ಜನರಿಲ್ಲವೆಂದು  ಹೊರಟಿದ್ದ ರಾಹುಲ್ಮುಖಂಡರ ಮನವಿಯಿಂದ ಹಿಂದಕ್ಕೆ ಬಂದರು
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.27: ನಗರದ ಮುನಿಷಿಪಲ್ ಹೈಸ್ಕೂಲ್ ಮೈದಾನದಲ್ಲಿ ಹಮ್ಮಿಕೊಂಡಿದ್ದ
ಪ್ರಜಾಧ್ವನಿ ಸಮಾವೇಶಕ್ಕೆಂದು ಆಗಮಿಸಿದ್ದ ರಾಹುಲ್ ಗಾಂಧಿ ಅವರು ಜಿಂದಾಲ್ ವಿಮಾನ ನಿಲ್ದಾಣದಲ್ಲಿ ನಾಲ್ಕು ಗಂಟೆಗೆಲ್ಲ ಬಂದಿದ್ದರು.
ಆದರೆ ಸಮಾವೇಶದ ಮೈದಾನದಲ್ಲಿ 42 ಕ್ಕೂ ಹೆಚ್ಚು ಸೆಲ್ಸಿಯಸ್ ತಾಪಮಾನ ಇದ್ದುದರಿಂದ ಜನತೆ ಬಂದಿರಲಿಲ್ಲ. ಇದನ್ನು ಅರಿತ ರಾಹುಲ್  ಅವರು ತುರ್ತಾಗಿ ದೆಹಲಿಗೆ ಹೋಗಬೇಕಿದ್ದರಿಂದ ದೆಹಲಿಗೆ ಹೊರಟುನಿಂತಿದ್ದರು. 
 ರಾಹುಲ್ ಅವರ ಈ ನಿರ್ಧಾರದಿಂದ ಕಂಗೆಟ್ಟ  ಸಚಿವ ಸಂತೋಷ್ ಲಾಡ್, ಸಚಿವ ನಾಗೇಂದ್ರ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಮಾತನಾಡಿ . ರಾಹುಲ್ ಅವರು ಹೋದರೆ ನಮ್ಮ ಅಭ್ಯರ್ಥಿಗಳ ಗೆಲುವಿಗೆ ಸಮಸ್ಯೆಯಾಗಲಿದೆ. ಜನರು ಬರಲಿಲ್ಲ, ರಾಹುಲ್ ವಾಪಸ್ಸು ಎಂದು ಮಾಧ್ಯಮಗಳ ಪ್ರಚಾರದಿಂದ ಕೆಟ್ಟ ಹೆಸರು ಬರಲಿದೆ.  ಅವರು ಬಂದು ಮಾತನಾಡಿ ತಕ್ಷಣ ಹೊರಡಲಿ ಎಂದು ಮನವೊಲಿಸಲು ಕೋರಿದ್ದು. ಅದರಂತೆ ಸಿದ್ದರಾಮಯ್ಯ ರಾಹುಲ್ ಅವರಿಗೆ ಬಳ್ಳಾರಿ ಕಾರ್ಯಕ್ರಮಕ್ಕೆ ನೀವು ಹೋಗಲೇ ಬೇಕು ಎಂದು ಮನವೊಲಿ  ಅವರನ್ನು ಬಳ್ಳಾರಿಗೆ ಕರೆತಂದರಂತೆ.
ಇತ್ತ ಬಿಸಿಲಿನ ತಾಒಮಾನದಿಂದ ಸಂಜೆ 5 ಗಂಟೆ ವರೆಗೆ ವೇದಿಕೆಯತ್ತ ಸುಳಿಯದ ಪಕ್ಷದ ಕಾರ್ಯಕರ್ತರು ನಂತರ ಬರತೊಡಗಿದರು.  ರಾಹುಲ್ ಗಾಂಧಿ ಬರುವ ಹೊತ್ತಿಗೆ ಜಿಲ್ಲೆಯ, ಗ್ರಾಮೀಣ ಮತ್ತು ನಗರದ  ನಾನಾ ಭಾಗಗಳಿಂದ ಸಾವಿರಾರು ಜನತೆ ಬಂದು ಸೇರಿದರು.
ಮುಂದೆ ಬನ್ನಿ:
ಸಮಾವೇಶಕ್ಕೆಂದು ಆಗಮಿಸಿದ್ದ ಬಹುತೇಕ ಜನರು ವೇದಿಕೆಯ ಬಲ ಭಾಗದಲ್ಲಿ‌ಮಾತ್ರ ಇದ್ದರು. ಎಡ ಭಾಗ ಖಾಲಿ ಇದ್ದರಿಂದ   ಮುಂದೆ ಬನ್ನಿ. ಇನ್ನೂ ಮುಂದೆ ಬನ್ನಿ ಎಂದು ಕಾಂಗ್ರೆಸ್ ನಾಯಕರು ಮೈಕ್‌ನಲ್ಲಿ ಪದೇ ಪದೇ ಹೇಳುತ್ತಿದ್ದರು. ಹಿಂದೆ ಕುಳಿತವರು ಮುಂದೆ ಬನ್ನಿ. ಸೈಡ್‌ನಲ್ಲಿ ನಿಂತವರು ಈ ಕಡೆ ಬನ್ನಿ,  ಹೊರಗಡೆ ಇದ್ದವರು ಗೇಟ್ ಕಿತ್ತು ಒಳಗೆ ಬನ್ನಿ. ಪೊಲೀಸರೇ ನಮ್ಮ ಕಾರ್ಯಕರ್ತರನ್ನು ಒಳಗಡೆ ಕಳಿಸಿಕೊಡಿ. ಪೊಲೀಸರೇ ಗೇಟ್ ತೆರವುಗೊಳಿಸಿ ಎಂದು ಕಾಂಗ್ರೆಸ್ ನಾಯಕರು ಗೊಗರೆದರು.
ವೇದಿಕೆ ಮೇಲಿದ್ದ ಮುಖಂಡರು ನಗರದ ಪಾಲಿಕೆ ಸದಸ್ಯರನ್ನು ಉಲ್ಲೇಖಿಸಿ ನೀವು ಹಾಗೆ ಮಾಡಿ, ಹೀಗೆ ಮಾಡಿ ಜನರನ್ನು ಮುಂದೆ ಕರೆತನ್ನಿ ಎಂದರು.
ಸ್ವತಃ ಅಭ್ಯರ್ಥಿ ತುಕರಾಂ, ಶಾಸಕ ಭಾರತ್ ರೆಡ್ಡಿ, ಮಾಜಿ ಶಾಸಕ ಭೀಮಾನಾಯ್ಕ ಮೊದಲಾದವರು ಮೈದಾನಕ್ಕೆ ಬಂದು ಕಾರಗಯಕರ್ತರನ್ನು ಮುಂದೆ ಕರೆತಂದರು.