ಒಂದೇ ಕುಟುಂಬದ ೯೦ ಮಂದಿ ಮತದಾನ
ಬೆಂಗಳೂರು, ಏ.೨೬- ತಾಯಿ,ಮೊಗಳು, ಮೊಮ್ಮಗಳು ಸೇರಿದಂತೆ ಒಂದೇ ಕುಟುಂಬದ ೯೦ ಮಂದಿ ಚಿಕ್ಕಬಳ್ಳಾಪುರದಲ್ಲಿ
ಮತದಾನ ಮಾಡಿದ್ದಾರೆ.
ಚಿಕ್ಕಬಳ್ಳಾಪುರದ ಬಾದಾಮ್ ಕುಟುಂಬದಲ್ಲಿ ಮತ ಚಲಾಯಿಸುವ ೯೦ ಜನರಿದ್ದು, ಅವರೆಲ್ಲರೂ ತಮ್ಮ ಹಕ್ಕು ಚಲಾಯಿಸಿದ್ದಾರೆ.
ಚಿಕ್ಕಬಳ್ಳಾಫುರ ನಗರದ ೧೯ನೇ ವಾರ್ಡ್? ನಿವಾಸಿಗಳಾಗಿದ್ದು, ನಗರದ ಮತಗಟ್ಟೆ ಸಂಖ್ಯೆ ೧೬೧ರಲ್ಲಿ ಮತದಾನ ಮಾಡಿದ್ದಾರೆ. ಎಲ್ಲರೂ ಒಂದೆಡೆ ಸೇರಿ ಮತದಾನ ಮಾಡುವ ಸಂಪ್ರದಾಯವನ್ನು ಈ ಕುಟುಂಬ ಹೊಂದಿದೆ. ಒಂದೇ ಸಮಯದಲ್ಲಿ ಬಾದಾಮ್ ಕುಟುಂಬ ಮತದಾನ ಮಾಡಿದೆ.
ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್?ನಿಂದ ರಕ್ಷಾರಾಮಯ್ಯ ಹಾಗೂ ಬಿಜೆಪಿಯಿಂದ ಮಾಜಿ ಸಚಿವ ಡಾ.ಕೆ.ಸುಧಾಕರ್ ಸ್ಪರ್ಧಿಸಿದ್ದಾರೆ. ಅಂದ ಹಾಗೆಯೇ ರಾಜ್ಯದಲ್ಲಿ ಇಂದು ೧೪ ಕ್ಷೇತ್ರಗಳಲ್ಲಿ ಮೊದಲ ಮತದಾನ ನಡೆಯುತ್ತಿದೆ. ಈಗಾಗಲೇ ಅನೇಕರು ಮತ ಚಲಾಯಿಸಿದ್ದಾರೆ.