ಅಕ್ಕ ಮಹಾದೇವಿ ಜಯಂತಿ ಆಚರಣೆ
ಬೀದರ್:ಏ.26: ಅಕ್ಕ ಮಹಾದೇವಿ ಜಯಂತಿಯನ್ನು ರಾಷ್ಟ್ರೀಯ ಬಸವ ದಳದ ಜಿಲ್ಲಾ ಘಟಕ ಹಾಗೂ ಜಿಲ್ಲಾ ಲಿಂಗಾಯತ ಸಮಾಜ ವತಿಯಿಂದ ಇಲ್ಲಿಯ ಬಸವ ಮಂಟಪದಲ್ಲಿ ಸಂಭ್ರಮ, ಸಡಗರದಿಂದ ಆಚರಿಸಲಾಯಿತು.
ಅಕ್ಕ ಮಹಾದೇವಿ ತೊಟ್ಟಿಲು, ಉಪನ್ಯಾಸ ಮತ್ತಿತರ ಕಾರ್ಯಕ್ರಮ ನಡೆದವು.
ಪಾರ್ವತಿ ಪುಂಡಲೀಕರಾವ್ ಗೌಡಗಾಂವ್ ಗುರು ಪೂಜೆ, ಸುಮಾಶ್ರೀ ವಿವೇಕಾನಂದ ಧನ್ನೂರ ಷಟಸ್ಥಲ ಧ್ವಜಾರೋಹಣ ನೆರವೇರಿಸಿದರು.
ಲಕ್ಷ್ಮಿ ಗುರುನಾಥ ಬಿರಾದಾರ, ಲಿಂಗಾರತಿ ಅಲ್ಲಮಪ್ರಭು ನಾವದಗೆರೆ ಮಾತನಾಡಿದರು. ಡಾ. ಶಾಂತಾಬಾಯಿ ಸೂರ್ಯಕಾಂತ ಬಿರಾದಾರ ಅವರನ್ನು ಸನ್ಮಾನಿಸಲಾಯಿತು.
ವಿದ್ಯಾವತಿ ಕುಶಾಲರಾವ್ ಪಾಟೀಲ ಖಾಜಾಪುರ ನೇತೃತ್ವ ವಹಿಸಿದ್ದರು. ದಾಸೋಹಿ ಸುನೀತಾ ಸಂಜುಕುಮಾರ ಪಾಟೀಲ ಕೌಡಗಾಂವ್, ನರಸಮ್ಮ ಪಾಟೀಲ ಇದ್ದರು.
ಸುಲೋಚನಾ ವಿವೇಕ ಪಟ್ನೆ ಪ್ರಾರ್ಥನೆ ನಡೆಸಿಕೊಟ್ಟರು. ಸುಮಾ ರಾಜಕುಮಾರ ಕಮಠಾಣೆ ಸ್ವಾಗತಿಸಿದರು. ಕಲ್ಪನಾ ಮಲ್ಲಿಕಾರ್ಜುನ ಸಾವಳೆ ನಿರೂಪಿಸಿದರು.