ಹಿಪ್ಪರ್ಗಾ ಗ್ರಾಮದಲ್ಲಿ ಅಂಬೇಡ್ಕರ್-ಜಗಜೀವನರಾಮ ಜಯಂತಿ
ಚಿಟ್ಟಗುಪ್ಪಾ: ಏ.27:ತಾಲೂಕಿನ ಹಿಪ್ಪರ್ಗಾ ಗ್ರಾಮದಲ್ಲಿ ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಜಿಲ್ಲಾ ಉಪಾಧ್ಯಕ್ಷರಾದ ಕಮಲಾಕರ ಹೆಗಡೆ ರವರ ಮಾರ್ಗದರ್ಶನದಲ್ಲಿ ಇತ್ತಿಚೀಗೆ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರರವರ 133 ನೇ ಜಯಂತಿ ಹಾಗು ಹಸಿರು ಕ್ರಾಂತಿಯ ಹರಿಕಾರ ದೇಶದ ಮಾಜಿ ಉಪ ಪ್ರಧಾನ ಮಂತ್ರಿ ಡಾ. ಬಾಬು ಜಗಜೀವನರಾಮ ರವರ 117ನೇ ಜಯಂತಿಯನ್ನು ಸರಳವಾಗಿ ಆಚರಣೆ ಮಾಡಲಾಯಿತ್ತು.
ಇವೆಳೆ ಲಕ್ಷ್ಮಣ ಬಾಜಿಯವರು ಈ ಸಂದರ್ಭದಲ್ಲಿ ಮಾತನಾಡಿ, ಬಾಬಾ ಸಾಹೇಬರು ಹೇಳಿಕೊಟ್ಟ ಶಿಕ್ಷಣ, ಸಂಘಟನೆ, ಹೋರಾಟ ಎಂಬ ಮಾರ್ಗದಲ್ಲಿ ಸಮುದಾಯ ನಡೆಯಬೇಕು, ನಮ್ಮ ಮಕ್ಕಳನ್ನು ಒಳ್ಳೆಯ ಶಿಕ್ಷಣ ನೀಡಬೇಕು, ಚಿಕ್ಕ ಮಕ್ಕಳನ್ನು ಮೌಡ್ಯಾದಿಂದ ದೂರ ಇಡಬೇಕೆಂದು ಹೇಳಿದರು. ಉದಯಾನಂದ ನಾಂದೆಡಕರರವರು ಬಾಬಾ ಸಾಹೇಬರ ಭಾವಚಿತ್ರಕ್ಕೆ ಹಾಗು ಪ್ರಕಾಶ ವಗ್ಗೆರವರು ಬಾಬುಜಿರವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿದರು.
ದಲಿತ ಮುಖಂಡರುಗಳಾದ ಪರಶುರಾಮ ಗೌಡಗಾಂವೆ, ಸಚಿನ ನಾಂದೆಡಕರ, ಲಕ್ಷ್ಮಣ ಲಾಲಪ್ಪ, ಬಾಬು ಬಾಜಿ, ಲಕ್ಷ್ಮಣ ಹಾಲಿಕರ , ಬಸವರಾಜ ಬಾಜಿ, ಸಿದ್ದಪ್ಪಾ ಮೇತ್ರೆ , ನಿವೃತಿ ಹಲಗೆ,ಹರೀಶ ಮಾಳಗೆ,ಹುಲೆಪ್ಪ ಭೋಲಾ, ಅಮರ ಮಾಳಗೆ, ಕಂಟೆಪ್ಪಾ ಹಾಲಿಕರ ಹಾಗು ಇ ವೆಳೆ ಸಮಾಜದ ಇತರರು ಉಪಸ್ಥಿತರಿದ್ದರು.