ಸಹಾಯಕ ಚುನಾವಣಾಧಿಕಾರಿಗಳೊಂದಿಗೆ ಡಿ.ಸಿ. ಸಭೆ:ವೋಟರ್ ಟರ್ನ್ ಔಟ್ ಮಾಹಿತಿ ಕ್ಷಣ-ಕ್ಷಣ ಅಪಲೋಡ್ ಮಾಡಬೇಕು:ಬಿ.ಫೌಜಿಯಾ ತರನ್ನುಮ್
ಕಲಬುರಗಿ.ಏ.26:ಗುಲಬರ್ಗಾ ಲೋಕಸಭಾ ಕ್ಷೇತ್ರಕ್ಕೆ ಮೇ 7 ರಂದು ಮತದಾನ ನಡೆಯಲಿದ್ದು, ಅಂದು ಗಂಟೆವಾರು ಕ್ಷಣ-ಕ್ಷಣ ಮಾಹಿತಿ ಚುನಾವಣಾ ಆಯೋಗವು ನಿಗದಿ ಮಾಡಿರುವ ಸಾಫ್ಟವೇರ್‍ನಲ್ಲಿ ಅಪಲೋಡ್ ಮಾಡಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಬಿ. ಫೌಜಿಯಾ ತರನ್ನುಮ್ ಹೇಳಿದರು.
ಶುಕ್ರವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿಯ ಕೆಸ್ವಾನ್ ವಿ.ಸಿ. ಸಭಾಂಗಣದಲ್ಲಿ ಸಹಾಯಕ ಚುನಾವಣಾಧಿಕಾರಿಗಳು ಹಾಗೂ ಪೆÇೀಸ್ಟಲ್ ಬ್ಯಾಲೆಟ್ ನೋಡಲ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ನಿಧಾನಗತಿ ಮತದಾನ ಪ್ರಮಾಣ ಅಪಲೋಡ್ ಮಾಡುವುದನ್ನು ಯಾವುದೇ ಕಾರಣಕ್ಕು ಸಹಿಸುವುದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದ ಅವರು ಇದನ್ನು ಉಲ್ಲಂಘಿಸಿದಲ್ಲಿ ಸಂಬಂಧಿಸಿದವರ ಮೇಲೆ ನಿರ್ದಾಕ್ಷಿಣ್ಯ ಶಿಸ್ತು ಕ್ರಮ ಕೈಗೊಳ್ಳಲು ಹಿಂದೇಟು ಹಾಕುವುದಿಲ್ಲ ಎಂದರು.
ಮತದಾನ ಪ್ರಮಾಣ ಕ್ಷಣ-ಕ್ಷಣ ಮಾಹಿತಿ ದಾಖಲಿಸಲು ಆಯಾ ವಿಧಾನಸಭಾ ಕ್ಷೇತ್ರದ ಸೆಕ್ಟರ್ ಅಧಿಕಾರಿಗಳು, ಬಿ.ಎಲ್.ಓ ಅಥವಾ ಸ್ವಯಂ ಸೇವಕರನ್ನು ಗುರುತಿಸಿ ಅವರ ಮೊಬೈಲ್ ನಲ್ಲಿ ಸಾಫ್ಟವೇರ್ ತಂತ್ರಾಂಶ ಡೌನ್ ಲೋಡ್ ಮಾಡಿಸಬೇಕು. ಇನ್ನು ತಂತ್ರಾಂಶ ಡೌನ್ ಲೋಡ್ ಮಾಡಿಕೊಂಡ ಸಿಬ್ಬಂದಿ ಮತದಾನ ಪ್ರಮಾಣ ಅದರಲ್ಲಿ ದಾಖಲಿಸಬೇಕು ಎಂದು ಸಹಾಯಕ ಚುನಾವಣಾಧಿಕಾರಿಗಳಿಗೆ ಡಿ.ಸಿ. ನಿರ್ದೇಶನ ನೀಡಿದರು.
