ಆಕರ್ಷಣೆ ಹೆಚ್ಚಿಸಿದ ವೈವಿಧ್ಯಮಯ ವಿಶೇಷ ಮತಗಟ್ಟೆಗಳು: ಜಿಲ್ಲಾಧಿಕಾರಿ ಶಿಲ್ಪಾನಾಗ್ ಭೇಟಿ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಏ.26- ಮತದಾರರನ್ನು ಮತಗಟ್ಟೆಗಳ ಕಡೆಗೆ ಸೆಳೆಯಲು ಜಿಲ್ಲಾ ಸ್ವೀಪ್ ಸಮಿತಿಯು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲೆಯಾದ್ಯಂತ ಸ್ಥಾಪಿಸಲಾಗಿರುವ ವಿಶೇಷ ಮತಗಟ್ಟೆಗಳು ವೈವಿಧ್ಯಮಯ ಆಕರ್ಷಣೆಯನ್ನು ಹೆಚ್ಚಿಸಿಕೊಂಡಿದ್ದು, ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಾದ ಶಿಲ್ಪಾನಾಗ್ ಅವರು ವಿಶೇಷ ಮತಗಟ್ಟೆಗಳಿಗೆ ಭೇಟಿ ನೀಡಿ, ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯ ನಿರ್ವಾಹಕ ಅಧಿಕಾರಿಆನಂದ್ ಪ್ರಕಾಶ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು, ಜಿಲ್ಲಾ ಸ್ವೀಪ್ ನೋಡಲ್‍ಅಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಪಿ. ಲಕ್ಷ್ಮೀ, ತಾಲೂಕು ಪಂಚಾಯಿತಿಕಾರ್ಯನಿರ್ವಾಹಕಅಧಿಕಾರಿಕೃಷ್ಣಪ್ಪ ಅವರುಗಳು ವಿಶೇಷ ಮತಗಟ್ಟೆ ವೀಕ್ಷಣೆ ಸಮಯದಲ್ಲಿ ಜಿಲ್ಲಾಧಿಕಾರಿಗಳಿಗೆ ಸಾಥ್ ನೀಡಿದರು.
ನಗರದರಾಮಸಮುದ್ರ ಬಡಾವಣೆಯ ಬಾಲರಪಟ್ಟಣ ಶಾಲೆಯ ಎದುರು ಇರುವ ಸರ್ಕಾರಿ ಶಾಲೆಯ ಮತಗಟ್ಟೆಯಲ್ಲಿ ಸ್ಥಾಪಿಸಲಾಗಿರುವ ಸಾಂಪ್ರಾದಾಯಿಕ ಮತಗಟ್ಟೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳಾದ ಶಿಲ್ಪಾ ನಾಗ್ ಅವರ ತಂಡಕ್ಕೆ ಅದ್ದೂರಿ ಸ್ವಾಗತದೊರೆಯಿತು. ಮತಗಟ್ಟೆಯನ್ನು ತಳಿರು, ತೋರಣಗಳು ಹಾಗೂ ರಂಗೋಲಿ ಚಿತ್ತಾರದಿಂದ ಸಿಂಗರಿಸಲಾಗಿತ್ತು. ಜಾನಪದಕಲಾವಿದರು ಸಿದ್ದಪ್ಪಾಜಿ, ಮಂಟೇಸ್ವಾಮಿ ಪದಗಳನ್ನು ಹಾಡುವ ಮೂಲಕ ಗಣ್ಯರನ್ನು ಸ್ವಾಗತಿಸಿದರು.
