ಕಾಂಗ್ರೆಸ್ ಅಭ್ಯರ್ಥಿ ಗೆಲವು ಖಚಿತ
(ಸಂಜೆವಾಣಿ ವಾರ್ತೆ)
ಸಿಂಧನೂರು,ಏ.೨೬- ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೊಪ್ಪಳ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಪರವಾಗಿ ಪ್ರಚಾರ ನಿಮಿತ್ತ ಸಿಂಧನೂರು ಬಹಿರಂಗ ಸಮಾವೇಶದಲ್ಲಿ ಭಾಗವಹಿಸಿ ಅಭ್ಯರ್ಥಿ ಪರ ಮತಯಾಚನೆ ಮಾಡಲು ಏಪ್ರಿಲ್ ೨೮ ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ ಮತ್ತು ಸಚಿವರು ಭಾಗವಹಿಸಲಿದ್ದಾರೆ ಕಾಂಗ್ರೆಸ್ ಪಕ್ಷದ ಮುಖಂಡರು ,ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿ ಗೊಳಿಸಿ ಎಂದು ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು.
ನಗರದ ಪಿಡಬ್ಲೂಡಿ ಕ್ಯಾಂಪ್ ನ ಜೂನಿಯರ್ ಕಾಲೇಜ್ ಆವರಣದಲ್ಲಿ ಸಂಜೆ ೬-೦೦ ಗಂಟೆಗೆ ಬಹಿರಂಗ ಸಮಾವೇಶ ನಡೆಯಲಿದ್ದು ೫೦ ಸಾವಿರ ಜನರು ಸೇರುವ ನಿರೀಕ್ಷೆ ಯಲ್ಲಿದ್ದಾರೆ.ನಮ್ಮ ಗ್ಯಾರಂಟಿ ಗಳೆ ನಮ್ಮ ಪಕ್ಷದ ಅಭ್ಯರ್ಥಿ ಗಳ ಗೆಲುವಿಗೆ ಕಾರಣವಾಗುತ್ತವೆ .ರಾಜಶೇಖರ ಹಿಟ್ನಾಳ ಸುಮಾರು ೫೦ ಸಾವಿರ ಮತಗಳ ಅಂತರದಿಂದ ಗೆಲವು ನ್ನು ಸಾಧಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜಕೀಯವನ್ನು ರಾಜಕೀಯವಾಗಿ ನೋಡಬೇಕು ಹೊರತು ವಯಕ್ತಿಕ ವಾಗಿ ನೋಡಬಾರದು .ಅವಹೇಳನಕಾರಿ ಯಾಗಿ ಯಾರ ಬಗ್ಗೆ ಮಾತನಾಡಬಾರದು ಅದು ವ್ಯಕ್ತಿತ್ವಕ್ಕೆ ದಕ್ಕೆ ಎಂದರು.ಯಾವುದೇ ಪಕ್ಷ, ವ್ಯಕ್ತಿ ಆಗಲಿ ನಿಂದನೆ ಮಾಡಬಾರದು. ಜಕಾರಣದಲ್ಲಿ ಭ್ರಷ್ಟಾಚಾರ, ಆರೋಪ-ಪ್ರತ್ಯಾರೋಪ ಸಹಜ ಅಷ್ಟಕ್ಕೇ ಸಿಮಿತವಾಗಿ ಇರಬೇಕು ಎಂದರು.
ಪತ್ರಿಕಾಗೋಷ್ಠಿ ಖಾಜಿ ಮಲ್ಲಿಕ್, ವೈ.ಅನೀಲಕುಮಾರ ಪತ್ರಿಕಾಗೋಷ್ಠಿ ಯಲ್ಲಿ ಉಪಸ್ಥಿತರಿದ್ದರು.