ಬಿಜೆಪಿ ಎಂದರೆ ಭಾರತೀಯ ಚಂಬು ಪಕ್ಷ: ರಾಹುಲ್ ವ್ಯಂಗ್ಯ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ ಏ 27: ಬಿಜೆಪಿ  ಎಂದರೆ ಭಾರತೀಯ ಜನತಾ ಅರ್ಟಿ ಅಲ್ಲ, ಅದು  ಭಾರತೀಯ ಚಂಬು ಪಾರ್ಟಿಯಾಗಿದೆ ಎಂದು ಎಐಸಿಸಿ ನಾಯಕ ರಾಹುಲ್ ಗಾಂಧಿ ಬಿಜೆಪಿ ಪಕ್ಷದ ಬಗ್ಗೆ ವ್ಯಂಗವಾಡಿದ್ದಾರೆ.
ಅವರು ನಿನ್ನೆ ನಗರದ ಮುನಿಷಿಪಲ್ ಹೈಸ್ಕೂಲ್ ಮೈದಾನದಲ್ಲಿ ಹಮ್ಮಿಕೊಂಡಿದ್ದ ಪ್ರಜಾ ಧ್ವನಿ ಸಮಾವೇಶದಲ್ಲಿ ಮಾತನಾಡುತ್ತ,  ಖಾಲಿ ಚಂಬು ಪ್ರದರ್ಶಿಸಿ. ಕರ್ನಾಟಕ ಈ ದೇಶಕ್ಕೆ ನೂರು‌ ರೂ ತೆರಿಗೆ ನೀಡಿದರೆ. ಕೇಂದ್ರ ಸರಗಕಾರ ಕರ್ನಾಟಕಕ್ಕೆ ಕೇವಲ 13 ರೂ ನೀಡುತ್ತಿದೆ. ಬರ ಪರಿಹಾರವನ್ನೂ ನೀಡಿಲ್ಲ. ಹಣಕಾಸು ಆಯೋಗ ಏಳು ಸಾವಿರ ಕೋಟಿ ರೂ ಕೊಡಬೇಕು ಕೊಟ್ಟಿಲ್ಲ. ಇಂತಹ ಪಕ್ಷಕ್ಕೆ ಚಂಬು ಪಕ್ಷ ಎಂದು ಕರೆಯದೆ ಇನ್ನೇನು ಅನ್ನಬೇಕು. ನೀವು ಸಹ ಈ ಚುನಾವಣೆಯಲ್ಲಿ ಆ ಪಕ್ಷಕ್ಕೆ ಖಾಲಿ ಚಂಬು ನೀಡಿ ಎಂದರು. 
 ಈ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್  ಪಕ್ಷಕ್ಕೆ  ಶಕ್ತಿ ಕೊಡಿ. ಕಳೆದ ಬಾರಿ ಕರ್ನಾಟಕದ ಚುನಾವಣೆ ಸಂದರ್ಭದಲ್ಲಿ ನೀಡಿದ ಭರವಶೆಯಂತೆ ಪಂಚ ಗ್ಯಾರೆಂಟಿಗಳನ್ನು ಜಾರಿಗೆ ತಂದಿದೆಂದರು.
ತಾವು ಮತ್ತೆ ಅಧಿಕಾರಕ್ಕೆ ಬಂದರೆ  ಸಂವಿಧಾನ ಬದಲಾವಣೆ ಮಾಡುವುದಾಗಿ ಬಿಜೆಪಿ ಹೇಳುತ್ತಿದೆ.
ಆದ್ದರಿಂದ ಈ ಬಾರಿಯ ಚುನಾವಣೆ ಲೋಕತಂತ್ರ ಮತ್ತು ಸಂವಿಧಾನ ರಕ್ಷಣೆಗಾಗಿ‌ ನಡೆಯುವ ಚುನಾವಣೆಯಾಗಿದೆ.  ಬಡಜನತೆಗೆ, ಹಿಂದುಳಿದ, ದುರ್ಬಲವರ್ಗಕ್ಕೆ ಸಂವಿಧಾನ ಬರವ ಮುನ್ನ ಅವರಿಗೆ ಯಾವುದೇ ಹಕ್ಕು ಇರಲಲ್ಲ. ಸ್ವಾತಂತ್ರ್ಯ ನಂತರ ಸಂವಿಧಾನ ರಚಿಸಿ ಅವರಿಗೆ ಹಲವು ಹಕ್ಕು ನೀಡಿದೆ.
ದೇಶದ ಹಿಂದುಳಿದ ಆದಿವಾಸಿ, ಅಲ್ಪಸಂಖ್ಯಾತರಿಗೆ ನಾನು ಹೇಳ ಬಯಸುವೆ ಸಂವಿಧಾನ ರಕ್ಷಣೆಗೆ ಇಂಡಿಯಾ ಕೂಟ ಬದ್ದವಾಗಿದೆಂದರು.
