ಹೂವಿನಹಡಗಲಿಯಲ್ಲಿ ಅಕ್ಕಮಹಾದೇವಿ ಜಯಂತಿ
ಸಂಜೆವಾಣಿ ವಾರ್ತೆ
ಹೂವಿನಹಡಗಲಿ: ಪಟ್ಟಣದಲ್ಲಿ ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ಮಹಿಳಾ ಘಟಕದಿಂದ ಅಕ್ಕಮಹಾದೇವಿ ಜಯಂತಿ ಆಚರಿಸಲಾಯಿತು.
ಮಹಿಳೆಯರು ಅಕ್ಕಮಹಾದೇವಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರಿಗೆ ಅಕ್ಕಮಹಾದೇವಿಯವರ ಪುಸ್ತಕಗಳನ್ನು ವಿತರಿಸಲಾಯಿತು.
ಉಪನ್ಯಾಸಕಿ ಶೈಲಜಾ ಪವಾಡಶೆಟ್ಟರ, ವೈ. ಜಯಮ್ಮ ಉಪನ್ಯಾಸ ನೀಡಿದರು. ನಿರುಪಮಾ ವಚನ ಪಠಣ ಮಾಡಿದರು. ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಉಮೇಶ ಮುಂಡವಾಡದ, ಟ್ರಸ್ಟ್ ಅಧ್ಯಕ್ಷ ಎಸ್.ಎಸ್.ಉಮಾಕಾಂತ, ಮಲ್ಲಿಕಾರ್ಜುನ ಯಲಗಚ್ಚಿನ, ಗುಂಡಪ್ಪ, ರವಿಕುಮಾರ್ ಕುಂಬಾರಿ, ಮಹಿಳಾ ಘಟಕದ ಅಧ್ಯಕ್ಷೆ ರಾಜೇಶ್ವರಿ, ವಿದ್ಯಾ, ವಿಜಯ, ಶಿಲ್ಪಾ, ಸವಿತಾ ಕುಂಬಾರಿ ಭಾಗವಹಿಸಿದ್ದರು.