ಪತ್ರ ಉತ್ತಮ ಸಮೂಹ ಸಂಪರ್ಕ ಸಾಧನ
ಸಂಜೆವಾಣಿ ವಾರ್ತೆ
ಬಳ್ಳಾರಿ, ಎ,26- ಪತ್ರ ಉತ್ತಮ ಸಮೂಹ ಸಂಪರ್ಕ ಸಾಧನವಾಗಿದೆ ಎಂದು ಕರ್ನಾಟಕ ರಾಜ್ಯ ಕ್ರಿಯಾಶೀಲ ಶಿಕ್ಷಕರ ವೇದಿಕೆ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ರವಿಚೇಳ್ಳಗುರ್ಕಿ ಹೇಳಿದರು.
ತಾಲೂಕಿನ ಸಂಜೀವರಾಯನಕೋಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬರಗಾಲ ಬೇಸಿಗೆ ಬಿಸಿಯೂಟಕ್ಕೆ ಹಾಜರಾದ ಪ್ರತಿಭಾವಂತ ಮಕ್ಕಳಿಂದ ತಂದೆ ತಾಯಿಗೆ ಮತದಾನ ಮಹತ್ವದ ಕುರಿತು ಪತ್ರ ಬರೆಸಲಾಯಿತು.
ನಿಮ್ಮ ಮತ, ನಿಮ್ಮ ಹಕ್ಕು ತಪ್ಪದೇ ಮತಹಾಕಿ ಹಾಕಿಸಿರಿ ಎಂದು ಮಕ್ಕಳು ತಮ್ಮ ಪೋಷಕರಲ್ಲಿ ವಿನಂತಿ ಮಾಡಿಕೊಂಡಿದ್ದಾರೆ.
ಮಕ್ಕಳು ಬರೆದ ಪತ್ರಗಳನ್ನು ಸಂಗ್ರಹಿಸಿ ಬಳ್ಳಾರಿಯ ಕೇಂದ್ರ ಅಂಚೆ ಕಚೇರಿಯಿಂದ ಪೋಸ್ಟ್ ಮಾಡಲಾಯಿತು.
ಊರಿನ ಸ್ವಾಮಿ, ಲೋಕಪ್ಪ ಮುಂತಾದವರು ಉಪಸ್ಥಿತರಿದ್ದರು.
One attachment • Scanned by Gmail