ಮೋದಿ ಅವರು ಶ್ರೀಮಂತರಿಗೆ ಹಣ ನೀಡಿದರೆ ನಾವು ಬಡವರಿಗೆ ನೀಡುತ್ತೇವೆ ಎಂಬುದಕ್ಕೆ ಕರ್ನಾಟಕ ಸರ್ಕಾರವೇ ಸಾಕ್ಷಿ, ಮಹಿಳೆಯರಿಗೆ ಪ್ರತಿ ತಿಂಗಳು ಎರೆಡು ಸಾವಿರ, ಉಚಿತ ಬಸ್ ಪ್ರಯಾಣ ಸೌಲಭ್ಯ
ಕುಟುಂಬಕ್ಕೆ 10 ಕಿಲೋ ಅಕ್ಕಿ, ಎರೆಡು ನೂರು ಯೂನಿಟ್ ವಿದ್ಯುತ್ ನೀಡುತ್ತಿದೆ.‌
ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ ದೇಶದ ಎಲ್ಲಡೆ ತೆರಳಿ ಬಡವರ ಪಟ್ಟಿ ಮಾಡಲಿದೆ. ಆ ಮೂಲಕ ಕುಟುಂಬದ ಓರ್ವ ಮಹಿಳೆಯರಿಗೆ  ಮಹಾಲಕ್ಷ್ಮಿ  ಯೋಜನೆ ಮೂಲಕ ವಾರ್ಷಿಕ ಒಂದು ಲಕ್ಷ ರೂ ನೀಡಲಿದೆ. ಪ್ರತಿ ತಿಂಗಳು ಮೊದಲ ತಾರೀಖಿಗೆ  8500 ರೂ ನಿಮ್ಮ ಖಾತೆಗೆ ಬೀಳುತ್ತೆ. ರಾಜ್ಯದ ಎರೆಡು ಸಾವಿರ ಸೇರಿ ಒಟ್ಟು  ಹತ್ತು ಸಾವಿರದ ಐದು ನೂರು ರೂಪಾಯಿ ಬರಲಿದೆ.ದೇಶದ ಕೋಟ್ಯಾಂತರ ಜನರಿಗೆ ಈ ಸೌಲಭ್ಯ ನೀಡಲಿದೆಂದರು.
ಪ್ರಧಾನಿಯವರು ಯುವ ಜನತೆಗೆ ಉದ್ಯೋಗ ವಿಲ್ಲವೆಂದರೆ ಪಕೋಡ ಮಾಡಿ ಮಾರಾಟ ಮಾಡಿ ಎಂದು ಹೇಳುತ್ತಾರೆ.ಆದರೆ ನಾವು ಹೇಳುತ್ತೇವೆ ನಿರುದ್ಯೋಗಿ ಪದವೀಧರರಿಗೆ ಸಾರ್ವಜನಿಕ ಉದ್ದಿಮೆಗಳಲ್ಲಿ  ಅಪ್ರೆಂಟಿಸಿಫ್ ಮೂಲಕ ತರಬೇತಿ ನೀಡಲಿದೆ.  ಒಂದು ವರ್ಷಕ್ಕೆ ಒಂದು ಲಕ್ಷ ರೂ ನೀಡಲಿದೆ. ಆಶಾ ಅಂಗನವಾಡಿ ಕಾರ್ಯಕರ್ತೆಯರಿಗೆ ದ್ವಿಗುಣ ಮಾಡಲಿದೆ. ನರೇಗ ಕೂಲಿ 400 ರೂ ನೀಡಲಿದೆ. ರೈತರಿಗೆ ಮೋದಿಯವರು 20 ಜನ ಉದ್ದಿಮೆದಾರರ  16 ಲಕ್ಷ ಕೋಟಿ ರೂ ಸಾಲನ್ನ‌ಮಾಡಿದರು. ನಾವು ಅಧಿಕಾರಕ್ಕೆ ಬಂದರೆ ಎಲ್ಲಾ ರೈತರ ಸಾಲ ಮನ್ನಾ ಮಾಡಲಿದೆ. ನ್ಯಾಯಯುತವಾದ ಬೆಂಬಲ ಬೆಲೆ ನೀಡಲಿದೆ.
