ನುಡಿದಂತೆ ನಡೆಯುವ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಿ : ರಾಧಾಕೃಷ್ಣ ದೊಡ್ಡಮನಿ
ಕಲಬುರಗಿ,ಏ .26: ನಿಮ್ಮ ಬೆಂಬಲ ತುಂಬಾ ಮಹತ್ವದು.್ದ ಅದು ದೇಶದ ಭವಿಷ್ಯ ರೂಪಿಸುತ್ತದೆ ಎಂದು ಕಲಬುರಗಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಹೇಳಿದರು.ಅವರು ಇಂದು ಅವರಾದ ( ಬಿ) ಗ್ರಾಮದಲ್ಲಿ ಹಮ್ಮಿಕೊಂಡ ಚುನಾವಣಾ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದರು.
ನಮ್ಮ ರಾಜ್ಯ ಸರಕಾರದ ಮಹಿಳೆಯರಿಗೆ ಮಾಸಿಕ ಎರಡು ಸಾವಿರ ರೂಪಾಯಿ, ಉಚಿತ ವಿದ್ಯುತ್, ಉಚಿತ ಬಸ್ ಪ್ರಯಾಣ ಮೊದಲಾದ ಪಂಚ ಗ್ಯಾರಂಟಿ ಯೊಜನೆಗಳು ಜನರ ಬದುಕನ್ನು ಹಸನಾಗಿಸಿವೆ. ರಾಜ್ಯದ ಬಿಜೆಪಿಯ ನಾಯಕರು ಕೇಂದ್ರ ಸರ್ಕಾರಕ್ಕೆ ಹೇಳಿ ಉಚಿತ ಅಕ್ಕಿ ಕೊಡಿಸಲು ಬಿಡಲಿಲ್ಲ . ನಾವು ದುಡ್ಡು ಕೊಡುತ್ತೇವೆ ಎಂದರೂ ಸಹ ಅಕ್ಕಿ ಕೊಡಲಿಲ್ಲ. ಬಡವರಿಗೆ ಉಚಿತ ಅಕ್ಕಿ ಕೊಟ್ಟರೆ ಕಾಂಗ್ರೆಸ್ ಪಕ್ಷಕ್ಕೇ ಅನುಕೂಲ ಆಗುತ್ತದೆ ಎಂದು ತಿನ್ನುವ ಅನ್ನದಲ್ಲಿ ರಾಜಕೀಯ ಮಾಡಿದ್ದು ಬಿಜೆಪಿ ಪಕ್ಷ ಎಂದರು.
ಇವತ್ತು ಯುವಕರಿಗೆ ನಿರುದ್ಯೋಗ ಭತ್ಯೆ ಕೊಟ್ಟಿದ್ದೇವೆ. ಇದರ ಮೂಲಕ ಜನತೆಗೆ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ. ಹಾಗಾಗಿ ನುಡಿದಂತೆ ನಡೆಯುವ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಬೇಕು ಎಂದರು.
ಮುಂದೆ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದರೆ ಈ ನೆಲದ ಧೀಮಂತ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಮಂತ್ರಿ ಆಗುತ್ತಾರೆ. ಆಗ ಬಡವರ ಅರ್ಥವ್ಯವಸ್ಥೆಯ ಬದಲಾವಣೆ ತರಲಿದೆ. ಒಂದು ಲಕ್ಷ ರೂಪಾಯಿ ಮಹಿಳೆಯರಿಗೆ , ನಿರುದ್ಯೋಗ ಭತ್ಯೆ, ರೈತರ ಉತ್ಪನ್ನಗಳಿಗೆ ಬೆಂಬಲ ನೀಡುತ್ತೇವೆ , ಜನಗಣತಿ ಮಾಡಿ ದೇಶದ ಸರ್ವ ಜನತೆಗೆ ಸರಿಯಾದ ನ್ಯಾಯ ನೀಡುತ್ತೇವೆ ಎಂದರು.
