ರಾಹುಲ್ ಆಗಮನ ನಮಗೆ ಪ್ಲಸ್: ತುಕರಾಂ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ: ಎ,26- ಈ ಹಿಂದೆ 1999 ರಲ್ಲಿ ಎಐಸಿಸಿಯ ನಾಯಕಿ ಸೋನಿಯಾ ಗಾಂಧಿಯವರು ಗೆದ್ದಿದ್ದ ಕ್ಷೇತ್ರ ಇದು. ಇಲ್ಲಿಗೆ ಇಂದು ಸಂಜೆ ಪಕ್ಷದ ನಾಯಕ ರಾಹುಲ್ ಗಾಂಧಿಯವರು ಬರೋದು ನಮಗೆ ಪ್ಲಸ್ ಆಗುತ್ತದೆಂದು ಕಾಂಗ್ರೆಸ್ ಅಭ್ಯರ್ಥಿ ಇ.ತುಕರಾಂ  ಹೇಳಿದ್ದಾರೆ.
ಸಮಾವೇಶದ ಸಿದ್ದತೆ ಪರಿಶೀಲನೆ ನಡೆಸಿದ ಅವರು.  ರಾಹುಲ್ ಅವರು ನನ್ನ ಪರವಾಗೊ ಪ್ರಚಾರ ಮಾಡ್ತಾರೆ,  ನನಗೆ ಪ್ಲಸ್ ಆಗುತ್ತದೆಂದ ಅವರು. ಪ್ರಧಾನಿ ಮೋದಿಯವರು ನಾಡಿದ್ದು ಹೊಸಪೇಟೆಗೆ ಬಂದು ಪ್ರಚಾರ ಮಾಡ್ತಾರೆ. ಕಳೆದ ವಿಧಾನ ಸಭೆ ಚುನಾವಣೆ ಸಂದರ್ಭದಲ್ಲೂ  ಅವರು ಬೀದಿ, ಬೀದಿಯಲ್ಲಿ ರ‌್ಯಾಲಿ ಮಾಡಿದ್ದರು. ಆಗಲೂ  ನಾವು 136 ಸ್ಥಾನ ಗೆದ್ದಿದ್ದೇವೆ, ಈಗ ನೀವು ನೋಡಿ ರಾಜ್ಯದಲ್ಲಿ ನಾವು 22 ಕ್ಕೂ ಹೆಚ್ಚು  ಸ್ಥಾನ ಗೆಲ್ತೇವೆಂದರು.