ನೇಹಾ ಹತ್ಯೆ : ವೀರಶೈವ ಮಹಾಸಭಾ ಖಂಡನೆ
ಸಂಜೆವಾಣಿ ವಾರ್ತೆ
ಹೂವಿನಹಡಗಲಿ: ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆಯನ್ನು ಇಲ್ಲಿನ ತಾಲೂಕು ವೀರಶೈವ ಮಹಾಸಭಾ ತೀವ್ರವಾಗಿ ಖಂಡಿಸಿದೆ.
ಮಹಾಸಭಾ ತಾಲೂಕು ಮತ್ತು ನಗರ ಘಟಕದ ಪದಾಧಿಕಾರಿಗಳು ತಾಲೂಕು ಕಚೇರಿಗೆ ತೆರಳಿ, ಉಪ ತಹಶೀಲ್ದಾರ್ ಮಲ್ಲಿಕಾರ್ಜುನ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಹುಬ್ಬಳ್ಳಿ ನಗರದ ಕಾಲೇಜು ಕ್ಯಾಂಪಸ್‍ನಲ್ಲಿ ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆಯಾಗಿರುವುದು ಎಲ್ಲ ಪಾಲಕ, ಪೆÇೀಷಕರನ್ನು ಆತಂಕಕ್ಕೀಡು ಮಾಡಿದೆ. ಇಂತಹ ಅಪರಾಧ ಕೃತ್ಯಗಳು ಮರುಕಳಿಸದ ರೀತಿಯಲ್ಲಿ ಆರೋಪಿಯನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಹಿರಿಯ ವಕೀಲ ಸಿ.ಕೆ.ಎಂ. ಬಸವಲಿಂಗಸ್ವಾಮಿ ಆಗ್ರಹಿಸಿದರು.
ಈ ಸಂದರ್ಭದಲ್ಲಿ ವೀರಶೈವ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ ಅಟವಾಳಗಿ ಕೊಟ್ರೇಶ, ನಗರ ಘಟಕದ ಅಧ್ಯಕ್ಷ ಉಮೇಶ ಮುಂಡವಾಡದ, ಮುಖಂಡರಾದ ಕೋಡಿಹಳ್ಳಿ ಮುದುಕಪ್ಪ, ವಿ.ಸಿ.ಪಾಟೀಲ್, ಬಸೆಟ್ಟಿ ಸಿದ್ದೇಶ, ರಾಜೇಶ, ಗೌರಿಶಂಕರ ಹಿರೇಮಠ, ಕೊಳಚಿ ರುದ್ರಪ್ಪ, ಹಕ್ಕಂಡಿ ಶಿವನಾಗಪ್ಪ, ಬಿ.ಬಿ. ಅಸುಂಡಿ, ಸುರೇಶ ಮಲ್ಕಿಒಡೆಯರ್ ಇದ್ದರು.