ಅನೇಕ ಭರವಸೆಗಳನ್ನು ನೀಡಿದ ಪಿಎಂ ಮೋದಿ ಅವರು ನೀಡಿದ ಭರವಸೆ ಈಡೇರಿಸಿಲ್ಲ. ಆದರೆ ಇಂದು ಖರ್ಗೆ ಅವರು ಕಲಬುರಗಿಗೆ ಏಪೆರ್Çೀರ್ಟ್, ಇಎಸೈ ಆಸ್ಪತ್ರೆ ,ಜಿಮ್ಸ್ ಆಸ್ಪತ್ರೆ ಇನ್ನೂ ಹಲವಾರು ಕೆಲಸಗಳು ಮಾಡಿದ್ದಾರೆ. ಆದರೆ ಬಿಜೆಪಿಯ ಅಭ್ಯರ್ಥಿ ಉಮೇಶ ಜಾಧವ ಎನು ಮಾಡಿದ್ದಾರೆ? ಊರಿಗೆ ಬರದೇ, ಜನರ ಕಷ್ಟ ಕೇಳದೇ ಈಗ ಬಂದು ಮೋದಿ ನೋಡಿ ಓಟು ಕೇಳುತ್ತಿದ್ದಾರೆ.ಇವರಿಗೆ ನಾಚಿಕೆ ಆಗಬೇಕು. ಈಗ ಮೋದಿಯವರು ಹಿಂದೂ ಮುಸ್ಲಿಂ ಎಂದು ಹೇಳಿ ಧರ್ಮದ ಒಡಕು ಉಂಟು ಮಾಡುತ್ತಿದ್ದಾರೆ. ಸೌಹಾರ್ದತೆ ಹಾಳು ಮಾಡುತ್ತಿದ್ದಾರೆ .ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ ಎಂದು ಹೇಳಿ ರಸಗೊಬ್ಬರ ಬೆಲೆ 1500 ರೂಪಾಯಿ ಮಾಡಿದ್ದಾರೆ. ಮಹಿಳೆಯರಿಗೆ ಹಣ ಕೊಟ್ಟರೆ ಆರ್ಥಿಕವಾಗಿ ಬೆಳೆಯಲು ಸಾಧ್ಯ. ಆದರೆ ಮೋದಿಯವರು ಶ್ರೀಮಂತರ ಸಾಲ ಮನ್ನಾ ಮಾಡಿದ್ದಾರೆ. ಆದರೆ ರೈತರ ಸಾಲ ಮನ್ನಾ ಮಾಡಲಿಲ್ಲ ಎಂದರು.
ಸಭೆಯಲ್ಲಿ ಡಾ.ಶರಣಪ್ರಕಾಶ ಪಾಟೀಲ,ರೇವೂನಾಯಕ ಬೆಳಮಗಿ,ವಿಜಯಕುಮಾರ ಜಿ ರಾಮಕೃಷ್ಣ,ಮಲ್ಲಿನಾಥ ಪಾಟೀಲ ಸೊಂತ, ವೈಜನಾಥ ತಡಕಲ್, ಶಿವರಾಜ ಇಟಗಾ,ಬಾಬು ಹೊನ್ನಾನಾಯಕ,ಚಂದ್ರಿಕಾ ಪರಮೇಶ್ವರ, ರಾಜಗೋಪಾಲರೆಡ್ಡಿ,ಸುನೀಲ ಮಾನ್ಪಡೆ, ದಶರಥಬಾಬು ವಂಟಿ,ಮಿರಾಜ್ ಪಟೇಲ್,ದಿಗಂಬರ ಬಿರಾದಾರ,ಶರಣಬಸಪ್ಪ ಹಾಗರಗಿ,ಸುಭಾಷ ಕೋರಿ ಸೇರಿದಂತೆ ಅನೇಕ ಮುಖಂಡರು, ಕಾರ್ಯಕರ್ತರು,ಗ್ರಾಮಸ್ಥರು ಉಪಸ್ಥಿತರಿದ್ದರು.