ಮೋದಿದು ಉದ್ರಿ ಗ್ಯಾರಂಟಿ ನಮ್ದು ನಗದಿ ಗ್ಯಾರಂಟಿ: ಖರ್ಗೆ
ಸಂಜೆವಾಣಿ ವಾರ್ತೆ.
ಚಿತ್ತಾಪುರ: ಪ್ರಧಾನಮಂತ್ರಿ ನರೆಂದ್ರ ಮೋದಿ ಕೊಟ್ಟ ಮಾತಿನಂತೆ ನಡೆದಿಲ್ಲ ಅವರ ಯೋಜನೆಗಳು ಎಲ್ಲಾ ಉದ್ರಿ ಗ್ಯಾರಂಟಿಗಳಾಗಿವೆ ನಮ್ಮ ಕಾಂಗ್ರೆಸ್ ಸರ್ಕಾರದ ಕೂಟ್ಟ ಮಾತ್ತಿನಂತೆ ನಡೆದಿದ್ದೆವೆ ನಮ್ಮ ಗ್ಯಾರಂಟಿಗಳು ನಗದಿ ಗ್ಯಾರಂಟಿಗಳು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಕೋರವಾರ,ಮುಗಳನಾಗಾಂವ್, ಪೇಠಶಿರೂರ ಭಾಗೋಡಿ,
ದಂಡೋತಿ ಗ್ರಾಮದಲ್ಲಿ ಪಕ್ಷದ ಅಭ್ಯರ್ಥಿ ರಾಧಾಕೃಷ್ಣ ಅವರ ಪರ ಮತಯಾಚಿಸಿ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷ ಜನರಿಗೆ ಗ್ಯಾರಂಟಿ ಯೋಜನೆಗಳು ಕೊಡಬಾರದು ಅಂತ ಬಿಜೆಪಿ ರಾಜ್ಯಾಧ್ಯಕ್ಷ ವಿಜೆಯಂದ್ರ ಚುನಾವಣೆ ಆಯೋಗಕ್ಕೆ ದೂರು ನೀಡಿದ್ದಾರೆ. ಅದು ಅಲ್ಲದೆ ನಾವು ನೀಡುವ ಯೋಜನೆಗಳು ಬಿಟ್ಟಿ ಭಾಗ್ಯ ಎಂದು ಹೇಳುತ್ತಾರೆ. ನಾವು ನಿಮ್ಮ ತೆರಿಗೆ ದುಡ್ಡಿನಲ್ಲಿ ನಿಮಗೆ ಐದು ಯೋಜನೆಗಳ ನೀಡುತ್ತಿದ್ದೇವೆ ಆದ್ರೆ ಬಿಜೆಪಿ ಆ ಯೋಜನೆ ಬೇಡಾ ಅನ್ನುತ್ತಾರೆ ನಿಮ್ಮ ದುಡ್ಡು ನಿಮಗೆ ಸೇರಬೇಕು ವಿನಃ ಬಿಜೆಪಿ ಪಕ್ಷಕ್ಕೆ ಸೇರೋದು ಬೇಡಾ ಎಂದು ಜನರಲ್ಲಿ ಮನವಿ ಮಾಡಿದರು.ಭಾವಾನಾತ್ಮಕ ವಿಚಾರಗಳನ್ನು ಇಟ್ಟು ನಾವು ಮತ ಕೇಳಲು ಬಂದಿಲ್ಲ. ಹಿಡಿ ಜನತೆಯ ಬದುಕು ಕಟ್ಟುವ ಯೋಜನೆಗಳು ಇಟ್ಟು ಮತ ಕೇಳಲು ಬಂದೀವಿ ಎಂದರು.
ನಿಮ್ಮ ಆಶೀರ್ವಾದದಿಂದಾಗಿ ರಾಜ್ಯದಲ್ಲಿ ಕಾಂಗ್ರೆಸ್ ಜನಪರ ಆಡಳಿತ ನಡೆಸುತ್ತಿದೆ. ಗ್ಯಾರಂಟಿ ಯೋಜನೆಗಳ ಲಾಭ ಪಡೆಯುತ್ತಿರುವ ಜನರು ನೆಮ್ಮದಿಯಿಂದ ಇದ್ದಾರೆ. ಆದರೆ ಬಿಜೆಪಿ ನಾಯಕರಿಗೆ ಮಾತ್ರ ಸಮಸ್ಯೆ ಶುರುವಾಗಿದೆ. ಹಾಗಾಗಿ ಅವರು ನಮ್ಮ ಯೋಜನೆಗಳನ್ನು ಟೀಕಿಸುತ್ತಿದ್ದಾರೆ ಎಂದರು.
