ಇಂದು ಸಂಜೆ ನಗರಕ್ಕೆ ರಾಹುಲ್  ಗಾಂಧಿ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ: ಲೋಕಸಭಾ ಚುನಾವಣೆಯ ಬಳ್ಳಾರಿ ಕ್ಷೇತ್ರದ ಅಭ್ಯರ್ಥಿ ಇ.ತುಕರಾಂ ಮತ್ತು ಕೊಪ್ಪಳದ ಅಭ್ಯರ್ಥಿ ಹಿಟ್ನಾಳ್ ಅವರ ಪರವಾಗಿ ಮತದರಲ್ಲಿ ಮತ ನೀಡುವಂತೆ ಬಹಿರಂಗ ಪ್ರಚಾರದ ಸಮಾವೇಶದಲ್ಲಿ ಪಾಲ್ಗೊಳ್ಳಲು ಇಂದು ಸಂಜೆ 4 ಗಂಟೆಗೆ  ನಗರಕ್ಕೆ  ಕಾಂಗ್ರೆಸ್  ಪಕ್ಷದ ಮುಖಂಡ ರಾಹುಲ್ ಗಾಂಧಿ ಅವರು ಆಗಮಿಸುತ್ತಿದ್ದಾರೆ.
ಇವರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಲಿದ್ದು,  ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಉಪ ಮುಖ್ಯ ಮಂತ್ರಿ ಡಿಕೆ ಶಿವಕುಮಾರ್ ಅವರು ಬರುವ ಸಾಧ್ಯತೆ ಇದೆ.
ನಗರದುನಿಷಿಪಲ್ ಹೈಸ್ಕೂಲ್ ಮೈದಾನದಲ್ಲಿ ಬಹಿಮಗ ಸಮಾವೇಶಕ್ಕೆ ವ್ಯವಸ್ಥೆ ಮಾಡಿದೆ.
ಸಂಜೆ ಆಗಿರುವುದರಿಂದ ಈಪನ್ ಸ್ಟೇಜ್ ಹಾಕಿದೆ. 50 ಜನ ಗಣ್ಯರು ಕುಳಿತುಕೊಳ್ಳುವಷ್ಟು ಬೃಹತ್ ವೇದಿಕೆ ನಿರ್ಮಿಸಿದೆ.
25 ಸಾವಿರಕ್ಕೂ ಹೆಚ್ಚು ಜನ ಕುಳಿತಿಕೊಳ್ಳಲು ಆಸನದ ವ್ಯವಸ್ಥೆ ಮಾಡಿದೆ.
ವ್ಯವಸ್ಥೆ ಮಾಡಿರುವುದನ್ನು ಇಂದು ಸಚಿವ ಬಿ.ನಾಗೇಂದ್ರ ಪರಿಶೀಲನೆ ನಡೆಸಿ. ಸಮಾವೇಶಕ್ಕೆ ನಗರ ಮತ್ತು ಗ್ರಾಮೀಣ ಪ್ರದೇಶ ಹಾಗು ಜಿಲ್ಲೆಯ ವಿವಿಧಡೆಯಿಂದ ಒಂದು ಲಕ್ಷಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ಜೊಲ್ಲೆಯ ಶಾಸಕರು, ಅಭ್ಯರ್ಥಿಗಳು, ಸಂಸದರು, ಮಾಜಿ ಸಂಸದರು, ಮಾಜಿ ಶಾಸಕರು, ಎಐಸಿಸಿ, ಕೆಪಿಸಿಸಿ ಮುಖಂಡರು ಪಾಲ್ಗೊಳ್ಳಲಿದ್ದಾರೆ‌. ಬಿಸಿಲು ಇರುವುದರಿಂದ ಸಮಾವೇಶಕ್ಕೆ ಬರುವ ಜನತೆಗೆ ನೀರು, ಮಜ್ಜಿಗೆ ವಿತರಿಸಲು ವ್ಯವಸ್ಥೆ ಮಾಡಿದೆಂದರು.
ಡಿಸಿಸಿ ಅಧ್ಯಕ್ಷ ಅಲ್ಲಂ ಪ್ರಶಾಂತ್, ಪಾಲಿಕೆ ಸದಸ್ಯರಾದ  ಪಿ.ಗಾದೆಪ್ಪ, ಎಂ.ರಾಮಾಂಜನೇಯ ಮೊದಲಾದವರು ಇದ್ದರು.