ಮತದಾನ ದಿನದಂದು 1,000 ಜನರಿಂದ ಮಾಕ್ ಪೆÇೀಲ್ ಮಾಡಿಸಿದ ನಂತರವೇ ಮತದಾನ ಪ್ರಕ್ರಿಯೆ ನಿಗದಿತ ಸಮಯಕ್ಕೆ
ಆರಂಭಿಸಬೇಕು. ಮತದಾನ ಶಾಂತಿಯುತವಾಗಿ ಮತ್ತು ಯಾವುದೇ ದೂರುಗಳಿಗೆ ಅವಕಾಶ ನೀಡದಂತೆ ನಡೆಸಬೇಕು. ಈ ಸಂಬಂಧ ಕೂಡಲೆ ಪಿ.ಆರ್.ಓ ಮತ್ತು ಎ.ಪಿ.ಆರ್.ಓ. ಗಳಿಗೆ ಎರಡನೇ ಹಂತದ ತರಬೇತಿ ನಡೆಸಿ ಮತದಾನ ದಿನದ ಚಟುವಟಿಕೆ ಮತ್ತು ಜವಾಬ್ದಾರಿ ಕುರಿತು ಸಮಗ್ರ ತರಬೇತಿ, ಮಾರ್ಗಸೂಚಿ ಬಗ್ಗೆ ತಿಳಿಹೇಳಬೇಕು ಎಂದರು.
ಸಿಬ್ಬಂದಿ ಮಸ್ಟರಿಂಗ್ ಗೆ ತೆರಳುವುದು ಸೇರಿದಂತೆ ಮತದಾನ ದಿನದಂದು ಕೈಗೊಳ್ಳಬೇಕಾದ ಒಟ್ಟಾರೆ 26 ಚಟುವಟಿಕೆಗಳು ಕಾಲಮಿತಿಯಲ್ಲಿ ನಡೆಯಬೇಕು. ಇವುಗಳು ಸರಿಯಾದ ರೀತಿಯಲ್ಲಿ ಜರುಗುವಂತೆ ನಿಗಾ ವಹಿಸಲು ಸೆಕ್ಟರ್ ಅಧಿಕಾರಿಗಳನ್ನು, ಪೆÇೀಸ್ಟಲ್ ಅಧಿಕಾರಿಗಳನ್ನು ಹೆಚ್ಚುವರಿ ಜವಾಬ್ದಾರಿ ನೀಡಬೇಕು. ಮೇ 1 ರೊಳಗೆ ಈ ಸಂಬಂಧ ಸಿಬ್ಬಂದಿಗಳಿಗೆ ತರಬೇತಿ ನೀಡಬೇಕು ಎಂದರು.
ಇ.ವಿ.ಎಂ. ಕಮಿಷನಿಂಗ್ ಸಂಬಂಧಪಟ್ಟಂತೆ ಎಲ್ಲಾ ಸಾಮಗ್ರಿಗಳನ್ನು ಎ.ಆರ್.ಓ. ಗಳಿಗೆ ಡಿ.ಸಿ. ಕಚೇರಿಯಿಂದ ನೀಡಲಾಗಿದೆ. ಏನಾದರು ಸಾಮಗ್ರಿ ಕೊರತೆ ಇದ್ದಲ್ಲಿ ಕೂಡಲೆ ಗಮನಕ್ಕೆ ತಂದಲ್ಲಿ ಪೂರೈಸಲಾಗುವುದು. ಪೆÇೀಸ್ಟಲ್ ಬ್ಯಾಲೆಟ್ ಆಯ್ಕೆ ಮಾಡಿಕೊಂಡವರು ಮತದಾನ ದಿನದಂದು ಮತಗಟ್ಟೆಗೆ ಬಂದು ಮತ ಚಲಾಯಿಸುವಂತಿಲ್ಲ. ಯಾವುದೋ ಕಾರಣಕ್ಕೆ ಪೆÇೀಸ್ಟಲ್ ಬ್ಯಾಲೆಟ್ ಮೂಲಕ ಮತದಾನ ಮಾಡಿಲ್ಲ, ಹೀಗಾಗಿ ಮತದಾನಕ್ಕೆ ಅವಕಾಶ ನೀಡುವಂತೆ ಯಾವುದೇ ಮತದಾರರು ಮತದಾನ ದಿನದಂದು ಬಂದಲ್ಲಿ ಅದಕ್ಕೆ ಅವಕಾಶ ನೀಡಬಾರದು ಎಂದು ಡಿ.ಸಿ. ಬಿ.ಫೌಜಿಯಾ ತರನ್ನುಮ್ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.
ವೋಟರ್ ಸ್ಲಿಪ್ ಏ.28 ರೊಳಗೆ ವಿತರಿಸಿ:ಮತದಾರರಿಗೆ ಮತದಾನ ದಿನ, ಸಮಯ, ಮತಗಟ್ಟೆ ವಿಳಾಸ ವಿವರ ಇರುವ ವೋಟರ್ ಸ್ಲಿಪ್ ಗಳನ್ನು, ವೋಟರ್ ಗೈಡ್ ಗಳನ್ನು ಇದೇ ಏಪ್ರಿಲ್ 28 ರೊಳಗೆ ಬಿ.ಎಲ್.ಓ. ಮೂಲಕ ತಲುಪಿಸಬೇಕು. ವೋಟರ್ ಸ್ಲಿಪ್ ವಿತರಣೆಯಾಗಿರುವ ಬಗ್ಗೆ ಎ.ಆರ್.ಓ. ಗಳು ಖಾತ್ರಿಪಡಿಸಿಕೊಳ್ಳಬೇಕು ಎಂದರು.
