ನಂಜನಗೂಡಿನಲ್ಲಿ 68.5ರಷ್ಟು ಮತದಾನ
ಸಂಜೆವಾಣಿ ವಾರ್ತೆ
ನಂಜನಗೂಡು: ಏ.27:- ನಂಜನಗೂಡಿನ ಪಟ್ಟಣದ ಹಲವಾರು ಮತಗಟ್ಟೆಗಳಲ್ಲಿ ಬಿರುಸಿನ ಮತದಾನ ನಡೆಯಿತು ವಿವಿಧ ಬಡಾವಣೆಗಳಿಂದ ಬಂದ ಮತದಾರರು ತಮ್ಮ ಮತ ಯಾವ ಭಾಗದಲ್ಲಿದೆ ಎಂದು ಉಡುಕಾಡಿ ತಮ್ಮ ಮತವನ್ನು ಚಲಾಯಿಸಿದರು. ಪಟ್ಟಣದಲ್ಲಿ ಯಾವುದೇ ಅಹಿತಕರ ಘಟನೆ ಇಲ್ಲದಂತೆ ಆ ಸುಗಮವಾಗಿ ಮತದಾನ ನಡೆಯಿತು.
ಬಿಜೆಪಿ ಪಕ್ಷ ಮತ್ತು ಜೆಡಿಎಸ್ ಪಕ್ಷದ ಕಾರ್ಯಕರ್ತರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ತಮ್ಮ ಪಕ್ಷಕ್ಕೆ ಮತವನ್ನು ಕೇಳುತ್ತಿದ್ದರು. ಮಾಜಿ ಶಾಸಕ ಕಳಲೆ ಕೇಶವಮೂರ್ತಿ ತಮ್ಮ ಮತವನ್ನು ಕಳಲೆಯಲ್ಲಿ ಮತ ಚಲಾಯಿಸಿದರು. ನಂಜನಗೂಡು ಜೂನಿಯರ್ ಕಾಲೇಜು ನಲ್ಲಿ ಮಾಜಿ ಕಾಂಪೆÇೀಸ್ಟ್ ಅಧ್ಯಕ್ಷ ಎಸ್ ಮಹದೇವಯ್ಯ ಮತ ಚಲಾಯಿಸಿದರು.
ಶಾಸಕ ದರ್ಶನ್ ಧ್ರುವ ನಾರಾಯಣ್ ತಾಲೂಕಿನ ಸ್ವಗ್ರಾಮವಾದ ಹೆಗ್ಗವಾಡಿ ಸರ್ಕಾರಿ ಶಾಲೆಯಲ್ಲಿರುವ ಮತಗಟ್ಟೆ ಸಂಖ್ಯೆ 65 ರಲ್ಲಿ ತಮ್ಮ ಸಹೋದರ ಧೀರನ್ ಪಕ್ಷದ ಮುಖಂಡರೊಂದಿಗೆ ಸಾರಥಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸಿದರು ನಂತರ ಮಾತನಾಡಿದ ಅವರು ಭಾರತ ದೇಶದಲ್ಲಿ ಅಭಿವೃದ್ಧಿ ಬಯಸಿ ಬದಲಾವಣೆ ಬಯಸಿ ಎಲ್ಲಾ ಸಮುದಾಯಗಳನ್ನು ಹುಟ್ಟಿಗೆ ಕರದೈಯುವ ಒಳ್ಳೆಯ ವ್ಯವಸ್ಥೆ ನಾವು ಮತದಾನ ಮಾಡಿದ್ದೇವೆ ಎಂದರು ಇದು ಕಾಂಗ್ರೆಸ್ ಭದ್ರಕೋಟೆ ಕಾಂಗ್ರೆಸ್ ಪಕ್ಷದಿಂದ ನಮ್ಮ ತಂದೆ ಧ್ರುವ ನಾರಾಯಣ ಎರಡು ಬಾರಿ ಸಂಸದರಾಗಿದ್ದರು ಉತ್ತಮ ಕೆಲಸ ಮಾಡಿದ್ದಾರೆ ಪಕ್ಷದ ಐದು ಗ್ಯಾರಂಟಿಗಳು ಕೂಡ ಎಲ್ಲರ ಮಹಿಳೆಯರಿಗೆ ತಲುಪಿದೆ ಆದ್ದರಿಂದ ಈ ಬಾರಿಯೂ ಕೂಡ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸುನಿಲ್ ಬಾಸ್ ಗೆಲ್ಲುವ ಎಲ್ಲ ವಾತಾವರಣ ಇದೆ ಎಂದರು
