ಕುಂಚಾವರಂ: ಕೆರೆ ಹೂಳೆತ್ತುವ ಕಾಮಗಾರಿಗೆ 358 ಜನ ಕೂಲಿಕಾರರ ನಿಯೋಜನೆ
ಚಿಂಚೋಳಿ,ಏ.27- ತಾಲ್ಲೂಕಿನ ಕುಂಚಾವರಂ ಗ್ರಾಮ ಪಂಚಾಯತ ಕೆರೆ ಹೂಳೆತ್ತುವ ಕಾಮಗಾರಿ ಇಂದು ಅನುಷ್ಠಾನಕ್ಕೆ ತರುವ ಮೂಲಕ 358 ಜನ ಕೂಲಿಕಾರಿಗೆ ಕೆಲಸ ಕಲ್ಪಿಸಲಾಗಿದೆ.
ಕಾಮಗಾರಿ ಸ್ಥಳಕ್ಕೆ ಇಂದು ಕಾರ್ಯನಿರ್ವಾಹಕ ಅಧಿಕಾರಿಗಳಾದ ಭಂವರ್ ಸಿಂಗ್ ಮೀನಾ ಅವರು, ನೀಡಿ ಕಾಮಗಾರಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಸ್ಪೀಪ್ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು ಮತ್ತು ಮತದಾನದ ಜಾಗೃತಿಯ ಕುರಿತು ಪ್ರತಿಜ್ಞಾವಿಧಿ ಬೋದಿಸಲಾಯಿತು.
ಈ ಸಮಯದಲ್ಲಿ ಕಲಬುರಗಿ ವೃತ್ತದ ಮಾನ್ಯ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಸುಮಿತಕುಮಾರ ಪಾಟೀಲ್, ಕಾರ್ಯನಿರ್ವಾಹಕ ಅಧಿಕಾರಿಗಳಾದ ಶಂಕರ ರಾಠೋಡ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಮಹ್ಮದ್ ಮುನೀರ್, ಸಹಾಯಕ ನಿರ್ದೇಶಕರಾದ (ಗ್ರಾಉ) ಶಿವಶಂಕ್ರಯ್ಯ , ತಾಲ್ಲೂಕು ಯೋಜನಾಧಿಕಾರಿಗಳಾದ ಮಲ್ಲಿಕಾರ್ಜುನ ಕಟ್ಟಿಮನಿ, ದಶರಥ ಪಾತ್ರೆ,ತಾಲ್ಲೂಕು ಐಇಸಿ ಸಂಯೋಜಕರಾದ ಭೀಮಾಶಂಕರ, ತಾಂತ್ರಿಕ ಸಂಯೋಜಕರಾದ ಅನಿಲ್ ರಾಠೋಡ, ತಾಂತ್ರಿಕ ಸಹಾಯಕ ಶ್ರೀಕಾಂತ, ಲೆಕ್ಕ ಶಾಖೆಯ ಅಂಬ್ರೀಷ್,ಮಲ್ಲೇಶಂ,ಜನಾರ್ದನ,ಓಖಐಒ ನ ಬಸವರಾಜ್,ಅಂಬಿಕಾ, ಇದ್ದರು