ಭೃಷ್ಟಾಚಾರ ಮುಕ್ತ ಸಮಾಜ ನಿರ್ಮಿಸಲು ಎಲ್ಲರ ಸಹಕಾರ ಅಗತ್ಯ
ಬಸವಕಲ್ಯಾಣ:ಸೆ.21:ಇಲ್ಲಿಯ ತಹಸೀಲ್ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ ಲೋಕಾಯುಕ್ತ ಪೊಲೀಸರಿಂದ ಸಾರ್ವಜನಿಕರಕುಂದು ಕೊರತೆಗಳು ಹಾಗೂ ಅಹವಾಲು ಸ್ವೀಕರಿಸಿದರು.ವಿವಿಧೆಡೆಯಿಂದ ಆಗಮಿಸಿದ ಸಾರ್ವಜನಿಕರುತಮ್ಮ ದೂರುಗಳನ್ನು ಲೋಕಾ ಅಧಿಕಾರಿಗಳಿಗೆ ಸಲ್ಲಿಸಿದರು.ಸ್ಥಳದಲ್ಲಿಯೇ ಅಧಿಕಾರಿಗಳ ಸಮ್ಮುಖದಲ್ಲಿ ಕೆಲ ಅರ್ಜಿಗಳ ಇತ್ಯರ್ಥ ಪಡಿಸಿದರು.ಅಹವಾಲು ಸ್ವೀಕಾರ ಹಿನ್ನಲೆಯಲ್ಲಿ ವಿವಿಧಇಲಾಖೆಯತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದರು.
ಅಧಿಕಾರಿಗಳು ಕಚೇರಿಗೆ ಬಂದ ನಂತರಕಚೇರಿಯ ಸಮಯದಲ್ಲಿಯಾವುದೇಕಾರಣಕ್ಕೂ ದ್ವಾರಗಳು ಬಂದ್ ಮಾಡಿಕೂಡಬೇಡಿಇಂತಹ ವರದಿಗಳು ನಮ್ಮಗಮನಕ್ಕೆ ಬಂದಿವೆ. ಸಾರ್ವಜನಿಕರುಕುಂದು ಕೊರತೆಗಳ ಅರ್ಜಿಗಳನ್ನು ಹಿಡಿದುಕೊಂಡುನಿತ್ಯಕಚೇರಿಗೆ ಬರುತ್ತಾರೆ.ನೀವು ಕಚೇರಿಯ ದ್ವಾರಗಳು ಬಂದ್ ಮಾಡಿ ಕುಳಿತರೆ ಅವರುಗಂಟೆಗಟ್ಟಲೇಕಾಯಬೇಕಾಗುತ್ತದೆ ಹೀಗಾಗಿ ನಿಗದಿತ ಸಮಯದಲ್ಲಿ ಆಗಮಿಸುವ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದುಅಧಿಕಾರಿಗಳಿಗೆ ಲೋಕಾಯುಕ್ತ ಅಧಿಕಾರಿಗಳು ಸಲಹೆ ನೀಡಿದರು.
ಅಧಿಕಾರಿಗಳಿಗೆ ಕಾನೂನು ಬಾಹಿರವಾಗಿ ಕೆಲಸ ಮಾಡಲುಜನರುಒತ್ತಾಯ ಮಾಡಿದರೆ ಅಧಿಕಾರಿಗಳು ಲೋಕಾಯುಕ್ತರಿಗೆದೂರು ಸಲ್ಲಿಸಬಹುದು ನಾವು ಅವರ ಮೇಲೆ ಕ್ರಮ ಕೈಗೊಳ್ಳುತ್ತೇವೆ ಹೀಗಾಗಿ ಯಾವುದೇ ಭಯ ಪಡದೆ ಕಾನೂನು ರೀತಿಯಲ್ಲಿತಮ್ಮಜವಬ್ದಾರಿಅರಿತುಕರ್ತವ್ಯ ನಿರ್ವಹಿಸಬೇಕು ಎಂದು ತಿಳಿಸಿದರು.
