ನಾಗೇನಹಳ್ಳಿಯಲ್ಲಿ ಶಾಲಾಪೂರ್ವ ಶಿಕ್ಷಣ ಚಟುವಟಿಕೆಗಳಮೂರು ದಿನಗಳ ತರಬೇತಿ ಕಾರ್ಯಗಾರ
ಹೊಸಪೇಟೆ (ವಿಜಯನಗರ) ಸೆ.21: ನಾಗೇನಹಳ್ಳಿ 4ನೇ ಅಂಗನವಾಡಿ ಕೇಂದ್ರದಲ್ಲಿ ಸೆಪ್ಟೆಂಬರ್ 19ರಿಂದ 5ನೇ ಹಂತದ ಶಾಲಾಪೂರ್ವ ಶಿಕ್ಷಣ ಚಟುವಟಿಕೆಗಳ ಮೂರು ದಿನಗಳ ತರಬೇತಿ ಕಾರ್ಯಗಾರ ನಡೆಯಿತು.
ಹೊಸಪೇಟೆ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಚಿತವಾಡಗಿ 1ನೇ ವಲಯದ ನಾಗೇನಹಳ್ಳಿ 4ನೇ ಅಂಗನವಾಡಿ ಕೇಂದ್ರದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ, ವಿಜಯನಗರ ಜಿಲ್ಲಾಢಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಕಲಿಕೆ ಟಾಟಾ ಟ್ರಸ್ಟ್ ಸಹಯೋಗದಲ್ಲಿ ಶಾಲಾಪೂರ್ವ ಶಿಕ್ಷಣ ಬಲವರ್ಧನೆ ಕಾರ್ಯಕ್ರಮದ ಅಡಿ ಚಿತವಾಡಗಿಯ 1ನೇ ವಲಯದ ಅಂಗನವಾಡಿ ಕಾರ್ಯಕರ್ತೆಯರಿಗೆ ವಲಯಮಟ್ಟದಲ್ಲಿ 5ನೇ ಹಂತದ ಶಾಲಾಪೂರ್ವ ಶಿಕ್ಷಣ ಚಟುವಟಿಕೆಗಳ ಮೂರು ದಿನಗಳ ತರಬೇತಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು.
ತರಬೇತಿ ಕಾರ್ಯಕ್ರಮವನ್ನು ಹೊಸಪೇಟೆಯ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಸಿಂಧೂ ಅಂಗಡಿ ಅವರು ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿ, ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ವಿಜಯನಗರ ಜಿಲ್ಲೆಯು ಶಾಲಾಪೂರ್ವ ಶಿಕ್ಷಣದಲ್ಲಿ ದೇಶಕ್ಕೆ ಮಾಧರಿಯಾಗುವಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಮತ್ತು ಕಲಿಕೆ – ಟಾಟಾ ಟ್ರಸ್ಟ್ಸ್ ಮಹತ್ವದ ಪಾತ್ರವಹಿಸಿದೆ.
ಈ ಕಾರ್ಯಕ್ರಮದಿಂದ ಇಂದು ಅಂಗನವಾಡಿ ಕೇಂದ್ರಗಳಲ್ಲಿ 3 ರಿಂದ 6 ವರ್ಷದ ಮಕ್ಕಳ ಕಲಿಕೆಯನ್ನು, ಆಟಗಳ ಮತ್ತು ಚಟುವಟಿಕೆಗಳನ್ನು ಕಲಿಸಲು ಅಂಗನವಾಡಿ ಮೇಲ್ವಿಚಾರಕಿಯರಿಗೆ ಸಾಮರ್ಥ್ಯಾಭಿವೃದ್ಧಿಗೊಳಿಸಲಾಗುತ್ತಿದೆ. ಮೇಲ್ವಿಚಾರಕಿಯರಿಂದಲೇ ಶಿಕ್ಷಕಿಯರಿಗೆ ಸಾಮರ್ಥ್ಯವನ್ನು ವೃದ್ಧಿಸಿ ಮಕ್ಕಳಿಗೆ ಪರಿಣಾಮಕಾರಿಯಾಗಿ ಹಾಗೂ ಗುಣಾತ್ಮಕ ಶಾಲಾಪೂರ್ವ ಶಿಕ್ಷಣವನ್ನು ನೀಡುವಲ್ಲಿ ಸಮರ್ಥರಾಗಿದ್ದಾರೆ. ಇಂದು ಮಕ್ಕಳ ಪೋಷಕರ ಅಭಿಲಾಶೆಯಂತೆ ಈ ತರಬೇತಿಯಲ್ಲಿ ಅಕ್ಷರ ಅಭ್ಯಾಸ ಚಟುವಟಿಕೆಯನ್ನು ಸಹ ಮಕ್ಕಳಿಗೆ ಕಲಿಸುವ ಚಟುವಟಿಕೆಗಳನ್ನು ಅಂಗನವಾಡಿ ಶಿಕ್ಷಕಿಯರಿಗೆ ನೀಡುತ್ತಿದ್ದಾರೆ ಎಂದು ತರಬೇತಿಯ ಕುರಿತು ಮಾತನಾಡಿದರು.
ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಹಿರಿಯ ಮೇಲ್ವಿಚಾರಕಿಯರಾದ ಅಂಬುಜ ಅವರು ತರಬೇತಿಯ ಕುರಿತು ಪ್ರಾಸ್ಥಾವಿಕವಾಗಿ ಮಾತನಾಡಿ, ತರಬೇತಿಯ ಉದ್ದೇಶ ತರಬೇತಿಯಲ್ಲಿರುವ ವಿಷಯಗಳ ಬಗ್ಗೆ ತಿಳಿಸಿದರು.
ಶಾಲಾಪೂರ್ವ ಶಿಕ್ಷಣ ಬಲವರ್ಧನೆ ಕಾರ್ಯಕ್ರಮದ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರಾದ ಕೊಟ್ರೇಶ ಯರಡಕೇರಿ ಅವರು ಮಾತನಾಡಿ, ಶಾಲಾಪೂರ್ವ ಶಿಕ್ಷಣ ಕಾರ್ಯಕ್ರಮವು ಜಿಲ್ಲೆಯಲ್ಲಿ ತುಂಬ ಚೆನ್ನಾಗಿ ಅನುಷ್ಠಾನವಾಗುತ್ತಿದೆ. ಇದಕ್ಕೆ ಜಿಲ್ಲೆಯ ಎಲ್ಲಾ ಅಧಿಕಾರಿವರ್ಗದವರು ಸಹಕಾರ ನೀಡುತ್ತಿದ್ದಾರೆ ಎಂದು ಹೇಳಿದರು.
ವಲಯ ಮೇಲ್ವಿಚಾರಕಾರದ ಎಲ್.ಡಿ ನಧಾಫ್ ಅವರು ತರಬೇತಿ ಕಾರ್ಯಕ್ರಮಕ್ಕೆ ಸ್ವಾಗತಿಸಿದರೆ. ಮೇಲ್ವಿಚಾರಕರಾದ ಶ್ರಂತಿ ಪ್ರಮೀಳ ಪಾಟಿಲ್ ಅವರು ವಂದಿಸಿದರು. ಕಾರ್ಯಕ್ರಮದಲ್ಲಿ ಚಿತವಾಡಗಿ ಒಂದನೇ ವಲಯದ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು.