ಎಂ.ಎನ್ ದೇಸಾಯಿ ಕಾಲೇಜು ವಿದ್ಯಾರ್ಥಿಗಳಿಂದ ಮತದಾನ ಜಾಗೃತಿ ಜಾಥ
ಕಲಬುರಗಿ,ಏ.27- ನಗರದ ಎಂ.ಎನ್. ದೇಸಾಯಿ ಪದವಿ ಮಹಾವಿದ್ಯಾಲಯದ ಆಶ್ರಯದಲ್ಲಿ ಹಮ್ಮಿಕೊಂಡ ಮತದಾನ ಜಾಗೃತಿ ಜಾಥ ಕಾಲೇಜಿನಿಂದ ಪ್ರಾರಂಭಗೊಂಡು ಜಿಲ್ಲಾಧಿಕಾರಿಗಳ ಕಛೇರಿವರೆಗೆ ತಲುಪಿತು.
ಈ ಸಂದರ್ಭದಲ್ಲಿ ಭವರಸಿಂಗ್ ಮೀನಾ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಅಧ್ಯಕ್ಷರು ಸಿಪ್ ಸಮಿತಿ ಕಲಬುರಗಿ. ಗಜಾನನ ಬಾಳಿ ಪ್ರೊಬೊಷನರಿ ಅಧಿಕಾರಿಗಳು ಕಲಬುರಗಿ. ಸುಧಾ ಆದಿ ಸಂಚಾರ ವಿಭಾಗದ ಸಹಾಯಕ ಪೆÇೀಲಿಸ್ ಆಯುಕ್ತರು ಕಲಬುರಗಿ. ಅಬ್ದುಲ್ ಅಜಾಂ ಉಪ ಕಾರ್ಯದಶಿಗಳು ಜಿಲ್ಲಾ ಪಂಚಾಯತ ಕಲಬುರಗಿ. ಡಾ.ಶಿವರಂಜನ ಸತ್ಯಂಪೇಟ ಹಿರಿಯ ಪತ್ರಕರ್ತರು ಕಲಬುರಗಿ, ಕಾಲೇಜಿನ ಸಂಸ್ಥಾಪಕರು ಮತ್ತು ಅಧ್ಯಕ್ಷರಾದ ಸಂದೀಪ್ ದೇಸಾಯಿ ಕಾರ್ಯದರ್ಶಿ ಜಗನ್ನಾಥ ನಾಗೂರ,ಪ್ರಾಂಶುಪಾಲರಾದ ನಾಗರಾಜ ಪಟ್ಟಣಕರ,ಉಪನ್ಯಾಸಕರಾದ ವಿ.ಎಮ್.ಹೀರೆಮಠ, ಡಿ.ಪಿ.ಸಜ್ಜನ, ಶಿವಶರಣಪ್ಪ ಪೂಜಾರಿ,ಮಹೇಶ ತೆಗ್ಗಳಿ,ಮಂಜುನಾಥ ಬನ್ನೂರ,ಪ್ರಿಯಾಂಕಾ ಕರಣಿಕ,ರೇಷ್ಮಾ ಚವ್ಹಾಣ,ಪೂಜಾ ಪಾಟೀಲ ಹಾಗೂ ನಾಲ್ಕು ಚಕ್ರದ ತಂಡದ ಮುಖ್ಯಸ್ಥೆ ಮಾಲಾ ಕಣ್ಣಿ ಮತ್ತು ಸರ್ವ ಸದಸ್ಯರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.