ಬಂದು ಮತದಾನ ಮಾಡಿದ ವರ ತಾಳಿ ಕಟ್ಟುವ ಮುನ್ನ ಓಡೋಡಿ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಏ.26- ತಾಳಿ ಕಟ್ಟುವ ಮುನ್ನ ಓಡೋಡಿ ಬಂದು ವರ ಮತದಾನ ಮಾಡಿದ ಘಟನೆ ಚಾಮರಾಜನಗರ ತಾಲೂಕಿನ ಸಂತೇಮರಳ್ಳಿಯಲ್ಲಿ ನಡೆದಿದೆ.
ವಿವಾಹಕ್ಕೂ ಮೊದಲು ವರ ಚೇತನ್ ಮತಗಟ್ಟೆ ಸಂಖ್ಯೆ 60ರಲ್ಲಿ ಮತದಾನ ಮಾಡಿ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಇಂದು ದೀಪಿಕಾ ಎಂಬ ವಧು ಜೊತೆ ವರ ಚೇತನ್ ಅವರ ವಿವಾಹ ನಿಗದಿಯಾಗಿತ್ತು. 9 ಗಂಟೆಗೆ ಧಾರಾ ಮುಹೂರ್ತ ಇದ್ದ ಹಿನ್ನೆಲೆ ಅದಕ್ಕೂ ಮೊದಲು ವರ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದ್ದಾರೆ.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಚೇತನ್, ನನ್ನ ಹಕ್ಕನ್ನು ನಾನು ಚಲಾಯಿಸಲು ಬಂದಿದ್ದೇನೆ. ಮತದಾನ ನಮ್ಮೆಲ್ಲರ ಆದ್ಯ ಕರ್ತವ್ಯ. ಯಾರೂ ಕೂಡ ಮತದಾನದಿಂದ ವಂಚಿತರಾಗಬಾರದು. ತಾಳಿ ಕಟ್ಟುವ ಮುನ್ನ ಬಂದು ಮತದಾನ ಮಾಡಿ ನನ್ನ ಹಕ್ಕು ಚಲಾಯಿಸಿದ್ದೇನೆ ಎಂದರು.