ನಂಜನಗೂಡಿನ 16 ಗ್ರಾಮದಲ್ಲಿ ಸಚಿವ ಡಾಕ್ಟರ್ ಎಚ್ ಸಿ ಮಾದೇವಪ್ಪ ಹಾಗೂ ಚಾಮರಾಜನಗರ ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಬಸ್ ಮತ ಚಲಾಯಿಸಿದರು ಹೆಚ್ಚು ಬಹುಮತಗಳಿಂದ ಸುನಿಲ್ ಗೆಲುವು ಖಚಿತ ಎಂದು ಮಾದೇವಪ್ಪ ವಿಶ್ವಾಸ ವ್ಯಕ್ತಪಡಿಸಿದರು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ ಎಲ್ಲಾ ಜನಾಂಗದ ವಿಶ್ವಾಸ ಕಾಂಗ್ರೆಸ್ ಪಕ್ಷ ಪಡೆದಿದೆ ಆದ್ದರಿಂದ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದೇ ಗೆಲ್ಲುತ್ತಾರೆ ಹೆಚ್ಚಿನ ಮತಗಳಿಂದ 16 ಗ್ರಾಮದ ಸರ್ಕಾರಿ ಶಾಲೆಯಲ್ಲಿರುವ ಮತಗಟ್ಟೆಗೆ ಅಪ್ಪ ಮತ್ತು ಮಗ ಇಬ್ಬರೂ ಒಟ್ಟಿಗೆ ತೆರಳಿ ತಮ್ಮ ಹಕ್ಕನ್ನು ಚಲಾಯಿಸಿದರು. ಕಾಂಪೆÇೀಸ್ಟ್ ನಿಗಮ ಮಂಡಳಿ, ಮಾಜಿ ಅಧ್ಯಕ್ಷ ಎಸ್ ಮಾದೇವಯ್ಯ ಮಾತನಾಡಿ ಚಾಮರಾಜನಗರ ಜಿಲ್ಲೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಅಭ್ಯರ್ಥಿ ಬಾಲ್ ರಾಜ್ ಉತ್ತಮ ಅಭ್ಯರ್ಥಿ ಬಿಜೆಪಿ ಪರ ಮತದಾನ ಆಗಿದೆ ಈ ಬಾರಿ ರಾಜ್ಯದಲ್ಲಿ ಮೋದಿ ಅಲೆ ಇಂದ ಯುವಕರು ಮತ್ತು ಪ್ರಜ್ಞಾವಂತ ಮತದಾರರು ಬಿಜೆಪಿ ಪಕ್ಷಕ್ಕೆ ಮತ ನೀಡಿದ್ದಾರೆ ರೂ. 1 ಲಕ್ಷಕ್ಕೂ ಹೆಚ್ಚು ಮತ ಅಂತರದಿಂದ ಬಿಜೆಪಿ ಪಕ್ಷದ ಅಭ್ಯರ್ಥಿ ಬಾಲ್ರಾಜ್ ಗೆಲ್ಲುತ್ತಾರೆ ಎಂದರು.
ಪಟ್ಟಣದಲ್ಲಿ ಮತ ಚಲಾಯಿಸಿದ ಪ್ರಮುಖರು ನಿಗಮ ಮಂಡಳಿ ಮಾಜಿ ಅಧ್ಯಕ್ಷ ಕೃಷ್ಣಪ್ಪ ಗೌಡ ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ನರಸಿಂಹಸ್ವಾಮಿ ನಗರಸಭೆ ಮಾಜಿ ಅಧ್ಯಕ್ಷರುಗಳಾದ ಶ್ರೀಧರ್ ಶ್ರೀನಿವಾಸ್ ದೊರೆಸ್ವಾಮಿ ಮಹದೇವಸ್ವಾಮಿ ಡಾ ಶ್ರೀಕಾಂತ್ ಡಾ.ಶ್ರೀಧರ್ ವೈದ್ಯ ಡಾಕ್ಟರ್ ಧರ್ಮರಾಜ್ ಉದ್ಯಮಿ ರಾಮಪ್ರಸಾದ್ ಸೇರಿದಂತೆ ಪ್ರಮುಖರು ಮತ ಚಲಾಯಿಸಿದರು.