ಬಿಜೆಪಿ ಪಕ್ಷಕ್ಕೆ ಸೋಲಿನ ಭಯ ಶುರುವಾಗಿದೆ- ಬೋಸರಾಜು
(ಸಂಜೆವಾಣಿ ವಾರ್ತೆ)
ರಾಯಚೂರು,ಏ.೨೭-
ನಾನು ರಾಯಚೂರು ಜಿಲ್ಲೆಗೆ ಹೊಸಬನಲ್ಲ. ನನ್ನ ಮಕ್ಕಳೂ ಇಲ್ಲಿಯೇ ಶಿಕ್ಷಣ ಪಡೆದಿದ್ದಾರೆ ಇದು ನನ್ನ ಕರ್ಮ ಭೂಮಿಯಾಗಿದೆ. ನಿಮ್ಮೆಲ್ಲರ ಸಹಕಾರದೊಂದಿಗೆ ರಾಯಚೂರು ಜಿಲ್ಲಾಧಿಕಾರಿಯಾಗಿ ೩ ವರ್ಷ ಪ್ರಾಮಾಣಿಕವಾಗಿ ಈ ಭಾಗದ ಜನರ ಸೇವೆ ಮಾಡಿದ್ದೇನೆ. ಇನ್ನು ಹೆಚ್ಚಿನ ಸಮಾಜ ಸೇವೆಗಾಗಿ ರಾಜಕೀಯಕ್ಕೆ ಬಂದಿದ್ದೇನೆ. ಕಾಂಗ್ರೆಸ್ ಪಕ್ಷ ನನಗೆ ಲೋಕಸಭೆ ಅಭ್ಯರ್ಥಿಯನ್ನಾಗಿ ಮಾಡಿದೆ. ನಿಮ್ಮೆಲ್ಲರ ಸಹಕಾರ ಜೊತೆಗೆ ಆಶೀರ್ವಾದ ನನ್ನ ಮೇಲಿರಲಿ ಈ ಭಾಗದ ಸರ್ವಾಂಗೀಣ ಅಭಿವೃದ್ಧಿಗಾಗಿ ನಾನು ಶ್ರಮಿಸುವೆ ಎಂದು ಕಾಂಗ್ರೆಸ್ ಪಕ್ಷದ ಲೋಕಸಭಾ ಅಭ್ಯರ್ಥಿಯಾದ ಜಿ ಕುಮಾರ ನಾಯಕ್ ಅವರು ಮಾತನಾಡಿ ಮನವಿ ಮಾಡಿದರು.
ರಾಯಚೂರು ಲೋಕಸಭಾ ಕ್ಷೇತ್ರದ ಚುನಾವಣೆಯ ನಿಮಿತ್ಯ ಮಾನ್ವಿ ವಿಧಾನಸಭಾ ಕ್ಷೇತ್ರದ ಕವಿತಾಳ ಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾದ ಜಿ ಕುಮಾರ ನಾಯಕ ಪರವಾಗಿ ನಡೆದ ಕಾರ್ಯಕರ್ತ ಮುಖಂಡರ ಸಭೆ ಹಾಗೂ ಮತಯಾಚನೆ ಕಾರ್ಯಕ್ರಮದಲ್ಲಿ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವರಾದ ಎನ್‌ಎಸ್ ಬೋಸರಾಜು ಹಾಗೂ ಶಾಸಕರಾದ ಹಂಪಯ್ಯ ನಾಯಕ ಅವರು ಭಾಗವಹಿಸಿ ಮಾತನಾಡಿ ಮತಯಾಚಿಸಿದರು.
ನಂತರ ಸಚಿವರಾದ ಎನ್ ಎಸ್ ಬೋಸರಾಜು ಮಾತನಾಡಿ, ದೇಶದ ಸರ್ವ ಜನಾಂಗದ ಅಭಿವೃದ್ಧಿಯ ಜೊತೆಗೆ ಸಮಾಜದ ಎಲ್ಲ ವರ್ಗದವರನ್ನು ಸೌಹಾರ್ಧತೆಯೊಂದಿಗೆ ಒಟ್ಟಿಗೆ ತೆಗೆದುಕೊಂಡು ಹೋಗುವ ಶಕ್ತಿ ಕಾಂಗ್ರೆಸ್ ಗೆ ಮಾತ್ರ ಇದೆ. ದೇಶದಲ್ಲಿರುವ ಅಸಮಾನತೆ ತೊಲಗಿಸಿ, ಸರ್ವಾಂಗೀಣ ಅಭಿವೃದ್ಧಿ ಸೇರಿ ಸಮಾಜದಲ್ಲಿ ಸಹೋದರರಂತೆ ಸ್ವಾಭಿಮಾನದಿಂದ ಬಾಳಲು ನಾವೆಲ್ಲರು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಿಬೇಕಾಗಿದೆ. ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೂಲಕ ಜನರನ್ನು ಸ್ವಾವಲಂಬಿಗಳಾಗಿ ಬದುಕು ಅವಕಾಶ ನೀಡಿದೆ.
ಈ ಭಾಗದ ಜನರ ಮೂಲಭೂತ ಸಮಸ್ಯೆಗಳಿಗೆ ಶಾಶ್ವತ ಸಮಸ್ಯೆಗಳ ಪರಿಹಾರ ಕ್ರಮ ಕೈಗೊಳ್ಳುವ ಶಕ್ತಿ ವಿದ್ಯಾವಂತರಾಗಿರುವ ಕುಮಾರ ನಾಯಕರಿಗಿದೆ. ಹಾಗಾಗಿ ನಮ್ಮ ಪಕ್ಷದಿಂದ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಲಾಗಿದೆ. ಅವರನ್ನು ನಾವೆಲ್ಲರು ಬೆಂಬಲಿಸುವ ಮೂಲಕ ಆಶೀರ್ವದಿಸಬೇಕೆಂದು ತಿಳಿಸಿದರು.
