ಗ್ರಂಥಾಲಯ,ಕುಡಿಯುವ ನೀರಿನ ಘಟಕ ಉದ್ಘಾಟನೆ
ಬಂಗಾರಪೇಟೆ.ಏ೨೭: ಪ್ರತಿ ವರ್ಷದಂತೆ ಈ ವರ್ಷವೂ ಶ್ರೀರಾಮ ನವಮಿಯನ್ನು ಆಚರಿಸಿದ್ದು ಜ್ಞಾಪಕಾರ್ಥವಾಗಿ ಗ್ರಂಥಾಲಯ ಮತ್ತು ತಂಪಾದ ಶುದ್ದ ಕುಡಿಯುವ ನೀರಿನ ಯಂತ್ರವನ್ನು ನ್ಯಾಯಾಧೀಶರ ಅದ್ಯಕ್ಷತೆಯಲ್ಲಿ ಉದ್ಘಾಟಿಸಲಾಗಿದೆ ಎಂದು ವಕೀಲರ ಸಂಘದ ಅದ್ಯಕ್ಷ ಎಸ್.ನಾರಾಯಣಪ್ಪ ತಿಳಿಸಿದರು.
ಪಟ್ಟಣದ ನ್ಯಾಯಾಲಯದಲ್ಲಿ ಸಡಗರದ ಶ್ರೀರಾಮನವಮಿಯನ್ನು ಆಚರಿಸಿದ್ದು ಈ ಸಂಭ್ರಮಾಚರಣೆಯಲ್ಲಿ ಪ್ರಥಮ ದರ್ಜೆ ಸಿವಿಲ್ ನ್ಯಾಯಾಧೀಶರಾದ ಕೇಶವಮೂರ್ತಿ ಮತ್ತು ಅಪರ ಸಿವಿಲ್ ನ್ಯಾಯಾಧೀಶರಾದ ಅಜಿತ್ ದೇವರಮನಿ ಭಾಗವಹಿಸಿ ನ್ಯಾಯಾಲಯದ ಗ್ರಂಥಾಲಯವನ್ನು ಮತ್ತು ತಂಪಾದ ಶುದ್ದ ನೀರಿನ ಯಂತ್ರವನ್ನು ಉದ್ಘಾಟಿಸಿ ಎಲ್ಲಾ ವಕೀಲರ ಮೆಚ್ಚುಗೆಗೆ ಪಾತ್ರರಾದರು.
ಈ ಸಂಧರ್ಭದಲ್ಲಿ ವಕೀಲರ ಸಂಘದ ಅದ್ಯಕ್ಷರಾದ ಎಸ್.ನಾರಾಯಣಪ್ಪ ಮಾತನಾಡಿ ನಾನು ಮೊದಲ ಬಾರಿಗೆ ಅದ್ಯಕ್ಷನಾದ ಸಂಧರ್ಭದಲ್ಲಿ ನೂತನ ನ್ಯಾಯಾಲಯ ಕಟ್ಟಡವನ್ನು ಉದ್ಘಾಟಿಸಿದ್ದು ಎರಡನೆ ಅವಧಿಗೆ ಅದ್ಯಕ್ಷನಾದಾಗ ಗ್ರಾಂಥಾಲಯ ಮತ್ತು ತಂಪಾದ ಶುದ್ದ ಕುಡಿಯುವ ನೀರಿನ ಯಂತ್ರವನ್ನು ಮಾನ್ಯ ನ್ಯಾಯಾಧೀಶರ ವತಿಯಿಂದ ಎಲ್ಲಾ ವಕೀಲರ ಸಹಕಾರದೊಂದಿಗೆ ಉದ್ಘಾಟಿಸಿದ್ದೇವೆ. ಮುಂದಿನ ದಿನಗಳಲ್ಲಿ ಕೊರತೆಯಿರುವ ಎಲ್ಲಾ ಸೌಲಭ್ಯಗಳನ್ನು ಅಳವಡಿಸಲು ಶ್ರಮಿಸುವುದಾಗಿ ತಿಳಿಸಿದರು.
ಕಾರ್ಯದರ್ಶಿ ಎಂ. ವಿಜಯ್ ಕುಮಾರ್, ಹಿರಿಯ ವಕೀಲರಾದ ಡಾ|| ಪಲ್ಲವಿ ಮಣಿ, ಅಮರೇಶ್, ನಂಜುಂಡಪ್ಪ, ಚೆನ್ನಪ್ಪ, ಸರಸ್ವತಿ, ಆರ್. ರಮೇಶ್, ಕೆ.ಸಿ.ಪ್ರಸಾದ್, ಮತ್ತು ವಕೀಲರ ಸಂಘದ ಎಲ್ಲಾ ಪದಾದಿಕಾರಿಗಳು, ಸದಸ್ಯರು ಮತ್ತು ಎಲ್ಲಾ ವಕೀಲರು ಹಾಜರಿದ್ದರು.