ಬೇಸಿಗೆ ರಂಗ ತರಬೇತಿ ಶಿಬಿರದಲ್ಲಿ ಮಕ್ಕಳಿಂದ ಗಡಿಗೆಯಲ್ಲಿ ಅಡುಗೆ ಕಾರ್ಯಕ್ರಮ
ಕಲಬುರಗಿ:ಏ.26:ಚಿಣ್ಣರ ಮೇಳ-24 ಮಕ್ಕಳ ಬೇಸಿಗೆ ರಂಗ ತರಬೇತಿ ಶಿಬಿರದ ಅಂಗವಾಗಿ ಕಲಬುರಗಿ ನಗರದ ರಂಗಾಯಣದಲ್ಲಿ ಹಮ್ಮಿಕೊಳ್ಳಲಾದ ಮಕ್ಕಳಿಂದ ಗಡಿಗೆಯಲ್ಲಿ ಅಡುಗೆ ಕಾರ್ಯಕ್ರಮಕ್ಕೆ ಕಲಬುರಗಿ ವಲಯದ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಜಂಟಿ ನಿರ್ದೇಶಕರಾದ ಬಸವರಾಜ ಹೂಗಾರ ಅವರು ಇತ್ತೀಚೆಗೆ ಚಾಲನೆ ನೀಡಿದರು.
ಹಿಂದಿನ ಕಾಲದಲ್ಲಿ ನಮ್ಮ ಪೂರ್ವಜರು ಗಡಿಗೆಯಲ್ಲಿ ಅಡುಗೆ ಮಾಡುತ್ತಿದ್ದರು, ಇಂದಿನ ವೈಜ್ಞಾನಿಕ ಕಾಲದಲ್ಲಿ ಅದನ್ನು ಮರೆತು ಎಲ್ಲಾ ಮನೆಯಗಳಲ್ಲಿ ಜರ್ಮನ ಪಾತ್ರೆಗಳನ್ನು ಬಳಿಸಿ ಅಡುಗೆಯನ್ನು ಮಾಡುತ್ತಿದ್ದಾರೆ. ಈ ಚಿಣ್ಣರ ಮೇಳದಲ್ಲಿ ಮಕ್ಕಳಿಗೆ ಪೂರ್ವಜರ ನೆನಪುಗಳನ್ನು ನೆನಪಿಸಿ ಕೊಡಲಾಯಿತು.
ಮಕ್ಕಳು ತುಂಬಾ ಖುಷಿ ಖುಷಿಯಿಂದ ಗಡಿಗೆಯಲ್ಲಿ ಅಡುಗೆ ಮಾಡಿದರು. ಇದನ್ನು ಪೆÇೀಷಕರು ಮತ್ತು ಪಾಲಕರು ಮಕ್ಕಳು ಮಾಡಿದ ಅಡುಗೆ ಸವಿದು ಸಂತೋಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕಲಬುರಗಿ ರಂಗಾಯಣ ಉಪನಿರ್ದೇಶಕಿ ಜಗದೀಶ್ವರಿ ಹಾಗೂ ಶಿಬಿರ ನಿರ್ದೇಶಕ ಕಲ್ಯಾಣಿ ಭಜಂತ್ರಿ ಅವರು ಉಪಸ್ಥಿತರಿದ್ದರು.