ಈ ವೇಳೆ ಬೀದರ ಲೋಕಾಯುಕ್ತಡಿವೈಎಸ್‍ಪಿ ಹಣಮಂತರಾಯ ಮಾತನಾಡಿ, ಜನರಿಗಾಗಿಜನರ ಸೇವೆಗಾಗಿ ಅಧಿಕಾರಿಗಳು ಕೆಲಸ ಮಾಡಬೇಕು, ಬೃಷ್ಟಾಚಾರ ಮುಕ್ತ ಸಮಾಜ ನಿರ್ಮಿಸಲುಎಲ್ಲರ ಸಹಾಯ-ಸಹಕಾರಅವಶ್ಯಕವಾಗಿದೆ.ಲಂಚದ ಬೇಡಿಕೆಇಡುವದು ಕಾನೂನು ರೀತಿಯಲ್ಲಿಅಪರಾಧವಾಗಿದೆ.ಇಂತಹ ಪ್ರಕರಣದಲ್ಲಿದೂರು ಬಂದರೆಲೋಕಾ ಅಧಿಕಾರಿಗಳು ದಾಳಿ ನಡೆಸಿ ಪ್ರಕರಣದಾಖಲಿಸುತ್ತಾರೆ ಹೀಗಾಗಿಇದಕ್ಕೆ ಅಧಿಕಾರಿಗಳು ಆಸ್ಪದ ನೀಡಬೇಡಿತಮ್ಮಜವಬ್ದಾರಿಅರಿತುಕರ್ತವ್ಯ ನಿರ್ವಹಿಸಿ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕುಎಂದು ತಿಳಿಸಿದರು.
ಇತ್ತೀಚಿಗೆಹುಲಸೂರತಾಲೂಕಿನ ಬೇಲೂರ ಹಾಗೂ ಗೋರ್ಟಾ (ಬಿ) ಗ್ರಾಪಂ ವ್ಯಾಪ್ತಿಯಲ್ಲಿ ನರೇಗಾಯೋಜನೆಯಡಿಎರಡು ಪ್ರಕರಣಗಳು ದಾಖಲಾಗಿದ್ದವು.ಈಗಾಗಲೇ ಬೇಲೂರಗ್ರಾಪಂ ವ್ಯಾಪ್ತಿಯಲ್ಲಿ ನಡೆದಅವ್ಯವಹಾರತನಿಖೆ ಪೂರ್ಣಗೊಂಡಿದ್ದುಗೋರ್ಟಾ ವ್ಯಾಪ್ತಿಯಲ್ಲಿನ ಪ್ರಕರಣ ವಿಚಾರಣೆಯ ಹಂತದಲ್ಲಿದ್ದುಕೂಡಲೇತನಿಖೆ ಮುಗಿಸಿ ವರದಿ ಸಲ್ಲಿಸಲಾಗುವದುಎಂದು ತಿಳಿಸಿದರು.
ಇಲ್ಲಿಯ ಎಪಿಎಂಸಿಯಲ್ಲಿ ಬೆಂಬಲ ಬೆಲೆಯಲ್ಲಿಖರೀದಿ ಮಾಡುವಬೆಳೆಗಳಿಗೆ ವರ್ತಕರುರೈತರಿಂದಕಮೀಷನ್ ಹಾಗೂ ಧವಸ ಧಾನ್ಯಗಳು ಪಡೆಯುತ್ತಿದ್ದಾರೆ.ಮತ್ತುಆದಷ್ಟು ಬೇಗ ಖರೀದಿ ಕೇಂದ್ರಗಳು ತೆರೆಯಬೇಕುಎಂದುರೈತರುಇಂದುನೀಡಿದದೂರಿನಲ್ಲಿ ತಿಳಿಸಿದ್ದಾರೆ.ಹೀಗಾಗಿ ಎಪಿಎಂಸಿ ಕಾರ್ಯದರ್ಶಿಗಳು ಕೂಡಲೇರೈತರಿಗೆಅನ್ಯಾಯವಾಗದರೀತಿಯಲ್ಲಿ ನೋಡಿಕೊಳ್ಳಬೇಕು ಎಂದು ಹೇಳಿದರು.
ಈ ವೇಳೆ ಸಹಾಯಕಆಯುಕ್ತ ಮುಕುಲ ಜೈನ್, ತಹಸೀಲ್ದಾರ ಡಾ.ದತ್ತಾತ್ರೆಯಗಾದಾ, ಲೋಕಾ ಇನ್ಸ್‍ಪೆಕ್ಟರ್‍ಗಳಾದ ಬಾಬಾಸಾಹೇಬ ಪಾಟೀಲ, ಉದ್ದಂಡಪ್ಪ, ನಗರ ಸಭೆ ಪೌರಾಯುಕ್ತರಾಜು ಡಿ. ಬಣಕಾರ, ಸಿಪಿಐ ಅಲಿಸಾಬ,ಪಿಎಸ್‍ಐಗಳಾದ ಜಯಶ್ರೀ ಹೊಡಲ್, ಸುವರ್ಣಾ ಮಲಶೆಟ್ಟಿ ಹಾಗೂ ಲೋಕಾಯುಕ್ತ ಸಿಬ್ಬಂದಿಗಳಾದ ವಿಷ್ಣುರೆಡ್ಡಿ, ಭರತ, ಅಡೆಪ್ಪಾ, ಕಿಶೋರ, ಕುಶಾಲ, ನಾಗಶೆಟ್ಟಿ, ಕಂಟೆಪ್ಪಾ ಸೇರಿದಂತೆವಿವಿಧಇಲಾಖೆಯತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.