ಅಧಿಕಾರಿಗಳು ಚುನಾವಣಾ ಆಯೋಗದ ನಿಯಮ ಪಾಲಿಸಬೇಕು: ಗೋವಿಂದರೆಡ್ಡಿ
ಬೀದರ. ಏ.26: ಬೀದರ ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ನಿಯೋಜಿತ ಅಧಿಕಾರಿಗಳು ಚುನಾವಣಾ ಆಯೋಗದ ನಿಯಮಗಳನ್ನು ಪಾಲನೆ ಮಾಡಿದರೆ ಚುನಾವಣೆಗಳು ಸುಸೂತ್ರವಾಗಿ ನಡೆಯುತ್ತವೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಾದ ಗೋವಿಂದರೆಡ್ಡಿ ಹೇಳಿದರು.
ಅವರು ಗುರುವಾರ ಚನ್ನಬಸವ ಪಟ್ಟದ್ದೆವರು ರಂಗಮಂದಿರದಲ್ಲಿ ಸೆಕ್ಟರ್ ಅಧಿಕಾರಿಗಳು ಹಾಗೂ ಅಸೆಂಬ್ಲಿ ಹಂತದ ಮಾಸ್ಟರ್ ಟ್ರೆನರಗಳಿಗೆ ಕಮೀಷನಿಂಗ್ ಆಫ್ ಇವಿಎಮ್ ತರಬೇತಿ ನೀಡಿ ಮಾತನಾಡಿದರು.
ಸೆಕ್ಟರ್ ಅಧಿಕಾರಿಗಳ ಹಂತದಲ್ಲಿ ಕಮಿಷನಿಂಗ್ ಮಾಡಬೇಕು ಮತ್ತು ಏಪ್ರಿಲ್ 27, 28 ಮತ್ತು 29 ರಂದು ಕಮೀಷನಿಂಗ್ ಮಾಡಿ 30 ರಂದು ಮಾಕ ಪೆÇೀಲ ಮಾಡಬೇಕು ಹಾಗೂ ಸ್ಥಳೀಯವಾಗಿ ಈ ಮಾಹಿತಿಯನ್ನು ರಾಜಕೀಯ ವ್ಯಕ್ತಿಗಳಿಗೆ ನೀಡಬೇಕು. ತಹಶಿಲ್ದಾರರು ಹಾಗೂ ಎ.ಆರ್.ಓ ಗಳು ಕಮಿಷನಿಂಗ್ ಮುಗಿಯುವವರೆಗೆ ತೆರಳುವ ಹಾಗಿಲ್ಲ ಮತ್ತು ಈ ಸಂದರ್ಭದಲ್ಲಿ ಸಿಸಿಟಿವಿ ಕವರೇಜ ಇರಬೇಕು ಎಂದರು.
ತಮಗೆ ಎನಾದರೂ ಸಮಸ್ಯೆಗಳಾದರೆ ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಇಬ್ಬರು ಇಂಜಿನೀಯರ ಇರುತ್ತಾರೆ ಅವರಿಂದ ಮಾಹಿತಿ ಪಡೆಯಬೇಕು. ಪೆÇ್ರೀಷಿಜರ್ ನಿಧಾನವಾಗಿ ಮಾಡಿ ಅವಸರ ಬೇಡ ಅವಸರ ಮಾಡಿದರೆ ತಪ್ಪುಗಳಾಗುತ್ತವೆ ಮತ್ತು ಹೊಸ ಪೇಪರ್ ರೋಲ್ ಬಳಸಬೇಕು ಸೀರಿಯಲ್ ನಂಬರ್ ಒತ್ತಿದಾಗ ಅಭ್ಯರ್ಥಿ ಹೆಸರು ಮತ್ತು ಸೀರಿಯಲ್ ನಂಬರ್ ಸರಿಯಾಗಿ ಬರುತ್ತದೆಯೆ ಎಂಬುದನ್ನು ಗಮನಿಸಬೇಕು ಎಂದರು.