ಅಗ್ನಿವೀರ ಯೋಜನೆ ರದ್ದು ಮಾಡಲಿದೆ. ಜಿಎಸ್ ಟಿ ಬದಲಾಯಿಸಲಿದೆ. ಬಡವರ ಪರವಾದ, ಸರಳವಾದ ಜಿಎಸ್ ಟಿ ತರಲಿದೆಂದು ಹೇಳಿದರು.‌
ಸಮಾವೇಶದಲ್ಲಿ ಪಕ್ಷದ ಕರ್ನಾಟಕದ ಉಸ್ತುವಾರಿ ರಣದೀಪ್ ಸುರ್ಜಿವಾಲಾ,  ರಾಜ್ಯ ಸಭಾ ಸದಸ್ಯರಾದ ಬಿ.ಕೆ.ಹರಿಪ್ರಸಾದ್, ಡಾ.ಸೈಯದ್ ನಾಸೀರ್ವಹುಸೇನ್,  ಸಚಿವರಾದ ಸಂತೋಷ್ ಲಾಡ್, ಶಿವರಾಜ್ ತಂಗಡಗಿ, ಬಿ.ನಾಗೇಂದ್ರ, ಜಮೀರ್ ಅಹಮ್ಮದ್, ಶಾಸಕರಾದ ಎಂ.ಪಿ.ಲತಾ, ಹೆಚ್.ಆರ್.ಗವಿಯಪ್ಪ,  ಭರತ್ ರೆಡ್ಡಿ, ಮಾಜಿ ಸಚಿವರಾದ ಅಲ್ಲಂ ವೀರಭದ್ರಪ್ಪ, ಪರಮೇಶ್ವರ ನಾಯ್ಕ, ಮಾಜಿ ಶಾಸಕ ಭೀಮಾನಾಯ್ಕ, ವಿಧಾನ ಪರಿಷತ್ ಮಾಜಿ ಸದಸ್ಯ ಕೆಎಸ್ ಎಲ್ ಸ್ವಾಮಿ, ಮಾಜಿ ಸಂಸದ ಉಗ್ರಪ್ಪ,  ಪಕ್ಷದ ಬಳ್ಳಾರಿ ಅಭ್ಯರ್ಥಿ ತುಕರಾಂ, ಕೊಪ್ಪಳ ಅಭ್ಯರ್ಥಿ ರಾಜಶೇಖರ್ ಹಿಟ್ನಾಳ್ ಡಿಸಿಸಿ ಅಧ್ಯಕ್ಷ ಅಲ್ಲಂ ಪ್ರಶಾಂತ್ ಮೊದಲಾದವರು  ಇದ್ದರು.
ಮತ ಕೇಳಲಿಲ್ಲ:
ಸಮಾವೇಶದಲ್ಲಿ ದೊಡ್ಡದಾಗಿ ಭಾಷಣ ಮಾಡಿದ ರಾಹುಲ್ ಕೊನೆಯವರೆಗೂ ತಮ್ಮ ಅಭ್ಯರ್ಥಿಗಾಗಲೀ ಪಕ್ಷದ ಚಿನ್ಹೆಗಾಗಲಿ ಮತ ನೀಡಿ ಎಂದು ಕೇಳಲೇ ಇಲ್ಲ. ನಾವು ಅಧಿಕಾರಕ್ಕೆ ಬಂದರೆ ಏನು‌ಮಾಡುತ್ತೇವೆಂದಷ್ಟೇ ಹೇಳಿದರು.
ಗೈರು ಹಾಜರು:
ಸಮಾವೇಶಕ್ಕೆ ಬರುತ್ತಾರೆಮನದು ಹೇಳಿದ್ದ
ಮುಖ್ಯ ಮಂತ್ರಿ ಸಿದ್ದರಾಮಯ್ಯ, ಉಪ‌ಮುಖ್ಯ ಮಂತ್ರಿ  ಡಿ.ಕೆ.ಶಿವಕುಮಾರ್, ಎಐಸಿಸಿ ಅಧ್ಯಕ್ಷ
ಮಲ್ಲಿಕಾರ್ಜುನ ಖರ್ಗೆ ಗೈರು ಹಾಜರಾಗಿದ್ದರು.
ಬಳ್ಳಾರಿ ಜೀನ್ಸ್ ರಾಜಧಾನಿ ಮಾಡುವುದು ಖಚಿತ:
 ನಾನು ಹೇಳಿದ್ದನ್ನು  ಮಾಡೇ ಮಾಡುತ್ತೇನೆ. ಬಳ್ಳಾರಿಯನ್ನು ಜೀನ್ಸ್ ರಾಜಧಾನಿಯನ್ನಾಗಿ ಮಾಡಲಿದೆಂದು  ಕಳೆದ ಚುನಾವಣೆ ವೇಳೆ ಹೇಳಿತ್ತು.  ಈ ಮಾತನ್ನು ಸಹ ಈಡೇರಿಸಲಿದೆ. ಜೀನ್ಸ್ ಪಾರ್ಕ್ ಮಾಡಲಿದೆ. ಈ ಬಗ್ಗೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ನವರ ಬಳಿ‌ ಮಾತನಾಡಿರುವೆ ಜೀನ್ ಪಾರ್ಕ್ ಆಗುವುದು ಖಚಿತ ಎಂದು ತಮ್ಮ ಭಾಷಣದ ಕೊನೆಯಲ್ಲಿ ಹೇಳಿದರು.