ದ್ವಿ ಚಕ್ರ ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಮದ್ಯ ಜಪ್ತಿ
ಯಾದಗಿರಿ : ಏ.27:ಭಾರತ ಚುನಾವಣಾ ಆಯೋಗವು ಸಾರ್ವತ್ರಿಕ ಲೋಕಸಭಾ ಚುನಾವಣೆ-2024 ಘೋಷಿಸಿ 2024ರ ಮಾರ್ಚ್ 16 ರಿಂದ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಚುನಾವಣೆ ಶಾಂತಿಯುತವಾಗಿ ನಿಷ್ಪಕ್ಷಪಾತವಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮವಹಿಸಲು ಜಿಲ್ಲೆಯ ವ್ಯಾಪ್ತಿಯಲ್ಲಿ ನಕಲಿ ಮದ್ಯ, ಅಕ್ರಮ ಮದ್ಯ, ಕಲಬೆರಕೆ ಸೇಂದಿ, ಕಳ್ಳಭಟ್ಟಿ ಸಾರಾಯಿ ಹಾಗೂ ಇತರೆ ಅಬಕಾರಿ ಅಕ್ರಮ ಪದಾರ್ಥಗಳ ತಯಾರಿಕೆ ಸಾಗಾಣಿಕೆ ಸಂಗ್ರಹಣೆ ಹಾಗೂ ಮಾರಾಟಗಳಂತಹ ಅಕ್ರಮ ಚಟುವಟಿಕೆಗಳು ನಡೆಯದಂತೆ ಚುನಾವಣಾ ಆಯೋಗದ ನಿರ್ದೇಶನದಂತೆ ಕ್ರಮ ಕೈಗೊಂಡಿರುವ ಮಾಹಿತಿ ಸಲ್ಲಿಸಲಾಗಿದೆ ಎಂದು ಯಾದಗಿರಿ ಅಬಕಾರಿ ಉಪ ಆಯುಕ್ತೆ ಶಾರದಾ ಸಿ.ಕೋಲಕಾರ ಅವರು ತಿಳಿಸಿದ್ದಾರೆ.
ಪ್ರಕರಣ ಸಂ.01, 2024ರ ಏಪ್ರಿಲ್ 24 ರಂದು ಮಾನ್ಯ ಅಬಕಾರಿ ಅಪರ ಆಯುಕ್ತರು ಕೇಂದ್ರ ಸ್ಥಾನ ಬೆಳಗಾವಿ, ಮಾನ್ಯ ಅಬಕಾರಿ ಜಂಟಿ ಆಯುಕ್ತರು ಕಲಬುರಗಿ ವಿಭಾಗ, ಕಲಬುರಗಿ ಹಾಗೂ ಮಾನ್ಯ ಅಬಕಾರಿ ಉಪ ಆಯುಕ್ತರು, ಯಾದಗಿರಿ ಅವರು ನಿರ್ದೇಶನ ಹಾಗೂ ಶ್ರೀ ಆನಂದ ಉಕ್ಕಲಿ ಅಬಕಾರಿ ಉಪ ಅಧೀಕ್ಷಕರು ಶಹಾಪುರ ಉಪ ವಿಭಾಗ ಅವರು ಮಾರ್ಗದರ್ಶನದಲ್ಲಿ ಖಚಿತ ಭಾತ್ಮಿಯ ಮೇರೆಗೆ ಶ್ರೀ ಮಹೇಶ ಚೌಧರಿ ಅಬಕಾರಿ ಉಪ ನಿರೀಕ್ಷಕರು, ಸುರಪುರ ವಲಯ ಹಾಗೂ ಅಬಕಾರಿ ಮುಖ್ಯ ಪೇದೆಗಳಾದ ಶ್ರೀ ಸಂದೀಪ್ ನಾಯಕ, ಶ್ರೀ ಸಂಪತ್ ಕುಮಾರ ಮತ್ತು ಶ್ರೀ ಯಮನಪ್ಪ, ವಾಹನ ಚಾಲಕರಾದ ಶ್ರೀ ರಮೇಶ ದೇಸಾಯಿ ಹಾಗೂ ಗೃಹ ರಕ್ಷಕದಳ ಸಿಬ್ಬಂದಿಗಳಾದ ಶ್ರೀ ನಿಂಗಣ್ಣಗೌಡ, ಶ್ರೀ ಚಂದಪ್ಪ, ಶ್ರೀ ರಂಗಪ್ಪ, ಶ್ರೀ ಬಸವರಾಜ, ಶ್ರೀ ಅರ್ಜುನ ಹಾಗೂ ಶ್ರೀ ಪರಶುರಾಮ ರವರು ಕೂಡಿಕೊಂಡು ಸುರಪುರ ನಗರದ ಹಸನಾಪುರ ಕ್ರಾಸನಲ್ಲಿರುವ ನಾಲ್ವಡಿ ರಾಜ ವೆಂಕಟಪ್ಪ ನಾಯಕ ವೃತ್ತದ ಹತ್ತಿರ ರಸ್ತೆಗಾವಲು ಮಾಡುತ್ತಿದ್ದಾಗ ಕೆಎ-33-ಕ್ಯೂ-5770 ದ್ವಿ ಚಕ್ರ ವಾಹನದಲ್ಲಿ ಅಕ್ರಮವಾಗಿ 17.280 ಲೀ ಮದ್ಯವನ್ನು ಮಾರಾಟದ ಉದ್ದೇಶದಿಂದ ಸಾಗಾಟ ಮಾಡುತ್ತಿರುವುದು ಕಂಡುಬಂದಿರುತ್ತದೆ. ಪ್ರಯುಕ್ತ, ಆರೋಪಿಯಾದ ಮಹದೇವಪ್ಪ ತಂದೆ ಭೀಮಣ್ಣ ಸಾ.ರತ್ತಾಳ ತಾ.ಸುರಪುರ ಜಿಲ್ಲೆ.ಯಾದಗಿರಿ ಈತನಿಗೆ ಅಡಿ.P.ಅ ಕಲಂ 41 (1) (ಎ) ಪ್ರಕಾರ ನೋಟಿಸ್ ಜಾರಿ ಮಾಡಿದೆ. ಇತನ ವಿರುದ್ಧ ಹಾಗೂ ವಾಹನ ಮಾಲಿಕನ ವಿರುದ್ಧ ಶ್ರೀ ಮಹೇಶ್ ಚೌಧರಿ ಅಬಕಾರಿ ಉಪ ನಿರೀಕ್ಷಕರು ಸುರಪುರ ವಲಯ ಅವರು ಪ್ರಕರಣ ದಾಖಲಿಸಿಕೊಂಡಿರುತ್ತಾರೆ. ಪತ್ತೆ ಹಚ್ಚಲಾದ ಮುದ್ದೆ ಮಾಲಿನ ಮೌಲ್ಯ ರೂ.7680 ವಾಹನದ ಮೌಲ್ಯ ಅಂದಾಜು ರೂ.75000 ಗಳು ಆಗಿರುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.