ಏ.೨೮ ಬಿಜೆಪಿ ಕಾರ್ಯಕರ್ತರ ಸಮಾವೇಶ-ಡಾ.ಶರಣಬಸವ ಪಾಟೀಲ್
ದೇವದುರ್ಗ.ಏ.೨೬- ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಏ.೨೮ರಂದು ಜಿಲ್ಲಾ ಮಟ್ಟದ ಬಿಜೆಪಿ ಕಾರ್ಯಕರ್ತರ ಸಮಾವೇಶ ಆಯೋಜಿಸಿದ್ದ ಜಿಲ್ಲಾ ಪ್ರಭಾರಿಗಳು ಸೇರಿ ಗಣ್ಯರು ಭಾಗವಹಿಸಲಿದ್ದಾರೆ ಎಂದು ಸಮಾವೇಶ ಸಂಚಾಲಕ ಡಾ.ಶರಣಬಸವ ಪಾಟೀಲ್ ಜೋಳದಹೆಡಗಿ ಹೇಳಿದರು.
ಪಟ್ಟಣದ ಗೌರಂಪೇಟೆ ಸಮೀಪದ ಕೊಪ್ಪರ ರಸ್ತೆಯಲ್ಲಿ ಸಮಾವೇಶ ನಡೆಯುವ ಜಾಗಪರಿಶೀಲಿಸಿ ಶುಕ್ರವಾರ ಮಾತನಾಡಿದರು. ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಗೆಲ್ಲಿಸಲು ಕಾರ್ಯಕರ್ತರು, ನಾಯಕರ ಸಮಾವೇಶ ಆಯೋಜಿಸಲಾಗಿದೆ. ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ, ಶಾಸಕ ಡಾ.ಶಿವರಾಜ ಪಾಟೀಲ್, ಮಾನಪ್ಪ ವಜ್ಜಲ್, ಮಾಜಿ ಸಂಸದ ಬಿ.ವಿ.ನಾಯಕ, ಮಾಜಿ ಸಚಿವ ಕೆ.ಶಿವನಗೌಡ ನಾಯಕ ಸೇರಿ ಜಿಲ್ಲಾ ಪ್ರಭಾರಿಗಳು ಭಾಗವಹಿಸಲಿದ್ದಾರೆ.
ದೇಶದ ಸವಾಂಗೀಣ ಅಭಿವೃದ್ಧಿಗಾಗಿ ದೂರದೃಷ್ಟಿಯ ಯೋಜನೆಗಳನ್ನು ರೂಪಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸಲು ಶ್ರಮಿಸಲಾಗುತ್ತಿದೆ. ಸದ್ಯ ಜಿಲ್ಲಾ ಮಟ್ಟದ ಸಮಾವೇಶ ನಡೆಸಲಿದ್ದು ಮುಂದಿನ ದಿನಗಳಲ್ಲಿ ರಾಜ್ಯಮಟ್ಟದ ನಾಯಕರು ಜಿಲ್ಲೆಯಲ್ಲಿ ಪ್ರಚಾರ ಕೈಗೊಳ್ಳಲಿದ್ದಾರೆ. ಕಾರ್ಯಕರ್ತರು, ಹಿತೈಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಮನವಿ ಮಾಡಿದರು.
ಮುಖಂಡರಾದ ನಾಗರಾಳ್ ಮಲ್ಲಣ್ಣ ಸಾಹುಕಾರ, ಬಸವರಾಜ ವಕೀಲ, ನಾಗರಾಜ ಗೋಪಾಳಪುರ, ಮಲ್ಲಿಕಾರ್ಜುನ ಅಳ್ಳುಂಡಿ, ನಾಗರಾಜ ಅಕ್ಕರಕಿ, ವೀರಣ್ಣ ಪಾಣಿ ಸಾಹುಕಾರ, ಪ್ರಕಾಶ ಪಾಟೀಲ್ ಜೇರಬಂಡಿ, ಚಂದ್ರಕಾಂತ್ ಮಸರಕಲ್, ಮಲ್ಲಿಕಾರ್ಜುನ ಮೇಟಿ, ಬಸನಗೌಡ ವೆಂಕಟಾಪುರ, ಮಲ್ಲಿಕಾರ್ಜುನ ಹಿರೇಬೂದುರು, ಸಂಜೀವರೆಡ್ಡಿ, ಇತರರಿದ್ದರು.
೨೬-ಡಿವಿಡಿ-೩