ಮತದಾನ ಬಹಿಷ್ಕಾರ: ಇಂಡಿಗನತ್ತ ಮತಗಟ್ಟೆ ಧ್ವಂಸ
ಸಂಜೆವಾಣಿ ವಾರ್ತೆ
ಹನೂರು ಏ 27 :- ತಾಲೂಕಿನ ಮಲೆ ಮಹದೇಶ್ವರಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಂಡಿಗನತ್ತ ಗ್ರಾಮದ ಜನರು ” ಅಧಿಕಾರಿಗಳ ಮೇಲೆ ಹಲ್ಲೆ, ಮತ ಯಂತ್ರಗಳಿಗೆ ಬೆಂಕಿ, ಲಾಠಿ ಪ್ರಹಾರ ” ಇಂಡಿಗನತ್ತಗ್ರಾಮದ ಮತಗಟ್ಟೆ ದ್ವಂಸ ಮಾಡಿರುವ ಘಟನೆ ಶುಕ್ರವಾರ ಜರುಗಿದೆ.
ಸ್ವಾತಂತ್ರ್ಯ ಬಂದಾಗಿನಿಂದಲೂ ಮಹದೇಶ್ವರ ಗ್ರಾಮಪಂಚಾಯಿತಿ ವ್ಯಾಪ್ತಿಯ ಗ್ರಾಮಗಳು ಕನಿಷ್ಠ ಮೂಲಸೌಕರ್ಯದಿಂದಲೂ ವಂಚಿತಗೊಂಡಿವೆ. ಕುಡಿಯುವ ನೀರು, ರಸ್ತೆ, ವಿದ್ಯುತ್, ಆರೋಗ್ಯ, ಶಿಕ್ಷಣ ಎಂಬುದು ಇಲ್ಲಿನ ಜನರಿಗೆ ಮರೀಚಿಕೆಕಯಾಗಿಯೇ ಉಳಿದಿದೆ. ಇದರ ಬಗ್ಗೆ ಇದುವರೆಗೆ ಆಯ್ಕೆಯಾಗಿರುವ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಗೊತ್ತಿದ್ದರೂ ನಮಗೆ ಸೌಲಭ್ಯ ಕಲ್ಪಿಸಲಾಗಿಲ್ಲ. ಚುನಾವಣೆ ಬಂದಾಗಲೆಲ್ಲಾ ನಾವು ಮತದಾನ ಬಹಿಷ್ಕಾರ ಮಾಡುವುದಾಗಿ ಹೇಳಿದಾಗಿ ಸ್ಥಳಕ್ಕೆ ಅಧಿಕಾರಿಗಳು ಸೌಲಭ್ಯ ಕಲ್ಪಿಸುವುದಾಗಿ ಭರವಸೆ ನೀಡುತ್ತಾರೆ. ಚುನಾವಣೆ ಮುಗಿದ ಬಳಿಕ ಇತ್ತ ತಿರುಗಿಯೂ ನೋಡುವುದಿಲ್ಲ. ಇದರಿಂದ ಬೇಸತ್ತು ಈ ಬಾರಿ ಮತದಾನ ಮಾಡಲೇಬಾರದು ಎಂದು ಐದು ಗ್ರಾಮಗಳ ಜನರು ದೃಢಸಂಕಲ್ಪ ಮಾಡಿದ್ದೇವೆ.