ಸಂಸದರಾಗಿ ಉಮೇಶ್ ಜಾಧವ ನೀವು ಏನು ಮಾಡಿದ್ದೀರಿ , ಲೆಕ್ಕ ಕೊಡಿ ಎಂದು ಆಗ್ರಹಿಸಿದ ಸಚಿವರು ತಾವು ಅಧಿಕಾರಕ್ಕೆ ಬಂದ ನಂತರ ಸುಮಾರು ರೂ 431 ಕೋಟಿ ರೂಪಾಯಿ ಅನುದಾನ ತಂದು ಚಿತ್ತಾಪುರದಲ್ಲಿ ಅಭಿವೃದ್ದಿ ಕಾಮಗಾರಿ ಪ್ರಾರಂಭಿಸಲಾಗಿದೆ ಎಂದರು. ” ಉಮೇಶ್ ಅವರೇ ನೀವು ಮಾಡಿದ್ದು ಒಂದೇ ಸಾಧನೆ ಏನಂದರೆ, ವಂದೆ ಭಾರತ್ ಟ್ರೇನ್ ಬಿಡಿಸಿದ್ದು. ಅದು ಕೂಡಾ ಸರಿಯಾಗಿ ನಡೆಯದೇ ‘ ಒಂದೇ ವಾರಕ್ಕೆ ನಿಂತ ವಂದೇ ಭಾರತ ‘ ಆಗಿ ಹೋಗಿದೆ. ಖರ್ಗೆ ಸಾಹೇಬರು 27 ಹೊಸ ಟ್ರೇನ್ ಬಿಟ್ಟಿದ್ದರು. ಆದರೆ ನಿಮ್ಮ ಹಾಗೆ ಹಸಿರು ಧ್ವಜ ತೋರಿಸಿಲ್ಲ ” ಎಂದರು.
ರಾಜ್ಯದಲ್ಲಿ 5.28 ಲಕ್ಷ ಜನರು ಗೃಹಜ್ಯೋತಿ ಅಡಿಯಲ್ಲಿ ಲಾಭ ಪಡೆದುಕೊಂಡಿದ್ದಾರೆ. ಶಕ್ತಿ ಯೋಜನೆಯಡಿಯಲ್ಲಿ ಪ್ರತಿನಿತ್ಯ 65 ಲಕ್ಷ ಫಲಾನುಭವಿಗಳು ಉಚಿತ ಬಸ್ ಪ್ರಯಾಣ ಮಾಡುತ್ತಿದ್ದಾರೆ. ಅನ್ನಭಾಗ್ಯ ಅಡಿಯಲ್ಲಿ ಜಿಲ್ಲೆಯಲ್ಲಿ 19.16 ಲಕ್ಷ ಜನರಿಗೆ ತಲಾ ರೂ 174 ಹಣ ನೇರವಾಗಿ ಖಾತೆಗೆ ಜಮಾ ಮಾಡಲಾಗುತ್ತಿದೆ. ಗೃಹ ಲಕ್ಷ್ಮೀ ಯೋಜನೆಯಡಿಯಲ್ಲಿ ಜಿಲ್ಲೆಯಲ್ಲಿ ಒಟ್ಟು 5.22 ಲಕ್ಷ ಫಲಾನುಭವಿಗಳು ಲಾಭ ಪಡೆದುಕೊಳ್ಳುತ್ತಿದ್ದಾರೆ. ಈ ಎಲ್ಲ ಯೋಜನೆಗಳಿಂದಾಗಿ ಪ್ರತಿ ಕುಟುಂಬಕ್ಕೆ ಕನಿಷ್ಠ 8 ಸಾವಿರ ದೊರಕುತ್ತಿದೆ. ಇದರಿಂದಾಗಿ ಅವರ ಸಂಸಾರ ನಿರ್ವಹಣೆಯಾಗುತ್ತಿದೆ ಎಂದು ಸಚಿವರು ವಿವರಿಸಿದರು.
ಬಿಜೆಪಿಯವರು ಅನೈತಿಕವಾಗಿ ಟಿಕೇಟ್ ಹಂಚಿದ್ದರು.