ನಂತರ ಶಾಸಕ ಹಂಪಯ್ಯ ನಾಯಕ ಮಾತನಾಡಿ, ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ದೇಶದ ಕಪ್ಪುಹಣ ತಂದು ಎಲ್ಲರ ಬ್ಯಾಂಕ್ ಖಾತೆಗೆ ೧೫ ಲಕ್ಷ ಹಾಕ್ತೀವಿ ಅಂದಿದ್ರು, ವರ್ಷಕ್ಕೆ ೨ ಕೋಟಿ ಉದ್ಯೋಗ, ರೈತರ ಆದಾಯ ದ್ವಿಗುಣ ಸೇರಿ ಅನೇಕ ಭರವಸೆಗಳನ್ನು ನೀಡಿ ಜನರಿಗೆ ಮೋಸ ಮಾಡಿ ಅಧಿಕಾರಕ್ಕೆ ಬಂದಿದ್ದಾರೆ. ಈಗ ಮತ್ತೆ ಜನರನ್ನು ನೆನಪು ಮಾಡಿಕೊಂದು ಎನಾದರೊಂದು ಸುಳ್ಳು ಸೃಷ್ಠಿಸಿ ಮತ್ತೆ ಮೋಡಿ ಮಾಡಲು ಬರುತ್ತಿದ್ದಾರೆ ಅವರಿಗಡ ತಕ್ಕ ಪಾಠ ಕಲಿಸಿ ನುಡಿದಂತೆ ನಡೆದ ಕಾಂಗ್ರೆಸ್ ಗೆ ಆಶೀರ್ವಾದ ಮಾಡಬೇಕೆಂದು ತಿಳಿಸಿದರು.
ನಂತರ ಹಿರಿಯರಾದ ಕೆ ಶಾಂತಪ್ಪ ಮಾತನಾಡಿ, ಈ ಭಾಗದ ಶೈಕ್ಷಣಿಕ, ಸಾಮಾಜಿಕ, ರಾಜಕೀಯ ಬಲವರ್ಧನೆಗೆ ವಿದ್ಯವಂತರ ಅವಶ್ಯವಿದೆ. ಜಿ ಕುಮಾರ ನಾಯಕ ಅವರು ಐಎಎಸ್ ಅಧಿಕಾರಿಯಾಗಿ ರಾಯಚೂರು ಜಿಲ್ಲೆಯಲ್ಲಿ ಅನೇಕ ಕೆಲಸಗಳನ್ನು ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಬರೀ ಸುಳ್ಳು ಪ್ರಚಾರದಿಂದ ಜನರನ್ನು ಯಾಮಾರಿಸುತ್ತಿದ್ದಾರೆ. ಈ ಚುನಾವಣೆಯಲ್ಲಿ ಜಾತಿ, ಧರ್ಮ ಹೆಸರಿನಲ್ಲಿ ನಮ್ಮ ಸೌಹಾರ್ಧತೆಯನ್ನು ಕದಡುವ ಬಿಜೆಪಿಯವರಿಗೆ ತಕ್ಕ ಪಾಠ ಕಲಿಸಬೇಕು. ತಿಳಿಸಿದರು.
ಈ ಸಂದರ್ಭದಲ್ಲಿ ಮಾನ್ವಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಅಬ್ದುಲ್ ಗಪೂರ್ ಸಾಬ್, ಮುಖಂಡರಾದ ಎಂ ಈರಣ್ಣ, ಶರಣಯ್ಯ ನಾಯಕ್, ಕಿರಲಿಂಗಪ್ಪ ಕವಿತಾಳ, ಶೇಖರಪ್ಪ ಸಾಹುಕಾರ ಹಟ್ಟಿ, ಶಿವಣ್ಣ ವಕೀಲ್ಣ, ಬೀರಪ್ಪ ಪೂಜಾರಿ, ಬಾಲಸ್ವಾಮಿ ಕೊಡ್ಲಿ, ಬಿ ಕೆ ಅಮರೇಶಪ್ಪ, ಶರಣ ಸಾಹುಕಾರ ಹಣಗಿ, ಮಲ್ಲಿಕಾರ್ಜುನ್ ಪಾಟೀಲ್, ರಾಜೇಶ ಬನ್ನಿಗಿಡ, ಫರಿದುಲ್ಲಾ, ಗಂಗಪ್ಪ ದಿನ್ನಿ, ಕರಿಯಪ್ಪ, ಓವಣ್ಣ, ಲಿಕಾಯತ್ ಅಲಿ, ಮಾಳಪ್ಪ, ಈರಯ್ಯ ತಾತ, ಲಿಂಗರಾಜ ಕಂದಗಲ್, ಬಲವಂತರಾಯ ಗೌಡ, ಮಡಿವಾಳ ಕರಿಯಪ್ಪ, ತಿಪ್ಪಯ್ಯ ಸ್ವಾಮಿ, ಮೌನೇಶ ನಾಯಕ, ಪ್ರದೀಪ್ ಜಗ್ಲಿ ಕವಿತಾಳ ಸೇರಿದಂತೆ ಅನೇಕರಿದ್ದರು.