ಕೊಲೆಗಡುಕನಿಗೆ ಗಲ್ಲು ಶಿಕ್ಷೆ ವಿಧಿಸಿ
ಗುಳೇದಗುಡ್ಡ,ಏ.26: ಹುಬ್ಬಳ್ಳಿಯ ಕಾಲೇಜಿನಲ್ಲಿ ಹಾಡುಹಗಲು ವಿದ್ಯಾರ್ಥಿನಿ ನೇಹಾ ಹಿರೇಮಠ ಅವರನ್ನು ಬರ್ಬರವಾಗಿ ಕೊಲೆ ಮಾಡಿದ್ದು ಅತ್ಯಂತ ಖಂಡನೀಯ. ಸರ್ಕಾರ ಇಂಥಹ ಹೀನ ಕೃತ್ಯ ತಡೆಯಲು ಕ್ರಮಕೈಗೊಳ್ಳುತ್ತಿಲ್ಲ. ಕೊಲೆ ಮಾಡಿದ ಆರೋಪಿUಸರ್ಕಾರ É ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಮಾಜಿ ಶಾಸಕ ರಾಜಶೇಖರ ಶೀಲವಂತ ಸರ್ಕಾರಕ್ಕೆ ಆಗ್ರಹಿಸಿದರು.
ಅವರು ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಖಂಡಿಸಿ ಪಟ್ಟಣದ ಪುರಸಭೆ ಹತ್ತಿರ ಶ್ರೀರಾಮಸೇನೆಯ ತಾಲೂಕು ಘಟಕದ ವತಿಯಿಂದ ಪ್ರತಿಭಟನೆ ನಡೆಸಿ, ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿ, ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಸರ್ಕಾರ ಓಲೈಕೆ ರಾಜಕಾರಣ ಮಾಡುತ್ತಿದೆ. ಸರ್ಕಾರ ಆರೋಪಿತನಿಗೆ ಕೂಡಲೇ ಕಠಿಣ ಶಿಕ್ಷೆ ವಿಧಿಸಿ, ನೇಹಾಳಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಭುವನೇಶ ಪೂಜಾರ, ಮುರಗೇಶ ರಾಜನಾಳ, ಕಮಲಕಿಶೋರ ಮಾಲಪಾಣಿ, ವಸಂತಸಾ ಧೋಂಗಡೆ, ಭಾಗ್ಯಾ ಉದ್ನೂರ, ಸವಿತಾ ಉಂಕಿ, ಶ್ರೀಕಾಂತ ಭಾವಿ, ರಾಜು ಗೌಡರ, ರಾಜು ಚಿಕ್ಕನರಗುಂದ ಮತ್ತಿತರರು ಇದ್ದರು.