ಸಾಂಪ್ರಾದಾಯಿಕ ಮತಗಟ್ಟೆಯಲ್ಲಿ ಕಲಾವಿದರು ಬಳಸುವ ಡೊಳ್ಳು, ತಮಟೆ, ನಗಾರಿ ವಾಲಗ, ಹಾರ್ಮೋನಿಯಂ, ಇತರೆ ವಾದ್ಯ ಪರಿಕರಗಳನ್ನು ಇಡಲಾಗಿತ್ತು. ಸಾಂಪ್ರಾದಾಯಿಕವಾಗಿ ಹಿಂದಿನ ಕಾಲದಲ್ಲಿ ಬಳಸಲಾಗುತ್ತಿದ್ದ ಶಾವಿಗೆ ಒತ್ತುವ ಮರದಯಂತ್ರ, ರಾಗಿ ಬೀಸುವ ಕಲ್ಲು, ಕುಟ್ಟಣಿಗೆ, ಬಿದಿರಿನ ಕುಕ್ಕೆ, ಮೊರ, ಒಳ್ಳುಕಲ್ಲು, ಧಾನ್ಯಗಳನ್ನು ಅಳತೆ ಮಾಡುವ ಸೇರು, ಪಾವು, ಚಟಾಕು, ಒಂದ್ರಿ, ಅಡುಗೆ ಮಾಡುವ ವಿವಿಧಗಾತ್ರದ ಮಡಕೆಗಳು, ಹಸೆಮಣೆ ಸೇರಿದಂತೆ ಇನ್ನಿತರೆ ಪರಿಕರಗಳನ್ನು ವೀಕ್ಷಿಸಿದ ಜಿಲ್ಲಾಧಿಕಾರಿಯವರು ಮತಗಟ್ಟೆ ಸ್ಥಾಪನೆಗೆ ಮೆಚ್ಚುಗೆ ಸೂಚಿಸಿದರು.
ಬಳಿಕ ಹರದನಹಳ್ಳಿಯ ಶಾಲೆಯಲ್ಲಿತೆರೆಯಲಾಗಿರುವಯುವಸೌರಭ ಮತಗಟ್ಟೆಗೆ ಜಿಲ್ಲಾಧಿಕಾರಿಗಳು ಭೇಟಿ ನೀಡಿದರು. ಅಲ್ಲಿಯೂ ಸಹ ಮತಗಟ್ಟೆಯನ್ನುರಂಗೋಲಿ, ತಳಿರು, ತೋರಣ ಹಾಗೂ ವಿವಿಧ ಬಗೆಯ ಹೂ ಗಳಿಂದ ಸಿಂಗರಿಸಲಾಗಿತ್ತು. ಮತಗಟ್ಟೆಯ ವ್ಯವಸ್ಥೆಗಳನ್ನು ಸಂಪೂರ್ಣವಾಗಿ ವೀಕ್ಷಿಸಿದ ಜಿಲ್ಲಾಧಿಕಾರಿಗಳು ಅಲ್ಲಿನ ಸಿದ್ದತೆಗಳನ್ನು ಪರೀಶೀಲಿಸಿದರು. ಬಳಿಕ ಅಲ್ಲಿಯೇಇದ್ದಯುವ ಮತದಾರರನ್ನುಕುಶಲೋಪರಿ ವಿಚಾರಿಸಿ ಮಾತನಾಡಿಸಿದರು. ಮೊದಲ ಬಾರಿ ಮತದಾನ ಮಾಡುತ್ತಿರುವ ಒಂದಿಬ್ಬರುಯುವ ಮತದಾರರನ್ನುಕಡ್ಡಾಯವಾಗಿ ಮತದಾನ ಹಾಗೂ ನೈತಿಕ ಮತದಾನ ಬೆಂಬಲಿಸುವಂತೆ ಪ್ರೇರೇಪಿಸಿದರು.
ಲೋಕಸಭಾ ಸಾರ್ವತ್ರಿಕ ಚುನಾವಣೆ-2024ರ ಸಂಬಂಧ 22-ಚಾಮರಾಜನಗರ (ಪ.ಜಾ) ಲೋಕಸಭಾಕ್ಷೇತ್ರವ್ಯಾಪ್ತಿಯಲ್ಲಿ ಈ ಬಾರಿ ಮತದಾನದ ಪ್ರಮಾಣವನ್ನು ಹೆಚ್ಚಿಸುವ ಸಲುವಾಗಿ ಜಿಲ್ಲಾ ಸ್ವೀಪ್ ಸಮಿತಿಯು ವಿಶೇಷ ಕಾಳಜಿ ವಹಿಸಿ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ವಿಶಿಷ್ಟ, ವಿಭಿನ್ನ ಹಾಗೂ ವಿನೂತನ ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಅದರ ಭಾಗವಾಗಿ ವಿಶೇಷ ಮತಗಟ್ಟೆಗಳ ಸ್ಥಾಪನೆಯುಒಂದಾಗಿದೆ.
