ಅಕ್ಕಮಹಾದೇವಿ,ಹನುಮಾನ ಜಯಂತಿ ಆಚರಣೆ
ಬೀದರಃಏ.26: ನಗರದ ಗುಮ್ಮೆ ಕಾಲೋನಿಯ ಹನುಮಾನ ಮಂದಿರದಲ್ಲಿ ವೀರ ವೈರಾಗ್ಯನಿಧಿ ಅಕ್ಕಮಹಾದೇವಿಯವರ ಮತ್ತು ಹನುಮಾನ ದೇವರ ಜಯಂತಿ ಉತ್ಸವ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀ ವೈಷ್ಣೋದೇವಿ ಟ್ರಸ್ಟ್ ಅಧ್ಯಕ್ಷ ಸಂಗಮೇಶ ಬಿರಾದಾರ, ರಾಜಕುಮಾರ ಕಾಡವಾದ, ಗುರುನಾಥ ಬಿರಾದಾರ, ಸಂತೋಷ ಬೆಲ್ದಾಳೆ, ನಿರ್ಮಲಾ ಸ್ವಾಮಿ, ಕಲ್ಪನಾ, ವಿದ್ಯಾವತಿ, ರೇಣುಕಾ, ಗುಂಡಮ್ಮಾ ಮುಂತಾದವರು ಉಪಸ್ಥಿತರಿದ್ದರು.