ಮಹಿಳೆಯರ ಮೇಲೆ ದೌರ್ಜನ್ಯ ಮತ್ತು ಅತ್ಯಾಚಾರ ಖಂಡಿಸಿ ಪಂಜಿನÀ ಮೆರವಣಿಗೆ
ಸಂಜೆವಾಣಿ ವಾರ್ತೆ,
ವಿಜಯಪುರ,ಏ.26:ನಗರ ಸ್ಲಂ ಮಹಿಳಾ ಸ್ವ-ಸಹಾಯ ಸಂಘಗಳ ಒಕ್ಕೂಟ(ರಿ), ವಿಜಯಪುರ ನಗರ ಸ್ಲಂ ಅಭಿವೃದ್ಧಿ ಸವಿತಿ ಒಕ್ಕೂಟ(ರಿ), ವಿಜಯಪುರ ನಗರ ಗೃಹ ಕಾರ್ಮಿಕರ ಯೂನಿಯನ(ರಿ), ವಿಜಯಪುರ ನಗರ ಅಸಂಘಟಿತ ಯುವತಿಯರ ಒಕ್ಕೂಟ, ಪ್ರಗತಿಪರ ಸಂಘಟನೆಗಳ ಒಕ್ಕೂಟ ಇವರ ಸಹಯೋಗದಲ್ಲಿ ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ಹಾಗೂ ಕೂಲೆ ನಡೆಯುತ್ತಿರುವುದನ್ನು ಖಂಡಿಸಿ ಪಂಜಿನ ಮೆರವಣಿಗೆ ನಡೆಸಲಲಾಯಿತು.
ನಗರದ ಅಂಬೇಡ್ಕರÀ ವೃತ್ತದಿಂದಿ ಗಾಂಧಿ ವೃತ್ತದ ವರೆಗೆ 200 ಮಹಿಳೆಯರು ಸೇರಿ [ಪÀಂಜಿನ ಮೆರವಣಿಗೆಯ ಮೂಲಕ ದುಷ್ಕÀರ್ಮಿಗಳನ್ನು ಕಠಿಣ ಶಿಕ್ಷೆಗೆ ಒಳಪಡಿಸಿ ಎಂದು ಸರ್ಕಾರಕ್ಕೆÀ ಒತ್ತಾಯಿಸಿದರು.
ಈ ಸಂದರ್ಭಲ್ಲಿ ನಿರ್ಮಲಾ ಹೂಸಮನಿ ಅವರು ಮಾತನಾಡಿ, ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡುವುದು ಹೆಚ್ಚಾಗಿದೆ. ಆದ್ದರಿಂದ ಅಂತಹ ದಷ್ಕÀರ್ಮಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ನ್ಯಾಯವಾದಿ ಶ್ರೀನಾಥ ಪೂಜಾರಿ ಮಾತನಾಡಿ, ಹೆಣ್ಣು ಮಕ್ಕಳ ಮೇಲೆ ದËರ್ಜನ್ಯ ನಡೆಸುವವರನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆಗೆ ಗುರಿಪಡಿಸಿ ಇಂಥ ಘಟನೆಗಳು ಪುನರಾವರ್ತನೆ ಆಗದಂತೆ ತಡೆಯಬೇಕು. ಇಂಥ ದುಷ್ಟರಿಗೆ ಸಾರ್ವಜನಿಕವಾಗಿ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಅಕ್ರಂ ಮಾಶ್ಯಾಳಕರ, ಸಿ.ಎ. ಘಂಟೆಪ್ಪಗೂಳ, ಅಬ್ದುಲ್ ಕದಿರ, ರಾಜೇಶ್ವರಿ ಮಠಪತಿ, ಮೀನಾಕ್ಷಿ ಕಾಲೆಬಾಗ, ಶೋಭಾ ಗಾಯಕವಾಡ, ಯಲ್ಲವ್ವ ಗಢೆಕರ, ಶಬೀರ ಕಾಗಜಕೊಟಿ, ವಿಜಯ ಕುಮಾರ, ಕುಸಮಾ ಬಡಿಗೇರ, ಖತಿಜಾ ಹೆಬ್ಬಾಳ, ಜಿ.ಜಿ. ಗಾಂಧಿ ಮುಂತಾದ ಪ್ರಮುಖರು ಸೇರಿದಂತೆ ವಿವಿಧ ಸ್ಲಂಗಳಿಂದ ಸ್ವ-ಸಹಾಯ ಸಂಘಗಳಿಂದ 200 ಸದಸ್ಯರು ಭಾಗವಹಿಸಿದ್ದರು.