ಕಳೆದ ಬಾರಿ 2019ರ ಚಾಮರಾಜನಗರ ಲೋಕಸಭಾ ಚುನಾವಣೆಯಲ್ಲಿ ಶೇ. 75.22 ರಷ್ಟು ಮತದಾನವಾಗಿತ್ತು. ಪ್ರಸ್ತುತ ಈ ಬಾರಿಯ ಚುನಾವಣೆಯಲ್ಲಿ ಶೇ. 90ಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಮತದಾನವಾಗುವಂತೆ ಮತದಾರರನ್ನು ಪ್ರೇರೇಪಿಸಲು ಜಿಲ್ಲಾ ಸ್ವೀಪ್ ಸಮಿತಿ ಹತ್ತು-ಹಲವಾರು ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅಲ್ಲದೆ ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಿ ಮತದಾರರನ್ನು ಆಕರ್ಷಿಸುವ ಹಾದಿಯಲ್ಲಿ ಮುನ್ನೆಡೆದಿದೆ. ಈ ಮತದಾನ ಜಾಗೃತಿ ಕಾರ್ಯಕ್ರಮಗಳಿಗೆ ಜಿಲ್ಲಾಡಳಿತವು ಸಹ ಅಗತ್ಯ ಸಹಕಾರ ನೀಡಿದೆ.
ಜಿಲ್ಲೆಯಲ್ಲಿ 18 ವರ್ಷ ತುಂಬಿದ ನೂತನ ಯುವ ಮತದಾರರಲ್ಲಿ ಮತದಾನದ ಜಾಗೃತಿ ಮೂಡಿಸಲು ಯುವ ಸೌರಭ ಮತಗಟ್ಟೆಗಳು, ಮಹಿಳೆಯರನ್ನು ಮತದಾನಕ್ಕಾಗಿ ಪ್ರೇರೇಪಿಸಲು ಸಖಿಸೌರಭ ಮತಗಟ್ಟೆಗಳು, ದೇಶದ ಬೆನ್ನುಲುಬಾದರೈತರನ್ನು ಮತಗಟ್ಟೆಗೆ ಸೆಳೆಯಲು ಅನ್ನದಾತರ ಮತಗಟ್ಟೆಗಳು, ಜಾನಪದ ಹಾಗೂ ಸಾಂಸ್ಕøತಿಕ ಕಲೆಗಳ ಮಹತ್ವ ಸಾರುವ ಸಾಂಪ್ರಾದಾಯಿಕ ಮತಗಟ್ಟೆಗಳು, ಜಿಲ್ಲೆಯಲ್ಲಿ ಶೇ. 54ರಷ್ಟು ಅರಣ್ಯ ಪ್ರದೇಶವಿದ್ದು, ಅರಣ್ಯದಕುರಿತುಅರಿವು ಮೂಡಿಸುವ ಹಸಿರು ಮತಗಟ್ಟೆಗಳು, ಬುಡಕಟ್ಟುಜನರಿಗೆ ಮತದಾನದ ಪ್ರಾಮುಖ್ಯತೆ ತಿಳಿಸಲು ಬುಡಕಟ್ಟು ಮತಗಟ್ಟೆಗಳು, ವಿಶೇಷಚೇತನರನ್ನುಅಗತ್ಯ ಸೌಲಭ್ಯ ಕಲ್ಪಿಸಿ ಮುಖ್ಯವಾಹಿನಿಗೆ ತರುವ ಸಲುವಾಗಿ ವಿಶೇಷಚೇತನರ ಮತಗಟ್ಟೆಗಳನ್ನು ಜಿಲ್ಲೆಯ ಹಲವು ಗ್ರಾಮ ಪಂಚಾಯಿತಿಗಳಲ್ಲಿ ಸ್ಥಾಪಿಸಲಾಗಿದೆ.
ಜಿಲ್ಲಾಧಿಕಾರಿಯವರ ವಿಶೇಷ ಮತಗಟ್ಟೆ ವೀಕ್ಷಣೆ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ನಗರಸಭೆ ಪೌರಾಯುಕ್ತ ಎಸ್.ವಿ. ರಾಮದಾಸ್, ಹಿರಿಯ ಆರೋಗ್ಯ ನಿರೀಕ್ಷಕ ಮಂಜುನಾಥ್, ಪರಿಸರ ಅಭಿಯಂತರÀ ಗಿರಿಜಮ್ಮ, ಇತರರು ಇದ್ದರು.