ಇದರ ಪರಿಣಾಮ ಇವಿಎಂ, ಮತ ಯಂತ್ರೋಪಕರಣ ದ್ವಂಸಗೊಂಡಿದ್ದು, ಮನವೊಲಿಸಲು ತೆರಳಿದ್ದ ತಹಸೀಲ್ದಾರ್ ಗುರುಪ್ರಸಾದ್, ಇನ್ಸ್ಪೆಕ್ಟರ್ ಜಗದೀಶ್, ಪಿಡಿಒ ಕಿರಣ್ ಹಾಗೂ ಇನ್ನಿತರ ಅಧಿಕಾರಿಗಳಿಗೆ ಹಲ್ಲೆ ಮಾಡಿ ಪೆಟ್ಟು ಬಿದ್ದು ಗಾಯಗೊಂಡಿದ್ದಾರೆ. ಚಾಮರಾಜನಗರ ಲೋಕ ಸಭಾ ಕ್ಷೇತ್ರ ಚುನಾವಣೆ ಹಿನ್ನಲೆ ಇಂಡಿಗನತ್ತ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತಗಟ್ಟೆ ತೆರೆಯಲಾಗಿದ್ದರು ಇಲ್ಲಿನ ಜನರು ಮತ ಬಹಿಷ್ಕಾರ ಮಾಡಿ ದೂರ ಉಳಿದಿದ್ದರು.
ಬಳಿಕ ತಹಸೀಲ್ದಾರ್ ಗುರುಪ್ರಸಾದ್, ಇನ್ಸ್ಪೆಕ್ಟರ್ ಜಗದೀಶ್ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಮತದಾರರನ್ನು ಮನವೊಲಿಸಲು ಪ್ರಯತ್ನಿಸಿದರು ಇಂಡಿಗನತ್ತ ಗ್ರಾಮದ ಜನರು ಇದಕ್ಕೆ ಒಲ್ಲೆ ಎಂದಿದ್ದಾರೆ . ಸ್ವತಂತ್ರ ಬಂದ್ ಇಷ್ಟು ವರ್ಷವಾದರೂ ಮೂಲ ಸೌಕರ್ಯ ಒದಗಿಸಿಲ್ಲ ನಾವು ಮತದಾನ ಮಾಡಲ್ಲ ಎಂದು ದೂರ ಉಳಿದು ಆಕ್ರೋಶ ವ್ಯಕ್ತಪಡಿಸಿದ್ದರು.
ಸಮೀಪದ ಮೆಂದಾರೆ ಗ್ರಾಮದ ಹಾಡಿ ಜನರು ಮತಗಟ್ಟೆಗೆ ಬಂದು ಮತ ಚಲಾವಣೆ ಮಾಡಲು ಮುಂದಾಗಿದ್ದಾರೆ. ಈ ನಡುವೆ ರೊಚ್ಚಿಗೆದ್ದ ನೂರಾರು ಜನರು ಅಧಿಕಾರಿಗಳ ವಿರುದ್ಧ ತೋರುಗಿ ಬಿದ್ದು, ನಡುವೆ ಮಾತಿಗೆ ಮಾತು ಬೆಳೆದು ಗಲಾಟೆ ಎಬ್ಬಿದೆ. ಇದರ ಪರಿಣಾಮ ತಳ್ಳಾಟ, ಹಲ್ಲೆ, ಕಲ್ಲು ತುರಾಟವಾಗಿದ್ದು ಮತಗಟ್ಟೆಯಲ್ಲಿದ್ದ ಇವಿಎಂ ಸೇರಿದಂತೆ ಟೇಬಲ್, ಕುರ್ಚಿ, ವಯರ್ಲೆಸ್ ಸಲಕರಣೆಗಳಿಗೆ ಹಾನಿ ಮಾಡಿದ್ದಾರೆ ಅಲ್ಲದೆ ಅಧಿಕಾರಿಗಳನ್ನು ಕೂಡಿಹಾಕಿ ಕೆಲ ಸಾಮಗ್ರಿಗಳಿಗೆ ಬೆಂಕಿ ಹಚ್ಚಿದ್ದಾರೆ ಮತದಾನ ಸ್ಥಗಿತವಾಗಿದೆ.
ಈ ಸಂಬಂಧ ಮಲೆ ಮಹದೇಶ್ವರಬೆಟ್ಟ ಪೆÇಲೀಸ್ ಠಾಣೆಯಲ್ಲಿ ಅಧಿಕಾರಿಗಳು ದೂರು ನೀಡಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.