ವಿವಿಪ್ಯಾಟ್ ಕೆಲಸ ಮಾಡದೇ ಇದ್ದಾಗ ಹಾರಿಜಂಟಲಾಗಿ ಇಡಬೇಕು. ರಿಜರ್ವ್ ಮಶೀನ್ 1, 2, 3 ಎಂದು ಬರೆದು ದೊಡ್ಡ ಸ್ಟಿಕರಗಳನ್ನು ಅಂಟಿಸಬೇಕು. ಸಿಸಿಟಿವಿ ಜೊತೆಗೆ ವಿಡಿಯೋ ಗ್ರಾಫಿ ಮಾಡಬೇಕು ಹಾಗೂ ಚುನಾವಣೆ ನಿಯೋಜಿತ ಅಧಿಕಾರಿ ಮತ್ತು ಸಿಬ್ಬಂದಿಗಳು ಕಡ್ಡಾಯವಾಗಿ ಗುರುತಿನ ಚೀಟಿಯನ್ನು ಧರಿಸಿಕೊಂಡಿರಬೇಕು. ಬ್ಯಾಲೆಟ್ ಪೇಪರ ಸೀರಿಯಲ್ ನಂಬರ್ ಹಾಗೂ ವಿವಿಪ್ಯಾಟ ಸೇಮ ಇರಬೇಕು ಒಂದು ಮಶಿನ್ ಸೆಟ್ ಮಾಡಲು 15 ನಿಮಿಷಗಳ ಸಮಯ ಸಾಕು ನಾವು ಹೇಳಿದ ನಿಯಮಗಳನ್ನು ಪಾಲನೆ ಮಾಡಿ ಸಾಕು. ಏನಾದರೂ ಸಮಸ್ಯೆಗಳಿದ್ದರೆ ಇಂಜಿನೀಯರಗಳಿಗೆ ಕೇಳಿ ಎಂದು ಹೇಳಿದರು.
ಸೆಕ್ಟರ್ ಅಧಿಕಾರಿಗಳು ಮೇ 2, 3 ಮತ್ತು 5 ತಾರೀಖು ಎಲ್ಲಾ ಪೆÇೀಲಿಂಗ್ ಭೂತಗಳಿಗೆ ಭೇಟಿ ನೀಡಬೇಕು ಅಲ್ಲಿ ಕರೆಂಟ್, ಟೇಬಲ್, ಕುರ್ಚಿ, ಬೆಂಚ ವ್ಯವಸ್ಥೆ ಹಾಗೂ ಸರಿಯಾದ ಶೌಚಾಲಯ ಮತ್ತು ನೀರಿನ ವ್ಯವಸ್ಥೆ ಇರುವ ಕುರಿತು ಖಾತರಿ ಪಡಿಸಿಕೊಳ್ಳಬೇಕು. ಮತದಾನಕ್ಕಿಂತ 5 ದಿನ ಮುಂಚೆ ಓಟರ್ ಸ್ಲೀಪಗಳನ್ನು ವಿತರಣೆ ಮಾಡಬೇಕು. ಚುನಾವಣಾ ಕರ್ತವ್ಯ ನಿರ್ವಹಿಸುವ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಬೆಳಗಿನ ಉಪಹಾರ, ಮಧ್ಯಾಹ್ನ ಊಟ ನೀರಿನ ವ್ಯವಸ್ಥೆ ಮಾಡಬೇಕು ಈ ಜವಾಬ್ದಾರಿಯನ್ನು ಆಯಾ ಗ್ರಾಮ ಪಂಚಾಯತಿ ಪಿ.ಡಿ.ಓ ಗಳಿಗೆ ನೀಡಿ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಸಾಮಾನ್ಯ ಚುನಾವಣಾ ವೀಕ್ಷಕರಾದ ದೀಪಂಕರ ಮೋಹಪಾತ್ರ, ಬೀದರ ಸಹಾಯಕ ಆಯುಕ್ತರಾದ ಲವೀಶ್ ಓರ್ಡಿಯಾ, ಚುನಾವಣಾ ತಹಶಿಲ್ದಾರ ಅಣ್ಣಾರಾವ್ ಪಾಟೀಲ್, ಸೆಕ್ಟರ್ ಅಧಿಕಾರಿಗಳು ಹಾಗೂ ಅಸೆಂಬ್ಲಿ ಸೆಕ್ಟರ್ ಅಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.