜನೆಗಳು ಬರಲಿದೆ.ಎಂದ ಅವರು,
ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳನ್ನು ಮನೆ ಮನೆಗೆ ಹೋಗಿ ಯೋಜನೆಗಳ ಬಗ್ಗೆ ತಿಳಿಸಿದರು.
ಜನರಿಗೆ ಗ್ಯಾರಂಟಿ ಯೋಜನೆ ತಲುಪಿದೆ.ಮಹಿಳೆಯರು ಫ್ರೀ ಬಸ್ ನಲ್ಲಿ ಓಡಾಟ ಮಾಡುತ್ತಿದ್ದಾರೆ.೨ ಸಾವಿರ ದುಡ್ಡು ಬರ್ತಿದೆ. ಸರ್ಕಾರ ಏನು ಆಶ್ವಾಸನೆ ಕೊಟ್ಟಿದ್ದೂ ಅದನ್ನು ಈಡೇರಿಸಿದೆ. ಮತ್ತೆ ೫ ನ್ಯಾಯ ಗಳನ್ನು ಕೇಂದ್ರದಲ್ಲಿ ಸಹಿ ಮಾಡಿರುವ ಗ್ಯಾರಂಟಿ ಕಾರ್ಡ್ ಗಳನ್ನು ನಿಮ್ಮ ಮನೆಗೆ ತಲುಪಿಸುತ್ತೇವೆ. ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ೫ ನ್ಯಾಯಗಳು ನಿಮ್ಮ ಮನೆಗೆ ತಲುಪಲಿದೆ ಇದೆ ಈ ನಿಟ್ಟಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡಬೇಕು ಎಂದು ಮತದಾರರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಎಂ.ಜಿ. ವೀರೇಶ, ಪರಶುರಾಮ, ಮಾರೆಪ್ಪ, ನಾಗಪ್ಪ, ತಿಮ್ಮಪ್ಪ, ಜಂಬಣ್ಣ (ಸೂರ್ಯ), ರಮೇಶ, ಅನಿಲ್ ಕುಮಾರ, ಸನ್ನಿ, ಮಲ್ಲೇಶ, ಈರೇಶ (ಕಾಯಿ), ಬಾಲು, ಕಿಶೋರ್, ನಾಗರಾಜ, ಕುಬೇರ ಸೇರಿದಂತೆ ವಾರ್ಡ್ ಕಾಂಗ್ರೆಸ್ ಕಾರ್ಯಕರ್ತರು ಇದ್ದರು.