ಮಣಿಕಂಠ ರಾಡೋಡ್ ನಂತ ಕ್ರಿಮಿನಲ್ ನನ್ನು ಚುನಾವಣೆಗೆ ನಿಲ್ಲಿಸಿದ್ದ ಬಿಜೆಪಿಗೆ ನಾಚಿಕೆಯಾಗಬೇಕು. ಮಕ್ಕಳ ಹಾಲಿನ ಪೌಡರ್, ಅನ್ನ ಭಾಗ್ಯ ಅಕ್ಕಿ ಕಳ್ಳತನ ಮಾಡುವ, ಜೂಜು ನಡೆಸುವ ವ್ಯಕ್ತಿಗೆ ಟಿಕೇಟ್ ಕೊಟ್ಟಿರುವ ಬಿಜೆಪಿ ಹಾಗೂ ಜಾಧವ್ ಚಿತ್ತಾಪುರ ಜನರ ಕ್ಷಮೆ ಕೇಳಬೇಕು. ಬಿಜೆಪಿ ಚಿತ್ತಾಪುರ ಕ್ಷೇತ್ರದ ಅಭ್ಯರ್ಥಿ ಮಣಿಕಂಠ ರಾಠೋಡ್ ಈಗ ಅವನೆಲ್ಲಿ ? ನಾಪತ್ತೆ ಆಗಿದ್ದಾನಾಲ್ಲ ? ಕಾನೂನಾತ್ಮಕವಾಗಿ ಆರನೆಯ ಗ್ಯಾರಂಟಿ ಜಾರಿಗೊಳಿಸಿರುವುದಾಗಿ ನಾನು ಮೊದಲೇ ಹೇಳಿದ್ದೆ ” ಅದು ಸಹ ಮಾಡಿರುವುದಾಗಿ ಖರ್ಗೆ ಹೇಳಿದರು.
ಒಂದೇ ಭಾರತ ರೈಲು ಒಂದೇ ವಾರ ನಡೆಯಿತ್ತು ಈಗ ಬರುತ್ತಿದಿಯಾ ಎಂದು ಜನರಲ್ಲಿ ಪ್ರಶ್ನಿಸಿದರು. ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಈಗಾಗಲೇ ನಾವು ಕಳೆದುಕೊಂಡಿದ್ದೇವೆ ಈಗ ಮತ್ತೆ ಕಳೆದುಕೋಳ್ಳಬಾರದು ಆದ್ದರಿಂದ ಕಾಂಗ್ರೆಸ್ ಪಕ್ಷದ ಲೋಕಸಭಾ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಅವರಿಗೆ ಮತ ನೀಡಿ ಗೆಲ್ಲಿಸಬೇಕು ಎಂದರು.ರಾಜ್ಯ ಸಭಾದಲ್ಲಿ ಮಲ್ಲಿಕಾರ್ಜುನ್ ಖರ್ಗೆ, ಲೋಕಸಭಾದಲ್ಲಿ ರಾಧಾಕೃಷ್ಣ ದೊಡ್ಡಮನಿ, ರಾಜ್ಯ ಸಭಾದಲ್ಲಿ ಪ್ರೀಯಾಂಕ್ ಖರ್ಗೆ ನಾವು ಮೂರು ಜನ ಸೇರಿ ಈ ಭಾಗದ ಜನರ ಕಣ್ಣಿರು ಒರೆಸುವ ಕೆಲಸ ಮಾಡುವ ಜೊತೆಗೆ ರಾಜ್ಯದ ಅಭಿವೃದ್ಧಿಗೆ ಶ್ರಮಿಸುತ್ತೆವೆ ಎಂದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ಮಾಜಿ ಶಾಸಕ ವಿಶ್ವನಾಥ್ ಪಾಟೀಲ್ ಹೆಬ್ಬಾಳ, ರಮೇಶ್ ಮರಗೋಳ್, ಶಂಭುಲಿಂಗ ಗುಂಡಗುರ್ತಿ, ಪ್ರಭುರಾಜ ಕಾಂತಾ, ರಾಜೇಶ್ ಗುತ್ತೇದಾರ್, ಸುನೀಲ್ ದೊಡ್ಡಮನಿ, ವಿಜಯಕುಮಾರ್ ಚವ್ಹಾಣ್, ನಾಮದೇವ ರಾಠೋಡ್, ಶಿವಕುಮಾರ್ ಯಾಗಾಪೂರ, ಶಿವಯ್ಯ ಗುತ್ತೇದಾರ್, ಸೇರಿದಂತೆ ಇತರರು ಇದ್ದರು.