ರಕ್ತದಾನ ಶ್ರೇಷ್ಠದಾನ :ಡಾ.ಲಕ್ಷ್ಮಿe ತೆಲ್ಲೂರ
ಕೊಲ್ಹಾರ:ಏ.26: ರಕ್ತದಾನ ಮಾಡಲು ಮುಂದೆ ಬರುವ ಮೂಲಕ ರಕ್ತದ ಕೊರತೆಯನ್ನು ನೀಗಿಸಬೇಕು’ ಎಂದು ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಲಕ್ಷ್ಮಿe ತೆಲ್ಲೂರ ಹೇಳಿದರು.
ಶ್ರೀ ದಿಗಂಬರೇಶ್ವರ ಜಾತ್ರಾ ನಿಮಿತ್ತವಾಗಿ ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದಲ್ಲಿ
ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು.
‘ರಕ್ತ ಹೀನತೆ, ವಿವಿಧ ಕಾಯಿಲೆಗಳಿಂದ ಬಳಲುವವರು ಮತ್ತು ಅಪಘಾತದಂತಹ ತುರ್ತು ಸಂದರ್ಭಗಳನ್ನು ನಿಭಾಯಿಸಲು ರಕ್ತ ಸಂಗ್ರಹದ ಅಗತ್ಯವಿರುತ್ತದೆ. ಹೀಗಾಗಿ ಪರೋಪಕಾರದ ಉದ್ದೇಶವುಳ್ಳ ಇಂತಹ ರಕ್ತದಾನ ಶಿಬಿರಗಳು ಹೆಚ್ಚೆಚ್ಚು ನಡೆಯಬೇಕು’ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಕ್ತ ನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ. ಮಮದಾಪೂರ. ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ಎಸ್ ಎಂ ಪಾಟೀಲ್, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಅಶೋಕ್ ಕೊಲ್ಹಾರ, ಲಕ್ಷ್ಮಣ್ ಕಟಗಿ, ರಾಜಕುಮಾರ್ ಯಾತನೂರ ಆರ್ ಎಂ ಗೌಡರ ಜಗದೀಶ್ ಬಿ. ಸಹಿತ ಅನೇಕರು ಉಪಸ್ಥಿತರಿದ್ದರು.