ಮದ್ಯದ ಅಂಗಡಿ ಪರವಾನಿಗೆ ನೀಡದಿರಲು ಆಗ್ರಹ
ಕೊಲ್ಹಾರ:ಏ.26: ತಾಲೂಕಿನ ಮಟ್ಟಿಹಾಳ ಕ್ರಾಸ ಹಣಮಾಪೂರ ರಸ್ತೆಯಲ್ಲಿ ಮಧ್ಯದ ಅಂಗಡಿ ಪ್ರಾರಂಭಿಸುವ ಹುನ್ನಾರ ನಡೆಯುತ್ತಿದ್ದು ಇದಕ್ಕೆ ಅನುಮತಿ ನೀಡಬಾರದೆಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ಕಬ್ಬು ಬೇಳೆಗಾರರ ಒಕ್ಕೂಟದ ಅಧ್ಯಕ್ಷ ಸೋಮು ಬಿರಾದಾರ ನೇತೃತ್ವದಲ್ಲಿ ಹಣಮಾಪೂರ ಗ್ರಾಮ ಪಂಚಾಯತ ಹಾಗೂ ತಹಸೀಲ್ದಾರ ಕಾರ್ಯಾಲಯಕ್ಕೆ ತೆರಳಿ ಮನವಿ ಸಲ್ಲಿಸಲಾಯಿತು.
ಗ್ರಾಮ ಪಂಚಾಯತ ವತಿಯಿಂದ ಮದ್ಯದ ಅಂಗಡಿ ಪರವಾನಿಗೆ ಕೊಟ್ಟಿರುವುದಿಲ್ಲ.
ಆಯ್.ಡಿ ಬಡಿಗೇರ
ಗ್ರಾಮ ಪಂಚಾಯಿತಿ ವತಿಯಿಂದ ಮದ್ಯದ ಅಂಗಡಿ ಪರವಾನಿಗೆ ನೀಡದಿರಲು ಪತ್ರ ಬರೆಯಲಾಗಿದೆ.
ಶ್ರೀಕಾಂತ ಗಣಿ.
ಗ್ರಾ. ಪಂ ಅಧ್ಯಕ್ಷರು
ಹಣಮಾಪೂರ