ನರ್ಸಿಂಗ್ ಕಾಲೇಜ್ ವಿದ್ಯಾರ್ಥಿಗಳಿಂದ ಮಲೇರಿಯಾ ಜಾಗೃತಿ ಜಾಥಾ
ತಾಳಿಕೋಟೆ:ಏ.26: ನಗರದಲ್ಲಿ ಶ್ರೀ ಭಾಗ್ಯವಂತಿ ನರ್ಸಿಂಗ್ ಕಾಲೇಜು ವತಿಯಿಂದ ಮಲೇರಿಯಾ ಜಾಗೃತಿ ಅಭಿಯಾನ ಅಂಗವಾಗಿ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಜಾಥಾ ಮೂಲಕ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಮಲೇರಿಯಾ ತಡೆಗಟ್ಟುವಿಕೆ ಕುರಿತು ಘೋಷಣೆಗಳನ್ನು ಕೂಗುತ್ತಾ ಜನರಲ್ಲಿ ಮಲೇರಿಯಾ ರೋಗದ ಕುರಿತು ಜಾಗೃತಿ ಮೂಡಿಸಿದರು.
ಜಾಗೃತಿ ಜಾಥಾವು ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಪ್ರಾರಂಭಗೊಂಡು, ಶ್ರೀ ಬಸವೇಶ್ವರ ವೃತ್ತ, ಬಸ್ ನಿಲ್ದಾಣದ ಮುಂಭಾಗದ ರಸ್ತೆ, ಮಹಾ ರಾಣಾಪ್ರತಾಪಸಿಂಹ್ ವೃತ್ತ, ಶಿವಾಜಿ ಮಹಾರಾಜರ ವೃತ್ತ, ಕತ್ರಿ ಭಜಾರ, ಶ್ರೀ ಅಂಬಾಭವಾನಿ ಮಂದಿರದ ರಸ್ತೆ ಮೂಲಕ ಶ್ರೀ ಭಾಗ್ಯವಂತಿ ಆಸ್ಪತ್ರೆಗೆ ತಲುಪಿ ಜಾಥಾವನ್ನು ಮುಕ್ತಾಯಗೊಳಿಸಲಾಯಿತು.
ಶ್ರೀ ಭಾಗ್ಯವಂತಿ ನರ್ಸಿಂಗ್ ಕಾಲೇಜ್ ವಿದ್ಯಾರ್ಥಿಗಳು ನಗರದ ಪ್ರತಿಷ್ಠಿತ ಶ್ರೀ ಭಾಗ್ಯವಂತಿ ಚಿಕ್ಕಮಕ್ಕಳ ಆಸ್ಪತ್ರೆಯಲ್ಲಿ ಪಾತ್ರಾಭಿನಯದ ಮೂಲಕ, ಪೆÇೀಸ್ಟರ್ ಪ್ರಸ್ಥುತಿ ಮಾಡುವುದರ ಮುಖಾಂತರ ಆಸ್ಪತ್ರೆಯಲ್ಲಿ ನೆರೆದಿದ್ದ ಜನರಲ್ಲಿ ಮಲೇರಿಯಾ ರೋಗದ ಗುಣಲಕ್ಷಣಗಳು, ತಡೆಗಟ್ಟುವ ವಿಧಾನಗಳು, ಅದರ ಚಿಕಿತ್ಸೆಯ ಮಾಹಿತಿ ಕುರಿತು ಕಾರ್ಯಗಾರ ನಡೆಸುವದರೊಂದಿಗೆ ಜನರಲ್ಲಿ ತಿಳುವಳಿಕೆ ಮೂಡಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಭಾಗ್ಯವಂತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಡಾ.ಸವಿತಾ ತಲ್ಲೊಳ್ಳಿ, ಪ್ರಾಚಾರ್ಯ ಪೆÇ್ರ. ಅನಿಲ್ ಪತ್ರಿಮಠ, ಹಾಗೂ ಶಿಕ್ಷಕರಾದ ವಿನಯ್ ಮಡಿವಾಳ, ಅಕ್ಷತಾ ಬಾಬಣ್ಣವರ್, ಸುವರ್ಣ ಹಿರೇಮಠ, ಅಶ್ವಿನಿ, ಜ್ಯೋತಿ ಹೂಗಾರ, ಕಾವ್ಯ ಕಾಮನಕೇರಿ, ನಜ್ಮಾ ಹಾಕಿಮ್, ಸಿಬ್ಬಂದಿ ವರ್ಗ ಹಾಗೂ ಎಲ್ಲ ನರ್ಸಿಂಗ್ ವಿದ್ಯಾರ್ಥಿಗಳು ಹಾಜರಿದ್ದು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.