ಸಮಾಜದಲ್ಲಿ ವಿಕಲಚೇತನರನ್ನು ನೋಡುವ ದೃಷ್ಟಿ ಬದಲಾಗಲಿ
ಬಸವಕಲ್ಯಾಣ: ಸೆ.21:ವಿಕಲಚೇತನರು ಅಂಗವಿಕಲತೆ ಬಗ್ಗೆ ಅನುಕಂಪದ ಬದಲು ಅವರಲ್ಲಿಯ ಸ್ವ ಪ್ರತಿಭೆ, ಸಾಮರ್ಥವನ್ನು ಗುರುತಿಸಿ ಅವರಿಗೆ ಅಗತ್ಯ ಸೌಲಭ್ಯಗಳನ್ನು ತೋರುವ ಕೆಲಸ ಸಮಾಜದಿಂದ ನಡೆಯಬೇಕಿದೆ ಎಂದು ಹಿರಿಯ ಸಾಹಿತಿ ಡಾ.ಗವಿಸಿದ್ಧಪ್ಪ ಪಾಟೀಲ ಅಭಿಪ್ರಾಯ ವ್ಯಕ್ತಪಡಿಸಿದರು.
ಉರಿಲಿಂಗಪೆದ್ದಿ ಸಾಹಿತ್ಯ ಸಂಸ್ಕøತಿಕ ವೇದಿಕೆ ಬೇಲೂರು, ಶರಣ ಉರಿಲಿಂಗಪೆದ್ದಿ ಶಾಖಾ ಮಠ ತ್ರಿಪುರಾಂತ ಆಶ್ರಯದಲ್ಲಿ ಲಿಂ.ಪೂಜ್ಯ ಶ್ರೀ ಶಿವಯೋಗಿ ಸ್ವಾಮೀಜಿ ಅವರ 32ನೇ ಸ್ಮರಣೋತ್ಸವ ನಿಮಿತ್ತ ನಗರದ ಶಾಖಾ ಮಠದ ಪರಿಸರದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ವಿಕಲಚೇತನರ ಸಮಾವೇಶ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಉಪನ್ಯಾಸ ನೀಡಿದ ಅವರು, ವಿಕಲಚೇತನರು ತಮ್ಮ ಸ್ವಸಾಮಥ್ಯ ಮೂಲಕ ಎಲ್ಲಾ ಕ್ಷೇತ್ರದಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದ್ದಾರೆ. ಸಮಾಜದಲ್ಲಿ ಅವರನ್ನು ನೋಡುವ ದೃಷ್ಟಿ ಬದಲಾಗಬೇಕು ಎಂದರು.
ಸಮಾವೇಶ ಉದ್ಘಾಟಿಸಿದ ಬೀದರ ಜಿಲ್ಲಾ ವಿಕಲಚೇತನ ಮತ್ತು ಹಿರಿಯ ನಾಗರಿಕರ ಕಲ್ಯಾಣ ಅಧಿಕಾರಿ ಮಹಾದೇವ ಮುಂಗಳೆ ಮಾತನಾಡಿ, ಸಮಾವೇಶದ ಮೂಲಕ ಪ್ರತಿಭೆ ಗುರುತಿಸಿ ಪ್ರಶದ್ತಿ ಪ್ರದಾನ ಮಾಡಿ ಗೌರವಿಸುವ ಕಾರ್ಯ ಪ್ರಸಂಶನಾರ್ಹ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಾನ್ನಿಧ್ಯ ವಹಿಸಿz ಶ್ರೀ ಪಂಚಾಕ್ಷರಿ ಸ್ವಾಮೀಜಿ ಆಶೀರ್ವಚನ ನೀಡಿ, ವಿಕಲಚೇತನರು ವಿವಿಧ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮಾಡಿ ತೋರಿಸಿದ್ದಾರೆ. ಯಾವುದೇ ಕ್ಷೇತ್ರವಿರಲಿ ಪ್ರತಿಭೆಯನ್ನು ಗುರಿತಿಸಿ ಪ್ರೋತ್ಸಾಹಿಸುವ ಕೆಲಸ ಸಮಾಜದಿಂದ ನಿರಂತರವಾಗಿ ನಡೆಯುತ್ತಿರಬೇಕು ಎಂದು ಆಶಯ ವ್ಯಕ್ತಪಡಿಸಿದರು.
ನೇತೃತ್ವ ವಹಿಸಿದ ಶ್ರೀ ಮಹಾಲಿಂಗ ದೇವರು, ಪತ್ರಕರ್ತ ಬಸವರಾಜ ಕೌಟೆ ಮಾತನಾಡಿದರು. ಅಂಗವಿಕಲರ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಶಾಂತಪ್ಪ ಸಂಗಾವಿ ಅಧ್ಯಕ್ಷತೆ ವಹಿಸಿದ್ದರು. ಆಹಾರ ಶಿರಸ್ತೇದಾರ ನಿಂಗಯ್ಯ ಹಿರೇಮಠ ಉಪಸ್ಥಿತಿ, ಪರಿಸರ ಅಭಿಯಂತರ ಮನೋಜಕುಮಾರ ಕಾಂಬಳೆ, ಸಂಜುಕುಮಾರ ನಡುಕರ್ ಉಪಸ್ಥಿತರಿದ್ದರು. .ಸುರೇಶ ಕಾನೇಕರ ಸ್ವಾಗತಿಸಿದರು. ಸೂರ್ಯಕಾಂತ ಬೊಸ್ಲೇ ವಂದಿಸಿದರು. ನಿತ್ಯಾನಂದ ಮಂಠಾಳಕರ ನಿರೂಪಿಸಿದರು.
ಶಿವಯೋಗಿ ರತ್ನ ಪ್ರಶಸ್ತಿ ಪುರಸ್ಕøತರು:
ವಿವಿಧ ಕ್ಷೇತ್ರದ ಸಾಧಕರಾದ ಸಂತೋಷ ಧಾಯಗೊಂಡ(ಶಿಕ್ಷಣ), ಲಾಲಮಹಮದ್ ಕಲಮೂಡ( ಆಡಳಿತ), ಶಿವಕುಮಾರ ಪಾಟೀಲ್ ( ಯೋಜಕರು),ಶಿವಕುಮಾರ ಬಿರಾದಾರ(ಅಧಿಕಾರಿ), ಮನೋಜಕುಮಾರ ಕಾಂಬಳೆ(ಪರಿಸರ), ಸುನೀಲ ಮಲಗೆ(ಸಮಾಜ) ಕ್ಷೇತ್ರದ ಸಾಧಕರಿಗೆ ಶಿವಯೋಗಿ ರತ್ನ ಪ್ರಶಸಿಪ್ರದಾನ ಮಾಡಲಾಯಿತು. 102 ವರ್ಷದ ಶತಾಯುಷಿ ರುಕ್ಮಿಣಿ ಬಾಯಿ ವಿಠ್ಠಲ ವಾಘಮಾರೆ ಅವರಿಗೆ ಶತ ಸಿರಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು