ಶ್ರೀರಾಮ ನವಮಿ ಉತ್ಸವ ಅದ್ಧೂರಿ ಆಚರಣೆಗೆ ನಿರ್ಧಾರ
ಭಾಲ್ಕಿ:ಏ.26: ಪಟ್ಟಣದಲ್ಲಿ ಇದೇ ಮೇ 1 ರಂದು ವಿಶ್ವಹಿಂದೂ ಪರಿಷತ್, ಬಜರಂಗದಳ, ಶ್ರೀ ರಾಮನವಮಿ ಉತ್ಸವ ಸಮಿತಿಯ ಸಂಯುಕ್ತಾಶ್ರಯದಲ್ಲಿ ನಡೆಯಲಿರುವ ಶ್ರೀರಾಮ ನವಮಿ ಉತ್ಸವನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗುವುದು ಎಂದು ವಿಶ್ವ ಹಿಂದೂ ಪರಿಷತ್ ಮುಖಂಡ ಶಿವು ಲೋಖಂಡೆ ಹೇಳಿದರು.
ಪಟ್ಟಣದ ಬಳತೆ ಯೋಗ ಸಭಾಭವನದಲ್ಲಿ ಬುಧವಾರ ಆಯೋಜಿಸಿದ್ದ ಶ್ರೀರಾಮ ನವಮಿ ಉತ್ಸವ ಕರಪತ್ರ ಬಿಡುಗಡೆ ಮಾಡಿ ಅವರು ಮಾತನಾಡಿದರು. ಹಿಂದೂ ಸಮಾಜದ ಸರ್ವ ಜಾತಿ ಜನಾಂಗದವರು ಒಟ್ಟಾಗಿ ಸೇರಿಕೊಂಡು ಶ್ರೀರಾಮ ನವಮಿ ಆಚರಿಸಲಾಗುತ್ತಿದೆ. ಭಾಲ್ಕಿಯಲ್ಲಿ ನಡೆಯಲಿರುವ ಶ್ರೀ ರಾಮನವಿ ಉತ್ಸವದಲ್ಲಿ ಸುಮಾರು 10 ಸಾವಿರ ಜನರು ಸೇರುವ ನಿರೀಕ್ಷೆ ಇದೆ. ಉತ್ಸವದ ಪೂರ್ವಭಾವಿಯಾಗಿ ಎ.30 ರಂದು ಮಕ್ಕಳಿಂದ ಬೈಸಿಕಲ್ ರ್ಯಾಲಿ, ಮಹಿಳೆಯರಿಂದ ಬೈಕ್ ರ್ಯಾಲಿ ಆಯೋಜಿಸಲಾಗಿದೆ. ಮೇ 1 ರಂದು ಮದ್ಯಾನ್ಹ 3 ಗಂಟೆಗೆ ಬೃಹತ್ ಶೋಭಾ ಯಾತ್ರೆ ನಡೆಯುವುದು, ಶೋಭಾಯಾತ್ರೆಯುವ ಹಳೆ ಪಟ್ಟಣದ ವಿಠಲ ಮಂದಿರ, ಚೌಡಿ ವೃತ್ತದಿಂದ ಗಂಜ್ ಏರಿಯಾದ ಗಾಂಧಿ ವೃತ್ತದವರೆಗೆ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ನಡೆಸಲಾಗುವುದು. ಶೋಭಾಯಾತ್ರೆಯು ಸಾಯಂಕಾಲ 7 ಗಂಟೆಗೆ ಗಾಂಧಿ ವೃತ್ತದ ವೇದಿಕೆಯಲ್ಲಿ ಸಮಾಗಮ ಗೊಳ್ಳುವುದು. ಗಾಂಧಿವೃತ್ತದಲ್ಲಿ ಬ್ರಹತ್ ಸಾರ್ವಜನಿಕ ಸಮಾವೇಶ ನಡೆಯುತ್ತದೆ. ಸಾರ್ವಜನಿಕ ಸಮಾವೇಶದಲ್ಲಿ ಕಟ್ಟಿಮನಿ ಹಿರೇಮಠ ಸಂಸ್ಥಾನದ ಶ್ರೀ ರಾಜೇಶ್ವರ ಶಿವಾಚಾರ್ಯರು, ಹಿರೇಮಠ ಸಂಸ್ಥಾನದ ಶ್ರೀ ಗುರುಬಸವ ಪಟ್ಟದ್ದೇವರು, ಶಿವಣಿ-ಹಲಬರ್ಗಾ ಮಠದ ಶ್ರೀ ಹಾವಗಿಲಿಂಗ ಶಿವಾಚಾರ್ಯರು ದಿವ್ಯ ಸಾನಿಧ್ಯ ವಹಿಸಿ ಮಾತನಾಡುವರು. ಪ್ರಮುಖ ವಕ್ತಾರರಾಗಿ ವಿಶ್ವಹಿಂದೂ ಪರಿಷತ್ ಕೇಂದ್ರೀಯ ಸಹಕಾರ್ಯದರ್ಶಿ ಶಂಕರ ಗಾಯಕರ ಮಾತನಾಡುವರು ಎಂದು ತಿಳಿಸಿದರು.
ಮಾತೃಶಕ್ತಿ ಸ್ವಾಗತಸಮಿತಿಯ ಅಧ್ಯಕ್ಷೆ ಸುನೀತಾ ಕುಡತೆ ಮಾತನಾಡಿ, ಶೋಭಾ ಯಾತ್ರೆಯಲ್ಲಿ ಮಹಿಳೆಯರಿಂದ ದಾಂಡಿ ನೃತ್ಯ, ಮತ್ಸಕಲಾ ತಂಡದ ಕಲಾವಿದರಿಂದ ವಿವಿಧ ನೃತ್ಯಗಳನ್ನು ನಡೆಸಲಾಗುವುದು. ಸುಮಾರು 500 ಮಾತೆಯರು ಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ನೋಡಿಕೊಳ್ಳಲಾಗುವುದು ಎಂದು ಹೇಳಿದರು. ಮಾತೃಶಕ್ತಿ ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷೆ ಶುಭಾಂಇ ಚನ್ನಬಸವಣ್ಣ ಬಳತೆ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ವಿಶ್ವಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಸತೀಶ ನೌಬಾದೆ. ಸೋಮನಾಥಪ್ಪ ಅಸ್ಟೂರೆ, ಮಾತೃಶಕ್ತಿ ಸ್ವಾಗತ ಸಮಿತಿಯ ಸಹಕಾರ್ಯದರ್ಶಿ ಶುಭಾಂಗಿ ಅಶ್ವಿನ ಭೋಸಲೆ, ಪ್ರಿಯಾ ದಶಮುಖೆ, ಉಮಾಕಾಂತ ಮೇತ್ರೆ, ವಿಲಾಸ ಬಕ್ಕಾ, ಶೈಲೇಶ ಮಾಲಪಾಣಿ, ಶ್ರೀನಾಥ ಹೆಡಾ, ರವಿ ಕುಂಬಾರ, ಸಚಿನ ಜಾಧವ, ಜಯಕಿಶನ ಬಿಯಾನಿ ಮತ್ತಿತರರು ಇದ್ದರು. ಸಾಗರ ಮಲಾನಿ ನಿರೂಪಿಸಿದರು. ಶೈಲೇಶ ಮಾಲಪಾಣಿ ವಂದಿಸಿದರು.