ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡುವಂತೆರಾಂಪ್ರಸಾದ್, ನಾಗೇಂದ್ರ ಎಪಿಎಂಸಿಯಲ್ಲಿ ಮನವಿ
(ಸಂಜೆವಾಣಿ ವಾರ್ತೆ)
ಬಳ್ಳಾರಿ:ಎ,26- ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಇಂದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತನೀಡುವಂತೆ. ಎಪಿಎಂಸಿಯ ಅಧ್ಯಕ್ಷ ಕಟ್ಟೆಮನೆ ನಾಗೇಂದ್ರ, ಪಕ್ಷದ ಹಿರಿಯ ಮುಖಂಡ ಬಿ.ರಾಂಪ್ರಸಾದ್ ಮೊದಲಾದವರು ಮತಯಾಚನೆ ಮಾಡಿದರು.
ಕಾಂಗ್ರೆಸ್ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ದೇಶ ಮತ್ತು ಜನರ ಅಭಿವೃದ್ಧಿಗೆ ನೀಡಿರುವ ವಾಗ್ದಾನದ ಪ್ರಣಾಳಿಕೆಯ ಅಂಶಗಳ ಕರಪತ್ರವನ್ನು ಮತದಾರರಿಗೆ ನೀಡಿ. ಅಭ್ಯರ್ಥಿ ಇ.ತುಕರಾಂ ಅವರಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು
ಈಗಾಗಲೇ ರಾಜ್ಯದಲ್ಲಿ ಪಂಚ ಗ್ಯಾರೆಂಟಿಗಳ ಮೂಲಕ, ಬಡ,ಮಹಿಳೆಯರು ಮತ್ತು ಯುವ ಜನರ ಅಬಿವೃದ್ದಿಗೆ ಪೂರಕವಾಗಿರುವ ಕಾಂಗ್ರೆಸ್ ಸರ್ಕಾರ. ಕೇಂದ್ರದಲ್ಲಿಯೂ ಅಧಿಕಾರಕ್ಕೆ ಬಂದರೆ ವಾರ್ಷಿಕ ಮಹಿಳೆಯರಿಗೆ ಒಂದು ಲಕ್ಷ ರೂ ನೀಡುವುದು ಸೇರಿದಂತೆ 25 ಗ್ಯಾರೆಂಟಿ ನೀಡಿದೆ. ಈ ದೇಶದಲ್ಲಿ ಜಾತಿ, ಧರ್ಮ ಸಂಘರ್ಷ ಇಲ್ಲದೆ ಸಹಬಾಳ್ವೆಯ ಜೀವನಕ್ಕೆ ಕಾಂಗ್ರೆಸ್ ಮಾತ್ರ ಉತ್ತಮ ಆಡಳಿತ ನೀಡಲಿದ್ದು ಎಲ್ಲರೂ ಕಾಂಗ್ರೆಸ್ ಗೆ ಮತ ನೀಡಬೇಕು ಎಂದರು.
ಈ ವೇಳೆ ಪಕ್ಷದ  ಮುಖಂಡರುಗಳಾದ ಸುರೇಶ್, ಅಬ್ದುಲ್ ಬರಿಸಾಬ್, ವಲೀಸಾಬ್ ,ಶ್ರೀನಿವಾಸುಲು ಮತ್ತು ನಾಯ್ಡು ಮತ್ತಿತರರು ಇದ್ದರು.