ಮೇ.1ಕ್ಕೆ ಚುನಾವಣಾ ಕರ್ತವ್ಯ ಸಿಬ್ಬಂದಿಗೆ ಮತ ಚಲಾವಣೆಗೆ ಅವಕಾಶ:ಚುನಾವಣಾ ಕರ್ತವ್ಯದಲ್ಲಿರುವ ಪಿ.ಆರ್.ಓ, ಎ.ಪಿ.ಆರ್.ಓ ಹಾಗೂ ಇತರೆ ಸಿಬ್ಬಂದಿಗಳು ಪೆÇೀಸ್ಟಲ್ ಬ್ಯಾಲೆಟ್ ಮೂಲಕ ಮೇ 1 ರಂದು ಆಯಾ ವಿಧಾನಸಭಾ ಕ್ಷೇತ್ರದ ಕೇಂದ್ರ ಸ್ಥಾನದಲ್ಲಿ ಮತದಾನಕ್ಕೆ ಫೆಸಿಲಿಟೇಷನ್ ಸೆಂಟರ್ ತೆರೆಯಲಾಗುವುದು. ಈ ಸಿಬ್ಬಂದಿಗಳಿಗೆ ಮತ ಚಲಾಯಿಸುವ ನಮೂನೆ 12, 12ಎ ನಮೂನೆ ಪೆÇೀಸ್ಟಲ್ ಬ್ಯಾಲೆಟ್ ಇಂದೇ ಹಂಚಿಕೆಯಾಗಬೇಕು. ಇವುಗಳ ಎಂಟ್ರಿ ಕಾರ್ಯ ಸಹ ಶುಕ್ರವಾರ ರಾತ್ರಿ ಒಳಗಾಗಿ ಮುಗಿಸಬೇಕು. ಇಲ್ಲದಿದ್ದಲ್ಲಿ ಆಯಾ ಕ್ಷೇತ್ರದ ಪೆÇೀಸ್ಟಲ್ ನೋಡಲ್ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಇನ್ನೂ ಅಗತ್ಯ ಸೇವೆಗಳ ಅಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗಳ ಗೈರು ಮತದಾರರ (ಂಗಿಇS) ವರ್ಗದ ಮತದಾರರಿಗೆ ಮೇ 1, 2 ಹಾಗೂ 3 ರಂದು ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿಯಲ್ಲಿ ಮಾತ್ರ ಮತದಾನಕ್ಕೆ ಅವಕಾಶ ಕಲ್ಪಿಸಲಾಗುತ್ತಿದ್ದು, ಕಲಬುರಗಿ ಜಿಲ್ಲೆಯ ಮತದಾರರು ಮಾತ್ರ ಇಲ್ಲಿ ಮತದಾನ ಮಾಡಬಹುದಾಗಿದೆ. ಮತದಾನಕ್ಕೆ ಸಕಲ ಸಿದ್ಧತೆ ಕೈಗೊಳ್ಳುವಂತೆ ಜಿಲ್ಲಾ ಚುನಾವಣಾಧಿಕಾರಿಗಳೂ ಆದ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಸಂಬಂಧಪಟ್ಟ ನೋಡಲ್ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ ದೇವಿದಾಸ್, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಮತ್ತು ಪೆÇೀಸ್ಟಲ್ ನೋಡಲ್ ಅಧಿಕಾರಿ ಗಂಗಾಧರ ಎಸ್.ಮಾಳಗಿ ಸೇರಿದಂತೆ ಕ್ಷೇತ್ರದ ಎಲ್ಲಾ ಚುನಾವಣಾಧಿಕಾರಿಗಳು, ಇನ್ನಿತರ ಅಧಿಕಾರಿಗಳು ಭಾಗವಹಿಸಿದ್ದರು. ಐ.ಟಿ. ಸಿಬ್ಬಂದಿ ಮಹಾಂತೇಶ ಅವರು ಎಲೆಕ್ಟ್ರೋನ್, ಎನ್‍ಕೋರ್ ತಂತ್ರಾಂಶದಲ್ಲಿ ಡಾಟಾ ಎಂಟ್ರಿ ಪ್ರಕ್ರಿಯೆ ಕುರಿತು ಮಾಹಿತಿ ನೀಡಿದರು.