ರಿಮ್ಸ್ ಆಸ್ಪತ್ರೆ ವೈದ್ಯರು ನಿರ್ಲಕ್ಷಸ್ಕ್ಯಾನಿಂಗ್ ರೋಗಿಗಳು ಪರದಾಟ
ರಾಯಚೂರು,ಏ.೨೬- ರಿಮ್ಸ್ ಆಸ್ಪತ್ರೆಯಲ್ಲಿ ಗರ್ಭಿಣಿ ಮಹಿಳೆಯರ ಮತ್ತು ಹೊರರೋಗಿಗಳ ಸ್ಕ್ಯಾನಿಂಗ್ ಮಾಡುವಲ್ಲಿ ವೈಧ್ಯರ ಸಂಪೂರ್ಣ ನಿರ್ಲಕ್ಷ ದೋರಣೆ ಮುಂದುವರಿಯುತ್ತಿದೆ ಎಂದು ಹೊರರೋಗಿಗಳು ಗಂಭೀರವಾಗಿ ಆರೋಪಿಸಿದ್ದಾರೆ. ಬಡವರ ಪಾಲಿಗೆ ಆರೋಗ್ಯ ಕೇಂದ್ರವಾಗಬೇಕಾದ ರಿಮ್ಸ್ ಆಸ್ಪತ್ರೆ ನರಕಯಾತನೆ ಕೇಂದ್ರವಾಗಿದೆ.
ಕಳೆದ ಒಂದು ವಾರದಿಂದ ಸ್ಕ್ಯಾನಿಂಗ್ ಮಾಡದೇ ಇವತ್ತು ನಾಳೆ ಎಂದು ರೋಗಿಗಳನ್ನು ದಿನ ನಿತ್ಯ ಕೆಲಸ ಕಾರ್ಯಗಳನ್ನು ಬಿಟ್ಟು ಆಸ್ಪತ್ರೆ ಬರುವಂತೆ ಮಾಡಿದೆ. ರಿಮ್ಸ್ ಆಸ್ಪತ್ರೆಯಲ್ಲಿ ಸಿಬ್ಬಂದಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ. ವೈದ್ಯರು ಇಲ್ಲ ನಾಳೆ ಬನ್ನಿ ಎಂದು ಹೇಳುತ್ತಾರೆ ನಾಳೆ ಹೋದರೆ ಇದೆ ಮಾತು ಮುಂದುವರಿಸಿದ್ದಾರೆ. ದಿನ ನಿತ್ಯ ಆಸ್ಪತ್ರೆ ತಿರುಗಿಡುವ ಪರಿಸ್ಥಿತಿ ನಿರ್ಮಾಣವಾಗಿದೆ. ರೋಗಿ ಒಬ್ಬರು ತನ್ನ ಅಳಲು ವ್ಯಕ್ತಪಡಿಸಿದರು. ರಿಮ್ಸ್ ಆಡಳಿತಧಿಕಾರಿಗಳ ವೈಫಲ್ಯದಿಂದ ಈ ರಿಮ್ಸ್ ಆಸ್ಪತ್ರೆಯಲ್ಲಿ ಸರಿಯಾಗಿ ಬಡವರಿಗೆ ಚಿಕೆತ್ಸೆ ಮತ್ತು ಸ್ಕ್ಯಾನಿಂಗ್ ಮಾಡುತ್ತಿಲ್ಲ ಎಂದು ಗಂಭೀರವಾಗಿ ಆರೋಪಿಸಿದ್ದಾರೆ. ಇಂದು ರಿಮ್ಸ್ ಆಸ್ಪತ್ರೆಯಲ್ಲಿ ರೋಗಿಗಳು ಸ್ಕ್ಯಾನಿಂಗ್ ಗಾಗಿ ಸಾಲುಗಟ್ಟಿ ನಿಂತರು ವೈದ್ಯರು ಮಾತ್ರ ಬರಲಿಲ್ಲ ಕೊನೆಗೂ ಕಾದು ಕಾದು ಸುಸ್ತಾಗಿ ರೋಗಿಗಳು ಆಸ್ಪತ್ರೆಯಿಂದ ಹೊರ ನಡೆದಿರುವ ಘಟನೆ ನಡೆದಿದೆ.